ಸಚಿವ ಸಾರಾ ಮಹೇಶ್ ಗೆ ಬೆದರಿಕೆ: ಯುವ ಜೆಡಿಎಸ್ ಮುಖಂಡನ ಅಮಾನತು

ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾರಾ ಮಹೇಶ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಹುಣಸೂರು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಲೋಕೇಶ್ ಎಸ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ.
ಸಚಿವ ಸಾರಾ ಮಹೇಶ್
ಸಚಿವ ಸಾರಾ ಮಹೇಶ್
ಮೈಸೂರು: ಪ್ರವಾಸೋದ್ಯಮ ಮತ್ತು ರೇಷ್ಮೆ  ಸಚಿವ ಸಾರಾ ಮಹೇಶ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಹುಣಸೂರು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಲೋಕೇಶ್ ಎಸ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತು ಮಾಡಲಾಗಿದೆ. 
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಇವರನ್ನು ಅಮಾನತು ಮಾಡಲಾಗಿದೆ ಎನ್ನಲಾಗಿದ್ದು, ತಾಲೂಕು ಜೆಡಿಎಸ್ ಮುಖ್ಯಸ್ಥ ಎಚ್ ಬಿ ಮಹಾದೇವಗೌಡ ಹೊರಡಿಸಿರುವ ಆದೇಶದಲ್ಲಿಯೂ ಇದನ್ನು ದೃಢಪಡಿಸಲಾಗಿದೆ.
ಹುಣಸೂರು ಶಾಸಕ ಹೆಚ್ ವಿಶ್ವನಾಥ್ ಅವರಿಗೆ ಬೆಂಬಲ ನೀಡುವುದಾಗಿ ದೂರವಾಣಿಯಲ್ಲಿ ಸಾರಾ ಮಹೇಶ್ ಗೆ ಲೋಕೇಶ್ ಹೇಳಿದ್ದರಿಂದ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎನ್ನಲಾಗಿದೆ. ಅವರಿಬ್ಬರ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ಧ್ವನಿ ಮುದ್ರಿಕೆ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರುಗಳ ಪೈಕಿಯಲ್ಲಿ ಎಚ್ ವಿಶ್ವನಾಥ್ ಕೂಡಾ ಒಬ್ಬರಾಗಿದ್ದಾರೆ. 21 ನಿಮಿಷಗಳ ಧ್ವನಿ ಮುದ್ರಿಕೆಯಲ್ಲಿ  ವಿಶ್ವನಾಥ್ 28 ರಿಂದ 30 ಕೋಟಿ ರೂಪಾಯಿಯನ್ನು ಸಾಲ ಪಡೆದಿದ್ದಾರೆಯೇ? ಅವರು ಸಂಕಷ್ಟದಲ್ಲಿದ್ದಾರೆಯೇ ? ಎಂದು ಲೋಕೇಶ್ ಕೇಳುತ್ತಾರೆ. ಅದಕ್ಕೆ ಮಹೇಶ್ ಸತ್ಯ ಹೇಳುತ್ತಿದ್ದೇನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com