ಶಾಸಕ ರೋಷನ್ ಬೇಗ್ ಸುಳ್ಳುಗಾರ: ಐಎಂಎ ಪ್ರಕರಣದಲ್ಲಿ ನನ್ನನ್ನು ಎಳೆದು ತಂದಿದ್ದಾರೆ: ದೇಶಪಾಂಡೆ

ಐಎಂಎ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಹೀಗಾಗಿ ನನ್ನನ್ನು ಅನಾವಶ್ಯಕವಾಗಿ ಎಳೆದು ತರಲಾಗುತ್ತಿದೆ ಎಂದು ಕಂದಾಯ ಸಚಿವ ...

Published: 18th June 2019 12:00 PM  |   Last Updated: 18th June 2019 12:13 PM   |  A+A-


R.V Deshapande

ಆರ್.ವಿ ದೇಶಪಾಂಡೆ

Posted By : SD SD
Source : The New Indian Express
ಬೆಂಗಳೂರು: ಐಎಂಎ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಹೀಗಾಗಿ ನನ್ನನ್ನು ಅನಾವಶ್ಯಕವಾಗಿ ಎಳೆದು ತರಲಾಗುತ್ತಿದೆ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಆರೋಪಿಸಿದ್ದಾರೆ.

ತಿಂಗಳ ಹಿಂದೆ ಐಎಂಎ ಮಾಲೀಕ ಮೊಹಮ್ಮದ್‌ ಮನ್ಸೂರ್‌ ಖಾನ್‌ನನ್ನು ಶಾಸಕ ರೋಷನ್ ಬೇಗ್ ತಮ್ಮ ಬಳಿಗೆ ಕರೆತಂದು ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ನೆರವು ಬಯಸಿದ್ದು ನಿಜ ಎಂದು ಹೇಳಿದ್ದಾರೆ.

ನನ್ನ ಕ್ಷೇತ್ರದವರು. ಒಳ್ಳೇ ಜನ. ಚಾರಿಟಿ ಶಾಲೆ, ಆಸ್ಪತ್ರೆ, ಆಭರಣ ಮತ್ತು ಹಣಕಾಸು ವ್ಯವಹಾರ ನಡೆಸುತ್ತಿದ್ದಾರೆ. ಆರ್‌ಬಿಐ ಕೂಡ ತನಿಖೆ ನಡೆಸಿದ್ದು, ಎಲ್ಲವೂ ಸರಿ ಇದೆ. ಆದರೂ, ಪೊಲೀಸ್‌ ತನಿಖೆ ಕಾರಣ ಯಾವುದೇ ವ್ಯವಹಾರ ಆಗುತ್ತಿಲ್ಲ. ಈ ಸಣ್ಣ ಸಮಸ್ಯೆ ಬಗೆಹರಿಸಿಕೊಡಿ ಎಂದು ರೋಷನ್‌ ಬೇಗ್‌ ಕೇಳಿದ್ದರು. ತನಿಖೆ ವರದಿ ಬಳಿಕ ಕಾನೂನು ಪ್ರಕಾರ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದೆ'' ಎಂದು ದೇಶಪಾಂಡೆ ತಿಳಿಸಿದ್ದಾರೆ. 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp