ಮಂಡ್ಯ ಜೆಡಿಎಸ್ ತೆಕ್ಕೆಯಲ್ಲಿದೆ, ಸುಮಲತಾ ಅವರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ: ಸಿಎಸ್ ಪುಟ್ಟರಾಜು

ಮಂಡ್ಯ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಹಾಗೂ ಮೂವರು ಸಚಿವರಿದ್ದಾರೆ, ಹೀಗಾಗಿ .ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ...

Published: 22nd February 2019 12:00 PM  |   Last Updated: 22nd February 2019 02:49 AM   |  A+A-


CS Puttaraju And Sumalatha

ಸಿ,ಎಸ್ ಪುಟ್ಟರಾಜು ಮತ್ತು ಸುಮಲತಾ

Posted By : SD SD
Source : Online Desk
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಹಾಗೂ ಮೂವರು ಸಚಿವರಿದ್ದಾರೆ,  ಹೀಗಾಗಿ .ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಸುಮಲತಾ ಅವರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸುಮಲತಾ ಅಂಬರೀಷ್ ಇಂಗಿತ ವ್ಯಕ್ತ ಪಡಿಸಿದ ಬೆನ್ನಲ್ಲೇ, ಸಚಿವ ಸಿ.ಎಸ್ ಪುಟ್ಟರಾಜು ಹೇಳಿದ್ದಾರೆ. ಮಂಡ್ಯ. ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಥವಾ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುವಂತೆ ಇಲ್ಲಿನ ಜನರ ಆಸೆಯಾಗಿದೆ.

ಸೀಟು ಹಂಚಿಕೆ ವಿಚಾರವಾಗಿ, ಜೆಡಿಎಸ್ 12 ಕ್ಷೇತ್ರಗಳನ್ನು ನೀಡಬೇಕೆಂದು ಕೇಳಿದ್ದು, ಅದರಲ್ಲಿ ಮೊದಲ ಆದ್ಯತೆ ಮಂಡ್ಯ ಲೋಕಸಭೆ ಕ್ಷೇತ್ರವಾಗಿದೆ, ಮಂಡ್ಯದಲ್ಲಿ ಜೆಡಿಎಸ್ ಸಂಸದರಿದ್ದು, ಮೈತ್ರಿ ನಿಯಮದ ಪ್ರಕಾರ ಮಂಡ್ಯವನ್ನು ಜೆಡಿಎಸ್ ಗೆ ನೀಡಬೇಕಿದೆ ಎಂದು ಹೇಳಿದ್ದಾರಪೆ 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp