ಕಾಂಗ್ರೆಸ್ ಗೆ ಮತ್ತೊಂದು ಶಾಕ್! ನಾನೂ ರಾಜೀನಾಮೆ ಕೊಡ್ತೇನೆ ಎಂದ ರೋಷನ್ ಬೇಗ್

ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಬೇಸರಗೊಂಡಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ರೋಷನ್ ಬೇಗ್
ರೋಷನ್ ಬೇಗ್
ಬೆಂಗಳೂರು: ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಬೇಸರಗೊಂಡಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ಖುದ್ದು ಸ್ಪಷ್ಟಪಡಿಸಿರುವ ರೋಷನ್ ಬೇಗ್, ಸೋಮವಾರ ಅಥವಾ ಮಂಗಳವಾರ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ರಾಜೀನಾಮೆಗೆ ಸಿದ್ದರಾಮ್ಯ ಅವರೇ ನೇರ ಹೊಣೆಗಾರರಾಗಿದ್ದು, ಅವರ ನಡವಳಿಕೆ ಪಕ್ಷದಲ್ಲಿ ಬಹಳಷ್ಟು ಮಂದಿಗೆ ಬೇಸರ ತಂದಿದೆ. ತಮ್ಮ ಕ್ಷೇತ್ರದ ಜನತೆ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದರೂ ನಮ್ಮನ್ನು ದೂಷಿಸಲಾಗಿದೆ. ಪಕ್ಷದಿಂದ ತಮ್ಮನ್ನು ಅಮಾನತು ಮಾಡಿದ್ದಾರೆ. ಆದರೆ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಅವರು ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಅವರು ಪ್ರಶ್ನಿಸಿದರು.

ನಾನು ರಾಜ್ಯ ಹಜ್ ಕಮೀಟಿ ಅಧ್ಯಕ್ಶಷ ಹಾಗಾಗಿ ಹಜ್ ಯಾತ್ರೆ ತೆರಳುವವರನ್ನುಸುರಕ್ಷಿತವಾಗಿ ಕಳುಹಿಸುವುದು ನನ್ನ ಮೊದಲ ಜವಾಬ್ದಾರಿ. ಇಂದು ರಾತ್ರಿ ಎಲ್ಲಾ ಹಜ್ ಯಾತ್ರಿಗಳು ಹಜ್ ಯಾತ್ರೆಗೆ ತೆರಳಲಿದ್ದಾರೆ. ಇನ್ನೈದು ದಿನಗಳಲ್ಲಿ ನನ್ನ ಕೆಲಸ ಮುಗಿಯಲಿದೆ. ಆ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ನಾನು ರಾಜೀನಾಮೆ ನೀಡಿದರೆ ಯಾವ ತಪ್ಪಿಲ್ಲ. ಸಮನ್ವಯತೆ ಚೆನ್ನಾಗಿದ್ದಿದ್ದರೆ ಈ ಸ್ಥಿತಿ ಎದುರಾಗುತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷ ಇದಾಗಲೇ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದು ಒಂದು ವೇಳೆ ಅವರು ರಾಜೀನಾಮೆ ಸಲ್ಲಿಸಿದ್ದ ಪಕ್ಷದಲ್ಲಿ ಅದು ಅನುಮೋದನೆಯಾಗುತ್ತದೆಯೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com