ಡಿಕೆಶಿ ಒಡ್ಡಿದ ಸವಾಲು ಸ್ವೀಕಾರಕ್ಕೆ ಸಿದ್ದ: ಎಂಟಿಬಿ ನಾಗರಾಜ್

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಮ್ಮ ವಿರುದ್ಧ ಸೇಡಿನ ರಾಜಕಾರಣ‌ ಮಾಡುವುದಾಗಿ ಸದನದಲ್ಲಿಯೇ ಹೇಳಿದ್ದು, ಅವರ ಸವಾಲನ್ನು ಸ್ವೀಕರಿಸುವುದಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ  ಹಾಗೂ ಎಂಟಿಬಿ ನಾಗರಾಜ್
ಡಿಕೆಶಿ ಹಾಗೂ ಎಂಟಿಬಿ ನಾಗರಾಜ್
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಮ್ಮ ವಿರುದ್ಧ ಸೇಡಿನ ರಾಜಕಾರಣ‌ ಮಾಡುವುದಾಗಿ ಸದನದಲ್ಲಿಯೇ ಹೇಳಿದ್ದು, ಅವರ ಸವಾಲನ್ನು ಸ್ವೀಕರಿಸುವುದಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
"ನಾನು ನಾಲ್ಕು ದಶಕಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಮಾಜಿ ಸಚಿವ ಡಿಕೆ ಶಿವಕುಮಾರ್ ಸವಾಲು ಸ್ವೀಕರಿಸಿದ್ದೇನೆ" ಎಂಟಿಬಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ‌ ದುರಾಡಳಿತಕ್ಕೆ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವೆಯೇ ಹೊರತು ಹಣ ಅಧಿಕಾರದ ಆಮಿಷಕ್ಕೆ ಒಳಗಾಗಿ ಅಲ್ಲ. ದೇವರು ನಮಗೆ ಅಂತಹ ಪರಿಸ್ಥಿತಿ ಕೊಟ್ಟಿಲ್ಲ ಎಂದರು.
ಇಡಿ ಹಾಗೂ ಐಟಿ ಬೆದರಿಕೆ ನನ್ನ ಮೇಲೆ ಇಲ್ಲ. ನಾನು ಪ್ರತಿವರ್ಷ ಪ್ರಾಮಾಣಿಕವಾಗಿ ತೆರಿಗೆ ಕಟ್ಟುತ್ತಾ ಬಂದಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಮಗನ ರಾಜಕೀಯ ಪ್ರವೇಶ ಕುರಿತು ಇನ್ನೂ ಚಿಂತನೆ ನಡೆಸಿಲ್ಲ. ಅದು ಅವನ ವೈಯಕ್ತಿಕ ವಿಚಾರ. ಅವನು ಯಾವ ಪಕ್ಷಕ್ಕಾದರೂ ಸೇರಲಿ ಅದು ಅವನ ತೀರ್ಮಾನ. ಸದ್ಯಕ್ಕೆ ನಾನು ರಾಜಕೀಯ ನಿವೃತ್ತಿಯಾಗಲು ಗಂಭೀರ ಚಿಂತನೆ ನಡೆಸಿದ್ದೇನೆ‌ ಎಂದು ಎಂಟಿಬಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com