'ಕೈ'ಗೆ ಮತ್ತೆ ಸಂಕಷ್ಟ: ಮೈಸೂರು ಜಿ.ಪಂ.ನಲ್ಲಿ ಬಿಜೆಪಿ-ಜೆಡಿಎಸ್‍ ಮೈತ್ರಿ ಮುಂದುವರಿಕೆ: ಜಿಟಿ ದೇವೇಗೌಡ

ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಸದ್ಯಕ್ಕೆ ಇದನ್ನು ಬದಲಾಯಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ...
ಬಿಜೆಪಿ-ಜೆಡಿಎಸ್
ಬಿಜೆಪಿ-ಜೆಡಿಎಸ್
ಮೈಸೂರು: ಮೈಸೂರು ಜಿಲ್ಲಾ ಪಂಚಾಯತ್‍ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ  ಮುಂದುವರಿಯಲಿದೆ. ಸದ್ಯಕ್ಕೆ ಇದನ್ನು ಬದಲಾಯಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಸ್ಪಷ್ಟಪಡಿಸುವುದರೊಂದಿಗೆ ಕಾಂಗ್ರೆಸ್‍ ನಿರೀಕ್ಷೆಗಳು ಹುಸಿಯಾಗಿವೆ. 
ಜಿ.ಟಿ.ದೇವೇಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಮೈತ್ರಿ ಮುಂದುವರಿಸಲು ನಿರ್ಧರಿಸಲಾಗಿದೆ. ಪಕ್ಷದ ಸದಸ್ಯರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರವನ್ನು ಇಂದು ತೆಗೆದುಕೊಂಡಿಲ್ಲ. ಈ ಹಿಂದೆಯೇ ತೀರ್ಮಾನವನ್ನು ತೆಗೆದುಕೊಳ್ಳಲಾಗಿತ್ತು. ಜೆಡಿಎಸ್‍ ಸದಸ್ಯರು ಬಿಜೆಪಿ ಜೊತೆಗಿನ ಮೈತ್ರಿಯ ಪರವಾಗಿ ಒಲವು ತೋರಿದ್ದಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮೈತ್ರಿಯನ್ನು ಮುಂದುವರೆಸುವ ಕುರಿತು ಬಿಜೆಪಿಗೆ ಈಗಾಗಲೇ ಭರವಸೆ ನೀಡಿದ್ದೇವೆ ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. 
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮಾತನಾಡಿ, 'ಈ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಕಾರ್ಯಕರ್ತರ ತೀರ್ಮಾನದಂತೆ ಮೈತ್ರಿ ಮುಂದುವರಿಕೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಹಂತದಲ್ಲಿ ಪಕ್ಷದ ನಿರ್ಧಾರವನ್ನು ಬದಲಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ. 
ಪ್ರಮುಖ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದ  ಕಾಂಗ್ರೆಸ್‍ಗೆ ಇದು ಅನಿರೀಕ್ಷಿತ ಹೊಡೆತವಾಗಿ ಪರಿಣಮಿಸಿದೆ.  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ದಿನಗಳ ಹಿಂದೆ ಜೆಡಿಎಸ್‍ ಜೊತೆಗಿನ ಒಪ್ಪಂದದ ಬಗ್ಗೆ  ಸುಳಿವು ನೀಡಿದ್ದರು. ಇತ್ತೀಚಿನ ಬೆಳವಣಿಗಗಳ ನಂತರ ಕಾಂಗ್ರೆಸ್‍ನ ಮುಂದಿನ ನಡೆ ಕುತೂಹಲಕಾರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com