'ಬ್ರದರ್', ಸೋಲಿನಿಂದ ಕಂಗೆಡಬೇಡಿ: ರಾಹುಲ್ ಗೆ ಧೈರ್ಯ ಹೇಳಿದ ಸಿಎಂ ಕುಮಾರಸ್ವಾಮಿ

ಕಳೆದ ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದಾಗ ರಾಹುಲ್ ಅವರಿಗೆ "ಸರ್" ಎಂದು......
ಕುಮಾರಸ್ವಾಮಿ
ಕುಮಾರಸ್ವಾಮಿ
ಬೆಂಗಳೂರು: ಕಳೆದ ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದಾಗ  ರಾಹುಲ್ ಅವರಿಗೆ "ಸರ್" ಎಂದು ಸಂಬೋಧಿಸುವ ಬದಲು "ಸೋದರ" ಎಂದು ಕರೆದಿದ್ದಾರೆ.ಈ ಮೂಲಕ ಇಬ್ಬರ ನಡುವೆ ಸಹೋದರತ್ವದ ಹೊಸ ಸಂಬಂಧ ಮೂಡಿದೆ.
ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಇದೇ ಮೊದಲ ಭಾರಿಗೆ ಸಿಎಂ ಕುಮಾರಸ್ವಾಮಿ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದು ರಾಹುಲ್ ಪಕ್ಷದ ಅಧ್ಯಕ್ಷ ಸ್ಥಾನ ತೊರೆಯಬಾರದೆಂದು ಮನವಿ ಮಾಡಿದ್ದಾರೆ. ಇನ್ನು ರಾಹುಲ್ ತಮ್ಮ ಪಕ್ಷದ ಹೀನಾಯ ಸೋ;ಲಿನ ನಂತರ ಕೈ ಪಾಳಯದ ನಾಯಕರನ್ನೇ ಭೇಟಿಯಾಗಲು ಹಿಂದೇಟು ಹಾಕುತ್ತಿದ್ದವರು ಕುಮಾರಸ್ವಾಮಿ ಭೇಟಿಗೆ ಅನುಮತಿ ಕೊಟ್ಟಿರುವುದು ಇಬ್ಬರೂ ನಾಯಕರ ನಡುವೆ ಹೊಸ ಬಾಂಧವ್ಯ ಮೂಡಿದೆ ಎಂದು ಹೇಳಲಾಗುತ್ತಿದೆ.
ಗಂಭೀರ ಚರ್ಚೆ ಬಳಿಕ ಇದ್ದಕ್ಕಿದ್ದಂತೆ ಎದುರಿನಲ್ಲಿರುವವರನ್ನು "ಸೋದರ" ಎಂದು ಸಂಭೋಧಿಸುವುದು ಕುಮಾರಸ್ವಾಮಿಯವರ ಜಾಯಮಾನ.ಈ ಸುದ್ದಿ ನವದೆಹಲಿಯಲ್ಲಿ ಸಹ ತಲುಪಿದ್ದು ರಾಹುಲ್ ಕುಮಾರಸ್ವಾಮಿಯನ್ನು "ನನ್ನನ್ನೇಕೆ ನೀವು ಸೋದರನೆಂದು ಕರೆಯುವುದಿಲ್ಲ?" ಎಂದು ಕೇಳಿದ್ದಾರೆ. "ನೀವೇಕೆ ನನ್ನನ್ನು ಪದೇ ಪದೇ ಸರ್ ಎಂದು ಸಂಬೋಧಿಸುತ್ತೀರಿ? ಎಲ್ಲರನ್ನೂ ನೀವು ಕರೆವಂತೆ ನನ್ನನ್ನೂ ಸೋದರ ಎಂದು ಕರೆಯಬಹುದಲ್ಲವೆ" ಎದು ರಾಹುಲ್ ಗಾಂಧಿ ಕುಮಾರಸ್ವಾಮಿಗೆ ಕೇಳಿದ್ದಾರೆ
ಈ ವೇಳೆ  ರಾಹುಲ್ಅವರನ್ನು ಸೋದರ ಎಂದು ಕರೆದ ಕುಮಾರಸ್ವಾಮಿ ಕರ್ನಾಟಕ್ದಲ್ಲಿ ಮೈತ್ರಿ ಸರ್ಕಾರ ಭದ್ರವಾಗಿದೆ, ಎಂದು ಸ್ಪಷ್ಟಪಡಿಸಿದ್ದಲ್ಲದೆ ರಾಹುಲ್ ಗೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಕಾಂಗ್ರೆಸ್ ನೀವಿಲ್ಲದೆ(ನಿಮ್ಮ ನಾಯಕತ್ವ) ಇರುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ನೀವು ಅಧ್ಯಕ್ಷರಾಗಿಯ್ತೇ ಮುಂದುವರಿಯಬೇಕು ಎಂದು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com