ಕೇಂದ್ರ ಯೋಜನೆಗಳನ್ನು ಕ್ಷೇತ್ರದ ಅಭಿವೃದ್ದಿಗೆ ಬಳಸುವೆ: ರಾಜಾ ಅಮರೇಶ್ವರ ನಾಯಕ್

ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ತಮ್ಮ ಪ್ರಾರಂಭದ ದಿನಗಳಲ್ಲಿ ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡವರಲ್ಲ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು....
ರಾಜಾ ಅಮರೇಶ್ವರ ನಾಯಕ್
ರಾಜಾ ಅಮರೇಶ್ವರ ನಾಯಕ್
ರಾಯಚೂರು: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್ ತಮ್ಮ ಪ್ರಾರಂಭದ ದಿನಗಳಲ್ಲಿ ಯಾವುದೇ ಮಹತ್ವಾಕಾಂಕ್ಷೆ ಇಟ್ಟುಕೊಂಡವರಲ್ಲ. ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಲಿಂಗಸಗೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆಯ್ಕೆ ಮಾಡಿದಾಗಷ್ಟೇ ಅವರು ರಾಜಕೀಯ ಪ್ರಯಾಣದ ದಿಕ್ಕು ಬದಲಾಗಿತ್ತು.
ಸಾಮಾನ್ಯ ವರ್ಗದ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡದ ನಾಯಕನನ್ನು ಕಣಕ್ಕಿಳಿಸುವ ಪಾಟೀಲ್ ಕಾರ್ಯತಂತ್ರವು ಯಶಸ್ವಿಯಾಗಿತ್ತು.ನಾಯಕ್ 3,399 ಮತಗಳ ಅಂತರದಿಂದ ಜಯಗಳಿಸಿದರು.ಪಾಟೀಲ್ ಅವರು ಈ ಹುದ್ದೆಯಿಂದ ನಿರ್ಗಮಿಸಿದ ನಂತರ 1991 ರಲ್ಲಿ ಎಸ್ ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರಿಗೆ ಮತ್ತೊಂದು ಹಂತ ಮೇಲಕ್ಕೇರಲು ಅವಕಾಶ ಒದಗಿತ್ತು.  ಆ ಸಮಯದಲ್ಲಿ ನಾಯಕ್ ಅವರನ್ನು ದತ್ತಿ ಸಚಿವರನ್ನಾಗಿಸಲಾಗಿತ್ತು.
ಮೂರು ವರ್ಷಗಳ ನಂತರ 1994 ರಲ್ಲಿ ಅವರು ವಿಧಾನಸಭಾ ಚುನಾವಣೆಯಲ್ಲಿ ಲಿಂಗಸಗೂರು ಕ್ಷೇತ್ರದಲ್ಲಿ ಸೋಲು ಕಂಡರೂ  1999 ರಲ್ಲಿ ಮತ್ತೆ ಜಯ ಸಾಧಿಸಿದ್ದರು. ವರ್ಷದ ನಂತರ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ತೋಟಗಾರಿಕೆ ಸಚಿವರೂ ಆದರು. ಅಲ್ಲದೆ ಅವರಿಗೆ  ಜೈಲುಗಳ ಖಾತೆಯನ್ನೂ ನೀಡಲಾಯಿತು. ಆದರೆ 2004 ರಲ್ಲಿ ವಿಧಾನಸಭೆಗೆ ನಡೆದ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು.
"2008 ರಲ್ಲಿ ರಾಯಚೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಕಾಯ್ದಿರಿಸಿದಾಗ, ನಾನು ಬೆಂಬಲಿಸಿದ ಮಾಜಿ ಸಂಸದ ವೆಂಕಟೇಶ್ ನಾಯಕ್ ಅವರು ಟಿಕೆಟ್ ನಿರಾಕರಿಸಿದರು. ಇದು ನಿಜಕ್ಕೂ ದುಃಖಕರವಾಗಿತ್ತು, ”ನಾಯಕ್ನೆನಪಿಸಿಕೊಳ್ಳುತ್ತಾರೆ. 
2009 ರಲ್ಲಿ ಅವರು ಬಿಜೆಪಿಗೆ ಸೇರಿದ ನಾಯಕ್ ಲೋಕಸಭಾ ಚುನಾವಣೆಗೆ ಬಿಜೆಪಿ ಪರ ಪ್ರಚಾರ ನಡೆಸಿದರು.  ಆದರೆ, ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಅವರ “ಕೋರಿಕೆಯ ಮೇರೆಗೆ” ಟಿಕೆಟ್ ಅನ್ನು ಸಣ್ಣ ಫಕೀರಪ್ಪ ಅವರಿಗೆ ನೀಡಲಾಯಿತು. ಅವರು ಟಿಕೆಟ್ ಮಾರಾಟ ಮಾಡಿದರೆನ್ನುವ ಆರೋಪವನ್ನು ನಿರಾಕರಿಸಿದ್ದಾರೆ.
ಈಗ  2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತೀವ್ರವಾಗಿ ಹೋರಾಡಿ ಜಯ ಗಳಿಸಿದ ನಂತರ ಸಧ್ಯ ಈ ಭಾಗದ ಭಿವೃದ್ಧಿಯತ್ತ ಗಮನ ಹರಿಸಲು ಬಯಸುತ್ತಾರೆ. ಹಣವನ್ನು ತರುವ ಮೂಲಕ ತಮ್ಮ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಬಯಸುತ್ತೇನೆ ಎಂದು ನಾಯಕ್ ಹೇಳುತ್ತಾರೆ."ನಾನು ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳತ್ತಲೂ ಗಮನಹರಿಸಲು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆರಾಯಚೂರಿನಲ್ಲಿ ಉಡಾನ್ (ಉಡೆ ದೇಶ್ ಕಾ ಆಮ್ ನಾಗರಿಕ್) ಯೋಜನೆಯನ್ನು ಕಾರ್ಯಗತಗೊಳಿಸಲೂ ಅವರು ಉತ್ಸುಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com