ಉಮೇಶ್ ಜಾಧವ್ ಲೋಕಸಭೆಗೆ ಸ್ಪರ್ಧಿಸಲು ಅನರ್ಹತೆ ಅಡ್ಡಿಯಲ್ಲ: ತಜ್ಞರ ಅಭಿಮತ

ಚಿಂಚೋಳಿ ಶಾಸಕ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೂರು ದಿನಗಳ ನಂತರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಉಮೇಶ್ ಜಾಧವ್
ಉಮೇಶ್ ಜಾಧವ್
ಬೆಂಗಳೂರು: ಚಿಂಚೋಳಿ ಶಾಸಕ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಮೂರು ದಿನಗಳ ನಂತರ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಲಬುರ್ಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಯಲ್ಲಿ ಜಾಧವ್ ಬಿಜೆಪಿಗೆ ಸೇರ್ಪಡೆಯಗಿದ್ದಾರೆ.ಆದರೆ ಜಾಧವ್ ಅವರ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಇನ್ನೂ ಅಂಗೀಕರಿಸಿಲ್ಲ.ಇದೀಗ ಜಾಧವ್ ಲೋಕಸಭೆಗೆ ಸ್ಪರ್ಧಿಸುವ ಕುರಿತು ಇದುವೇ ಅಡ್ಡಿಯಾಗಲಿದೆಯೆ ಎನ್ನುವ ಪ್ರಶ್ನೆಗಳು ಸಹ ಹುಟ್ಟಿಕೊಂಡಿದೆ.
ಆದರೆ ಕಾನೂನು ತಜ್ಞರು ಮತ್ತು ಮಾಜಿ ಸ್ಪೀಕರ್ ಹೇಳುವಂತೆ ಚುನಾವಣೆಯಲ್ಲಿ ಸ್ಪರ್ಧಿಸಲು  ಶಾಸಕರಿಗೆ ಅನರ್ಹತೆಯ ಕುರಿತ ಅರ್ಜಿಯು ತಡೆಯಾಗುವುದಿಲ್ಲ. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖಾರ್ಗೆ ವಿರುದ್ಧ ಜಾಧವ್ ಕಲಬುರ್ಗಿ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸಿದ್ದಾರೆ.
"ರಾಜೀನಾಮೆ ಸ್ವೀಕರಿಸಲು ಸ್ಪೀಕರ್ ಗೆ ಕೇವಲ ಎಅರಡು ಷರತ್ತುಗಳಿದೆ.ಯಾರದೇ, ಯಾವ ಬಗೆಯದೇ ಒತ್ತಡಗಳಿಲ್ಲದೆ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕು. ಒಮ್ಮೆ ಸ್ಪೀಕರ್ ಗೆ ಅದು ಮನವರಿಕೆಯಾದರೆ  ಅವರು ರಾಜೀನಾಮೆ ಸ್ವೀಕರಿಸಲು ಬದ್ಧರಾಗಲಿದ್ದಾರೆ. ಅದರ ನಂತರ ಅನರ್ಹತೆಯ ಪ್ರಶ್ನೆಯು ಉದ್ಭವಿಸುವುದಿಲ್ಲ "ಎಂದು ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.ಒಂದೊಮ್ಮೆ ಸ್ಪೀಕರ್ ತಾವು ನಿರ್ಧಾರ ತೆಗೆದುಕೊಳ್ಲಲು ವಿಫಲವಾದಲ್ಲಿ ಆಗ ಸದಸ್ಯರು ನ್ಯಾಯಾಲಯದ ಮೊರೆ ಹೋಗಬಹುದು ಎಂದೂ ಅವರು ಹೇಳಿದ್ದಾರೆ.
ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಯವರ ಪ್ರಕಾರ, ಸದಸ್ಯರು ವಿಧಾನಸಭೆಯಿಂದ ಅನರ್ಹರಾಗಿದ್ದರೂ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಾಗುವುದಿಲ್ಲ. ರಾಜ್ಯ ಅಸೆಂಬ್ಲಿಯಿಂದ ಅನರ್ಹನಾಗಿರುವ ಒಬ್ಬ ವ್ಯಕ್ತಿಯು ಲೋಕಸಭೆಗೆ ಸ್ಪರ್ಧಿಸಬಹುದಾಗಿದೆ.. "ನೀವು ಆಯ್ಕೆಯಾಗುವ ಸ್ಥಾನದ ಕುರಿತು ಪಕ್ಷಾಂತರ ವಿರೋಧಿ ಕಾನೂನು  ಅಡ್ಡಿಯಾಗುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಇದು ತಡೆಯಲು ಸಾಧ್ಯವಿಲ್ಲ.
"ರಾಜೀನಾಮೆ ಸಲ್ಲಿಸಿದ ನಂತರ, ಸ್ಪೀಕರ್ ಅದನ್ನು ಒಪ್ಪಿಕೊಳ್ಳಬೇಕು. ರಾಜೀನಾಮೆ ಸ್ವೀಕರಿಸಿದ ಬಳಿಕ ಅವರ  ಅನರ್ಹಗೊಳಿಸುವಿಕೆ ಅರ್ಜಿಯು ಉಳಿದುಕೊಳ್ಳುವುದಿಲ್ಲ ಎಂದು ಮಾಜಿ ಅಡ್ವೊಕೇಟ್ ಜನರಲ್ ಬಿ ವಿ ಆಚಾರ್ಯ ಹೇಳಿದ್ದಾರೆ.ಅವರು ಕೂಡ ಜಾದವ್ ಸಂಸತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com