ಚಂದ್ರಯಾನ-2 ಯಶಸ್ವಿ ಉಡಾವಣೆ: ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಹರ್ಷ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ...
ಪ್ರಧಾನಿ ಮೋದಿ
ಪ್ರಧಾನಿ ಮೋದಿ
ನವದೆಹಲಿ: ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಯಶಸ್ವಿ ಉಡಾವಣೆಗೆ ಹರ್ಷ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.
ಇಂದು ಮಧ್ಯಾಹ್ನ ತಮ್ಮ ಕಚೇರಿಯಲ್ಲಿ ಚಂದ್ರಯಾನ-2 ಉಡಾವಣೆಯ ಲೈವ್‌ ನೋಡುತ್ತಿದ್ದ ಪ್ರಧಾನಿ ಮೋದಿ, ಚಪ್ಪಾಳೆ ತಟ್ಟಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು.
ಚಂದ್ರಯಾನ 2 ಯಶಸ್ವಿ ಉಡ್ಡಯನ ನಮ್ಮ ದೇಶದ ವಿಜ್ಞಾನಿಗಳ ಶಕ್ತಿಯನ್ನು ಹಾಗೂ ನವ ಮನ್ವಂತರಕ್ಕೆ ಸಾಗಬೇಕೆಂಬ 130 ಕೋಟಿ ಜನರ ಬದ್ಧತೆ, ದೃಢ ನಿರ್ಧಾರಕ್ಕೆ ಸಾಕ್ಷಿಯಾಗಿದೆ. ಇಸ್ರೋ ಸಾಧನೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಾಗಿದೆ ಎಂದು ನರೇಂದ್ರ ಮೋದಿ ಟ್ವೀಟ್‌ ಮೂಲಕ ಶ್ಲಾಘಿಸಿದ್ದಾರೆ.
ತಾಂತ್ರಿಕ ದೋಷದಿಂದ ಕಳೆದ ಸೋಮವಾರ ಕೊನೆ ಕ್ಷಣದಲ್ಲಿ ಚಂದ್ರಯಾನ-2 ಉಡಾವಣೆ ಮುಂದೂಡಿಕೆಯಾಗಿತ್ತು. ತಾಂತ್ರಿಕ ದೋಷ ಸರಿಪಡಿಸಿದ ನಂತರ ಇಂದು ಮಧ್ಯಾಹ್ನ 2.43ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿ ಉಡಾವಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com