ಸಿದ್ದರಾಮಯ್ಯ- ಕುಮಾರಸ್ವಾಮಿ ಸಂಬಂಧ ಚೆನ್ನಾಗಿದೆ, ಆದರೆ ಸಮಸ್ಯೆಯಾಗುತ್ತಿರುವುದು ಅವರ ಹಿಂಬಾಲಕರಿಂದ: ಸಾ.ರಾ ಮಹೇಶ್

ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರೆಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಇತ್ತೀಚೆಗೆ ಸಿಎಂ ಅಮೆರಿಕಾ ಪ್ರವಾಸ ...
ಸಾ.ರಾ ಮಹೇಶ್
ಸಾ.ರಾ ಮಹೇಶ್
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತರೆಂದೇ ಗುರುತಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್,  ಇತ್ತೀಚೆಗೆ ಸಿಎಂ ಅಮೆರಿಕಾ ಪ್ರವಾಸ ಕೈಗೊಂಡಾಗ ಜೊತೆಗಿದ್ದರು, ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ  ಹಲವು ವಿಷಯಗಳನ್ನು ತಿಳಿಸಿದ್ದಾರೆ.
ಪ್ರ:  ಹಂತದಲ್ಲಿ ಸಮ್ಮಿಶ್ರ ಸರ್ಕಾರ ಬದುಕುಳಿಯುತ್ತದೆ ಎಂದೆನಿಸುತ್ತದೆಯೇ?
ಹೌದು. ಸಮ್ಮಿಶ್ರ ಸರ್ಕಾರವನ್ನು ನಾವು ಉಳಿಸಕೊಳ್ಳುತ್ತೇವೆ, ಈ ಸವಾಲನ್ನು ಸ್ವೀಕರಿಸಿದ್ದೇವೆ, ನನ್ನ ಮಾತುಗಳನ್ನು ಗಂಭೀರವಾಗಿ ಗುರುತು ಹಾಕಿಕೊಳ್ಳಿ,  ಬಿಜೆಪಿಗಿಂತ ನಮ್ಮ ಬಳಿ ಹೆಚ್ಚಿನ ಶಾಸಕರಿದ್ದಾರೆ.  ಅದು ಹೇಗೆ ಎಂಬುದನ್ನು ಮಾತ್ರ ನಾನು ವಿವರಸುವುದಿಲ್ಲ, ಬಿಕ್ಕಟ್ಟನ್ನು ಪರಿಹರಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿವೆ.
ಪ್ರ: ಈ ರಾಜಕೀಯ ಬಿಕ್ಕಟ್ಟು ಉಂಟಾಗಲು ಏನು ಕಾರಣ? ಇದು 'ಇಗೋ' ಸಂಘರ್ಷವೇ?
ಇಲ್ಲ, ಇದು ಕೇವಲ ಅಧಿಕಾರ ದುರಾಸೆ ಮತ್ತು ಅವ್ಯವಹಾರ,ಕೆ. ಸುಧಾಕರ್ ಗೆ ಹೆಚ್ಚಿನ ದುರಾಸೆ, ದೇವೇಗೌಡರ ಮನೆಯ  ಹೊರಗೆ ನಿಂತು ಕೊನೆಯ ಉಸಿರನವರೆಗೊ ನಿಮ್ಮ ಜೊತೆಯೇ ಇರುತ್ತೇನೆ ಎಂದು ಹೇಳಿದ್ದರು. ಎಷ್ಟೋ ಮಂದಿ ಶಾಸಕರು ಶಾಪಿಂಗ್ ಲಿಸ್ಟ್ ನಲ್ಲಿದ್ದಾರೆ.
ಪ್ರ: ತಮಗೆ ಬೇಕಾದ ಅಧಿಕಾರಿಗಳನ್ನು ಕೊಡುತ್ತಿಲ್ಲ ಎಂಬುದು ಶಾಸಕರ ದೂರು ಇದೆಯಲ್ಲ?
ಉದಾಹರಣೆಗೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಶಾಸಕರಾಗಿದ್ದಾಗ ಇದ್ದ ಅಧಿಕಾರಿಯೇ ಇದ್ದಾರೆ ಅವರನ್ನು ಬದಲಿಸಿಲ್ಲ, ಆಡಳಿತದಲ್ಲಿ ವೈಫಲ್ಯ ವಾದರೇ ಯಾರನ್ನು ಬೈಯ್ಯುವುದು?ಶಾಸಕ ಅಥವಾ ಮುಖ್ಯಮಂತ್ರಿ, ಶಾಸಕರ ಅಥವಾ ಮುಖ್ಯಮಂತ್ರಿಗಳ ಆದ್ಯತೆ ಮೇರೆಗೆ ಪೋಸ್ಟಿಂಗ್ ಕೊಡಲಾಗುತ್ತದೆಯೇ?
ಪ್ರ: ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವಿನ ಒಳ ಜಗಳವೇ  ರಾಜಕೀಯ ಬಿಕ್ಕಟ್ಟಿಗೆ ಕಾರಣ ಎಂದು ಹೇಳಲಾಗುತ್ತಿದೆಯಲ್ಲಾ?
ಅವರಿಬ್ಬರ ನಡುವೆ .ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅವರ ಹಿಂಬಾಲಕರಿಂದ  ಎಲ್ಲಾ ಸಮಸ್ಯೆಗಳು ಸೃಷ್ಟಿಯಾಗಿದೆ. ಆದರೆ ವಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ.
ಪ್ರ: ಇತ್ತೀಚೆಗೆ ನೀವು ಬಿಜೆಪಿ ರಾಜ್ಯ ಉಸ್ತುವಾರಿ ಮುರುಳೀಧರ ರಾವ್ ಮತ್ತು ಈಶ್ವರಪ್ಪ ಅವರನ್ನು ಭೇಟಿಮಾಡಿದ್ದೀರಲ್ಲ? ಅದರ ಬಗ್ಗೆ ಏನು ಹೇಳುತ್ತೀರಾ?
ಅದೊಂದು ಆಕಸ್ಮಿಕ ಭೇಟಿ, ಹೆಚ್ಚಿನದೇನು ಇಲ್ಲ
ಪ್ರ: ಒಂದು ಪಕ್ಷವಾಗಿ ನೀವು ಚುನಾವಣೆ ಗೆಲ್ಲಲು ಅಸಮರ್ಥರಾಗಿದ್ದೀರಾ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಅದು ಸುಳ್ಳು. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನೋಡಿ, ಅಸೂಯೆಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕೆಟ್ಟ ಸೋಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com