ಕಾಂಗ್ರೆಸ್ ಬಂಡಾಯ ಶಾಸಕರು ಪಶ್ಚ್ಯಾತಾಪ ಪಡುವುದಿಲ್ಲ- ಮಾಜಿ ಕೇಂದ್ರ ಸಚಿವ ವಿ ಶ್ರೀನಿವಾಸ್ ಪ್ರಸಾದ್

ಎಲ್ಲಾ ಬಂಡಾಯ ಶಾಸಕರು ತಮ್ಮ ಪಕ್ಷಗಳಿಗೆ ಮರಳಲು ಸಿದ್ದರಿಲ್ಲದ ಕಾರಣ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಊಹಿಸಿದ್ದಾರೆ.
ವಿ. ಶ್ರೀನಿವಾಸ್ ಪ್ರಸಾದ್
ವಿ. ಶ್ರೀನಿವಾಸ್ ಪ್ರಸಾದ್
ಮೈಸೂರು: ಎಲ್ಲಾ ಬಂಡಾಯ ಶಾಸಕರು ತಮ್ಮ ಪಕ್ಷಗಳಿಗೆ  ವಾಪಾಸ್ಸಾಗಲು ಸಿದ್ದರಿಲ್ಲದ ಕಾರಣ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಕೇಂದ್ರ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಊಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ನಾಯಕರ ನಡುವೆ ಪರಸ್ಪರ ಗೌರವ, ಸಮನ್ವಯತೆ ಇಲ್ಲದಂತಾಗಿದೆ. ರಾಜ್ಯ ತೀವ್ರ ಬರಿಸ್ಥಿತಿ ಎದುರಿಸುತ್ತಿರುವಾಗ ಮೈತ್ರಿ ನಾಯಕರು ಪರಸ್ಪರ ಕಚ್ಟಾಟದಲ್ಲಿ ಒಂದು ವರ್ಷ ಕಳೆದಿದ್ದಾರೆ ಎಂದು ಹೇಳಿದರು.
ನಾನು ಮತ್ತು ಎಚ್ . ವಿಶ್ವನಾಥ್ 45 ವರ್ಷಗಳಿಂದ ಸ್ನೇಹಿತರು. ಆಗಾಗ್ಗೆ ಭೇಟಿಯಾಗುತ್ತಿರುತ್ತೇವೆ. ಆದರೆ, ಈಗ ನಡೆದಿರುವ ರಾಜಕೀಯ ಬೆಳವಣಿಗೆಗೆ ನಾನು ಜವಾಬ್ದಾರನಲ್ಲ . ಪ್ರಸ್ತಕ್ತ ರಾಜಕೀಯ ಬೆಳವಣಿಗೆಗೂ ಮುಂಚೆ ನಮ್ಮ ಭೇಟಿ ಆಗಿರುವುದು ಕಾಕತಾಳೀಯ ಅಷ್ಟೇ ಎಂದರು.
  ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದವರನ್ನು ಸಮನ್ವಯ ಸಮಿತಿಗೆ ಸೇರಿಸಿಕೊಳ್ಳಲಿಲ್ಲ. ಈ ಹಿಂದೆ ಅವರು ಹಳ್ಳಿ ಹಕ್ಕಿಯ ಹಾಡು ಎಂಬ ಪುಸ್ತಕ ಬರೆದಿದ್ದರು. ಈಗ ಹಳ್ಳಿ ಹಕ್ಕಿಯ ಗೋಳು ಎಂಬ ಪುಸ್ತಕ ಬರೆಯಬೇಕಿದೆ ಎಂದರು.
ಪಕ್ಷ ತೊರೆಯಲು ಏನು ಕಾರಣ ಎಂಬುದನ್ನು ವಿಶ್ವನಾಥ್ ಈಗಾಗಲೇ ಹೇಳಿದ್ದಾರೆ . ಅವರಿಗೆ ಹಿಂಸೆ ಕೊಟ್ಟಿದ್ದಾರೆ. ಅವಮಾನ ಮಾಡಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com