ಜೆಡಿಎಸ್ ಧುರೀಣ ದೇವೇಗೌಡ ಬೆಂಗಳೂರು ಉತ್ತರದಿಂದ ಸ್ಪರ್ಧೆ?

ಲೋಕಸಭೆ ಚುನಾವಣೆಗಾಗಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಇನ್ನಷ್ಟೇ ಸೀಟು ಹಂಚಿಕೆ ಸಂಬಂಧ ಮಾತುಕತೆ ಪ್ರಾರಂಭಿಸಬೇಕಿದೆ. ಆದರೆ ಈ ಕುರಿತಂತೆ....
ದೇವೇಗೌಡ
ದೇವೇಗೌಡ
ಬೆಂಗಳೂರು: ಲೋಕಸಭೆ ಚುನಾವಣೆಗಾಗಿ ಮೈತ್ರಿ ಸರ್ಕಾರದ ಅಂಗಪಕ್ಷಗಳಾದ   ಕಾಂಗ್ರೆಸ್-ಜೆಡಿಎಸ್ ಇನ್ನಷ್ಟೇ ಸೀಟು ಹಂಚಿಕೆ ಸಂಬಂಧ ಮಾತುಕತೆ ಪ್ರಾರಂಭಿಸಬೇಕಿದೆ. ಆದರೆ ಈ ಕುರಿತಂತೆ ಬಿಜೆಪಿ ಸಾಕಷ್ಟು ಕುತೂಹಲಗೊಂಡಿದ್ದು ಜೆಡಿಎಸ್ ಮುಖ್ಯಸ್ಥ ಎಚ್.ಡಿ. ದೇವೇಗೌಡ ಯಾವ ಕ್ಷೇತ್ರದಲ್ಲಿ ಲೋಕಸಭೆ ಕಣಕ್ಕಿಳಿಯಲಿದ್ದಾರೆ ಎನ್ನುವುದನ್ನು ನೋಡಿ ಕೇಸರಿ ಪಕ್ಷ ಅವರು ನಿಲ್ಲುವ ಕ್ಷೇತ್ರದ ನೆರೆಹೊರೆಯ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವನ್ನು ಕುರಿತು ಕಾರ್ಯತಂತ್ರ ಹೆಣೆಯಲಿದೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.
ಪ್ರಸ್ತುತ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಸಂಸದರಾಗಿರುಯ್ವ ಬೆಂಗಳೂರು ಉಯ್ತ್ತರ ಲೋಕಸಭಾ ಕ್ಷೇತ್ರದಿಂಡ ಮಾಜಿ ಪ್ರಧಾನಿ ದೇವೇಗೌಡ ಕಣಕ್ಕಿಳಿಯಬೇಕೆಂದು ಜೆಡಿಎಸ್ ನಾಯಕರು ಒತ್ತಾಯಿಸುತ್ತಿದ್ದಾರೆ. ಆದರೆ ದೇವೇಗೌಡರು ಆ ಸಲಹೆಯನ್ನು ಪರಿಗಣಿಸುವುದಿಲ್ಲ ಎನ್ನಲಾಗುತ್ತಿದೆ.
ಹಾಸನವನ್ನು ಉಳಿಸಿಕೊಳ್ಳುವ ಆಲೋಚನೆಯಿಂಡ ಗೌಡ ಹಿಂದೆ ಸರಿಯುವುದಿಲ್ಲ ಎಂದು ಬಿಜೆಪಿ ಭಾವಿಸಿದ್ದು ಗೌಡರು ಒಂದುವೇಳೆ ಬೆಂಗಳೂರು ಉತ್ತರ ಕ್ಷೇತ್ರ ಆಯ್ಕೆ ಮಾಡಿಕೊಂಡದ್ದಾದರೆ - ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕುರು.ಈ ಮೂರು ಕ್ಷೇತ್ರಗಳ ಮೇಲೆ ಇದು ಪ್ರಭಾವ ಬೀರುವುದು ನಿಶ್ಚಿತ ಎನ್ನಲಾಗಿದೆ.
:ಬೆಂಗಳೂರು ಉತ್ತರದಲ್ಲಿ ದೇವೇಗೌಡರು ಸ್ಪರ್ಧಿಸಿದ್ದಾದರೆ  ಕಾಂಗ್ರೆಸ್-ಜೆಡಿ (ಎಸ್) ಮೈತ್ರಿಕೂಟಪರವಾಗಿ ಗಿ ಜಾತಿ ಸಮೀಕರಣ ಕೆಲಸ ಮಾಡಲಿದೆ." ಹೆರು ಹೇಳಬಯಸದ  ಬಿಜೆಪಿ ಸಂಸದರು ಹೇಳಿದ್ದಾರೆ.
ಪಕ್ಷದ ಅಭ್ಯರ್ಥಿ ಯಾರು ಎಂಬುದರ ಹೊರತಾಗಿಯೂ ದೇವೇಗೌಡರ ಎದುರು ಬೆಂಗಳೂರು ಉತ್ತರದಲ್ಲಿ ಸ್ಪರ್ಧಿಸುವುದು ಉಚಿತವಲ್ಲ ಎಂದು ಸಂಸದರು ಹೇಳಿದ್ದಾರೆ.ಬೆಂಗಳೂರು ಉತ್ತರದಲ್ಲಿ ಏಳು ಅಸೆಂಬ್ಲಿ ಸ್ಥಾನಗಳಲ್ಲಿ ಕಾಂಗ್ರೆಸ್ ನಾಲ್ಕು, ಬಿಜೆಪಿ ಎರಡು ಮತ್ತು ಜೆಡಿ (ಎಸ್) ಒಂದು ಸ್ಥಾನ ಹೊಂದಿದೆ. ಈ ಕ್ಷೇತ್ರದಿಂದ ಹೆಚ್ಚಿನ ಶಾಸಕರನ್ನು ಹೊಂದಿದ್ದರೂ, ಕ್ಷೇತ್ರ ಒಕ್ಕಲಿಗ ಮತ್ತು ಅಲ್ಪಸಂಖ್ಯಾತ ಜನರಿಗೆ ಜೆಡಿ (ಎಸ್) ಅಭ್ಯರ್ಥಿ ಕಡೆ ಒಲವು ಹೆಚ್ಚಾಗುವ ಸಾಧ್ಯತೆ ಇದೆ.
"ದೇವೇಗೌಡ ಅವರು ಕೇವಲ  ಸಮುದಾಯ ಮತ್ತು ಅಲ್ಪಸಂಖ್ಯಾತ ಮತಗಳನ್ನು ಮಾತ್ರವೇ ಪಡೆದುಕೊಳ್ಳಲಾರರು. ಅವರ ಬಗೆಗೆ ಜನರಿಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.ಜೆಡಿ (ಎಸ್) ಪಕ್ಷಕ ಚಿಹ್ನೆಯೇ ಅವರಿಗೆ ಸಾಕಾಗುತದೆ. ಅವರೆಲ್ಲಿ ಸುಲಭವಾಗಿ ಜಯಿಸಬಲ್ಲರೋ ಅಂತಹಾ ಕ್ಷೇತ್ರದಲ್ಲೇ ನಿಲ್ಲಲಿದ್ದಾರೆ." ಕಾಂಗ್ರೆಸ್ ಶಾಸಕನೊಬ್ಬರು ಹೇಳಿದ್ದಾರೆ. ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಸೇರಿ ಹಲವು ಜೆಡಿಎಸ್ ಮುಖಂಡರು ಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ದೇವೇಗೌಡ ಎಲ್ಲಿ ಸ್ಪರ್ಧಿಸಲಿದ್ದಾರೆ? ಅವರ ಆಯ್ಕೆಯ ಸ್ಥಾನ ಯಾವುದೆಂದು ಇನ್ನೂ ಘೋಷಣೆಯಾಗಿಲ್ಲವಾದರೂ ಕೆಲವು ಮೂಲಗಳ ಪ್ರಕಾರ ಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶಕ್ಕಾಗಿ ತಮ್ಮ ಸುರಕ್ಷಿತ ಸ್ಥಳ ಹಾಸನವನ್ನು ಬಿಟ್ಟುಕೊಡಲಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com