ನಾನು 420, ನಿಮ್ಮ ಮಗ ಸೂಟ್‌ ಕೇಸ್ ಪಾರ್ಟಿ: ರೇವಣ್ಣಗೆ ರೇಣುಕಾಚಾರ್ಯ ಟಾಂಗ್

ತಾವು "420" ಆಗಿರಬಹುದು. ಆದರೆ ನಿಮ್ಮ ಪುತ್ರ ಪ್ರಜ್ವಲ್ ರೇವಣ್ಣ, ಜೆಡಿಎಸ್ ಸೂಟ್‌ ಕೇಸ್ ಪಾರ್ಟಿ ಎಂದು ಹೇಳಿದ್ದರು, ಅದಾದ ಬಳಿಕ ಅವರನ್ನು ...

Published: 12th February 2019 12:00 PM  |   Last Updated: 12th February 2019 03:49 AM   |  A+A-


Renukacharya And H.D Revanna(File image)

ರೇವಣ್ಣ ಮತ್ತು ರೇಣುಕಾಚಾರ್ಯ (ಸಂಗ್ರಹ ಚಿತ್ರ)

Posted By : SD SD
Source : UNI
ಬೆಂಗಳೂರು: ತಾವು "420" ಆಗಿರಬಹುದು. ಆದರೆ ನಿಮ್ಮ ಪುತ್ರ ಪ್ರಜ್ವಲ್ ರೇವಣ್ಣ, ಜೆಡಿಎಸ್ ಸೂಟ್‌ ಕೇಸ್ ಪಾರ್ಟಿ ಎಂದು ಹೇಳಿದ್ದರು, ಅದಾದ ಬಳಿಕ ಅವರನ್ನು ಜನತಾ ದಳ ಪ್ರಧಾನ ಕಾರ್ಯದರ್ಶಿಯಾಗಿ ಮಾಡಲಾಯಿತು. ಅವರ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಾ ಎಂದು ಶಾಸಕ ರೇಣುಕಾಚಾರ್ಯ ಲೋಕೋಪಯೋಗಿ ಸಚಿವ  ಎಚ್ ಡಿ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ,ಲೋಕೋಪಯೋಗಿ ಸಚಿವ ತಮ್ಮನ್ನು “420” ಎಂದು ಹೇಳುವ ಮೂಲಕ ತಮ್ಮ ಸ್ವಾಭಿಮಾನವನ್ನು ಕೆಣಕಿದ್ದಾರೆ. ಹೊನ್ನಾಳಿ ಕ್ಷೇತ್ರದ ಜನರಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಸಚಿವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಚಿವರ ಎಲ್ಲಾ ಹಗರಣಗಳನ್ನು ಬಹಿರಂಗಗೊಳಿಸಲಾಗುವುದು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಚ್ಚರಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಸುಪುತ್ರ ರೇವಣ್ಣ ಅವರು ಸತ್ಯಹರಿಶ್ಚಂದ್ರರಾಗಲಿ, ಆದರ್ಶವಾದಿಯಾಗಲಿ ಅಲ್ಲ. ಹಿರಿಯರಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಸಚಿವರಾಗಿ, ಶಾಸಕರಾಗಿ ಅನುಭವ ಹೊಂದಿರುವ ಅವರು ಈ ರೀತಿಯ ಹೇಳಿಕೆ ನೀಡಬಾರದು. ತಾವು ಸಹ ಹಳ್ಳಿಯಿಂದ ಬಂದಿದ್ದು, ತಮಗೂ ಬಾಯಿಗೆ ಬಂದಂತೆ ನಿಂದಿಸಲು ಬರುತ್ತದೆ. ಆದರೆ ರೇವಣ್ಣ ಅವರಂತೆ ನಡೆದುಕೊಳ್ಳುವುದಿಲ್ಲ  ಎಂದು ತಿರುಗೇಟು ನೀಡಿದ್ದಾರೆ.

ಅವನ್ಯಾರೋ ರೇಣುಕಾಚಾರ್ಯ 420,  ನಾನು ಯಾಕೆ ಅವನ ಮನೆಗೆ ಹೋಗಲಿ, ಅವನ ಮಾತಿಗೆಲ್ಲಾ ನಾನು ಏಕೆ ಉತ್ತರಿಸಲಿ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವಿರುದ್ಧ ಲೋಕೋಪಯೊಗಿ ಸಚಿವ ಎಚ್.ಡಿ. ರೇವಣ್ಣ  ನಿನ್ನೆ ಮಾಧ್ಯಮಗಳ ಮುಂದೆ ಕಿಡಿಕಾರಿದ್ದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp