ಬೆಂಗಳೂರಿನ ಮೇಲೆ 14 ಶಾಸಕರ ಕಣ್ಣು: ಯಡಿಯೂರಪ್ಪ ಮುಂದಿದೆ ದೊಡ್ಡ ಸವಾಲು 

ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದ ಮೇಲೆ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮುಂದೆ ದೊಡ್ಡ ಸವಾಲು ಇದೆ, ಬೆಂಗಳೂರು ನಗರಾಭಿವೃದ್ಧಿ ಖಾತ ಮೇಲೆ ಸುಮಾರು 6 ಶಾಸಕರು ಕಣ್ಣಿಟ್ಟಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದ ಮೇಲೆ  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮುಂದೆ ದೊಡ್ಡ ಸವಾಲು ಇದೆ, ಬೆಂಗಳೂರು ನಗರಾಭಿವೃದ್ಧಿ ಖಾತ ಮೇಲೆ ಸುಮಾರು 6 ಶಾಸಕರು ಕಣ್ಣಿಟ್ಟಿದ್ದಾರೆ.

2018ರ ಚುನಾವಣೆ ಚುನಾವಣೆಯಲ್ಲಿ ಬಿಜೆಪಿ 11 ಶಾಸಕರು ಬಿಜೆಪಿ ಗೆದ್ದಿದ್ದರು. ಸೋಮವಾರ ಬಂದ ಫಲಿತಾಂಶದಿಂದಾಗಿ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಂಖ್ಯೆ 14 ಆಗಿದೆ.  ಮೊದಲು ಯಡಿಯೂರಪ್ಪಅವರು ಪ್ರಮಾಣ ವಚನ ಸ್ವೀಕರಿಸಿದಾಗ  17 ಮಂದಿ ಸಚಿವರನ್ನು  ಸಂಪುಟಕ್ಕೆ ಸೇರಿಸಿಕೊಂಡಿದ್ದರು.  ಇದರಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ್ , ಆರ್. ಅಶೋಕ್ , ವಿ ಸೋಮಣ್ಣ ಹಾಗೂ ಸುರೇಶ್ ಕುಮಾರ್ ಸಂಪುಟ ಸೇರಿದ್ದರು

ಕೆ.ಆರ್ ಪುರಂ  ನ ಬೈರತಿ ಬಸವರಾಜ್ ಹಾಗೂ ಮಹಾಲಕ್ಷ್ಮಿ ಲೇಔಟ್  ಗೋಪಾಲಯ್ಯ ಅತಿ ಹೆಚ್ಚಿನ ಮತ ಪಡೆದು ಗೆದ್ದಿದ್ದರು.  ಈ ಇಬ್ಬರೂ  ಬೆಂಗಳೂರು ನಗರಾಭಿವೃದ್ಧಿ ಖಾತೆಗಾಗಿ ಲಾಬಿ ನಡೆಸಿದ್ದಾರೆ.  

ನಾನು ಬೆಂಗಳೂರಿನ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದೇನೆ, ಕೆಆರ್ ಪುರಂ ನಲ್ಲಿ ಪಂಚಾಯತ್ ನಿಂದ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ನಂತರ ಬಿಬಿಎಂಪಿ ಕೌನ್ಸಿಲರ್ ಆಗಿದ್ದವರು, ಅದಾದ ನಂತರ ಶಾಸಕರಾಗಿ ಆಯ್ಕೆಯಾಗಿದ್ದರು,  ಇನ್ನೂ ಗೋಪಾಲಯ್ಯ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ.

ನಾನು ಮಹಾಲಕ್ಷ್ಮಿ ಲೇಔಟ್ ನ ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದೇನೆ, ಒಂದು ವೇಳೆ ನನಗೆ ಅವಕಾಶ ನೀಡಿದರೇ ನನ್ನ ನಗರಕ್ಕಾಗಿ ಉತ್ತಮವಾದದ್ದನ್ನು ಮಾಡುತ್ತೇನೆ,  ಎಂದು ಹೇಳಿದ್ದಾರೆ, ಎಸ್ ಟಿ ಸೋಮಶೇಖರ್ ಕೂಡ ಇದೇ ಖಾತೆ ಮೇಲೆ ಕಣ್ಣಿಟ್ಟದ್ದಾರೆ.

ಮೂಲಗಳ ಪ್ರಕಾರ ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ,  ಒಂದು ವೇಳೆ ಲಿಂಬಾವಳಿ ಅವರನ್ನು ಸೇರಿಸಿಕೊಂಡರೇ ಬೆಂಗಳೂರಿನ  ಶಾಸಕರು 8 ಮಂದಿ ಸಚಿವರಾಗಲಿದ್ದಾರೆ, ಡಿಸಿಎಂ ಅಶ್ವತ್ಥ ನಾರಾಯಣ, ಆರ್.ಅಶೋಕ್ ಮತ್ತು ಲಿಂಬಾವಳಿ ಸೇರಿ ಆರು ಮಂದಿ  ರೇಸ್ ನಲ್ಲಿದ್ದಾರೆ,  ಸದ್ಯ ನಗರಾಭಿವೃದ್ಧಿ ಖಾತೆ ಸಿಎಂ ಬಳಿಯೇ ಇದೆ. ಜೊತೆಗೆ ನಗರಾಭಿವೃದ್ಧಿ ಖಾತೆ ಹಂಚಿಕೆ ಯಡಿಯೂರಪ್ಪ ಅವರಿಗೆ ದೊಡ್ಡ ಸವಾಲಾಗಿದೆ.

2008 ರಲ್ಲಿ ಯಡಿಯೂರಪ್ಪ ನಗರಾಭಿವೃದ್ಧಿ ಖಾತೆ ಹೊಂದಿದ್ದರು,  ಹಾಗೂ ಆರ್. ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ನೀಡಿದ್ದರು,  ಈ ಬಾರಿ ಬಂಡಾಯಗಾರರ ಕೋಪ ಶಮನ ಮಾಡಲು ಅದೇ ಅಸ್ತ್ರ ಬಳಸಲಿದ್ದಾರೆ ಎನ್ನಲಾಗುತ್ತಿದೆ, ಆದರೇ ಈ ಬಾರಿ ಪರಿಸ್ಥಿತಿ ತೀರಾ  ಸೂಕ್ಷ್ಮವಾಗಿದೆ,.  ಹೊಸ ಶಾಸಕರಿಗೆ ಈ ಹುದ್ದೆ ನೀಡಿದರೇ ಪರಿಸ್ಥಿತಿ ಮತ್ತಷ್ಟು ಹಾಳಾಗಬಹುದು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com