ನಿಖಿಲ್ ಪರ ಪ್ರಚಾರ ಮಾಡಬೇಕು, ಅದೊಂದೇ ನನಗೆ ಉಳಿದಿರುವ ಆಯ್ಕೆ: ಎಲ್ ಆರ್ ಶಿವರಾಮೇಗೌಡ

ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ...
ನಿಖಿಲ್ ಗೌಡ-ಎಲ್ ಆರ್ ಶಿವರಾಮೇ ಗೌಡ
ನಿಖಿಲ್ ಗೌಡ-ಎಲ್ ಆರ್ ಶಿವರಾಮೇ ಗೌಡ
ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಗೌಡ ಅಭ್ಯರ್ಥಿಯಾಗಿ ನಿಲ್ಲುವುದು ಬಹುತೇಕ ಖಚಿತವಾಗಿದ್ದು ನಿಕಟಪೂರ್ವ ಸಂಸದ ಎಲ್ ಆರ್ ಶಿವರಾಮೇಗೌಡ ಕೂಡ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಪಕ್ಷದಲ್ಲಿ ಕಾರ್ಯಕರ್ತರಿಗೆ ಸಹ ಅಸಮಾಧಾನ ತಂದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಶಿವರಾಮೇ ಗೌಡ, ಮತ್ತೆ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷೆ ಇದ್ದರೂ ಕೂಡ ಪಕ್ಷದ ನಿರ್ಧಾರವನ್ನು ತಲೆಬಾಗಲೇಬೇಕು. ಸಹಜವಾಗಿ ಬೇಸರವಾಗಿದೆ ಆದರೆ ಅಸಹಾಯಕನಾಗಿದ್ದೇನೆ ಎಂದರು.
ಕಳೆದ 5 ತಿಂಗಳ ಹಿಂದೆ ಉಪ ಚುನಾವಣೆಯಲ್ಲಿ ಶಿವರಾಮೇಗೌಡ ಸಂಸದರಾಗಿ ಆಯ್ಕೆಯಾದ ನಂತರ ಇದೀಗ ಈ ಬಾರಿ ಚುನಾವಣೆಯಲ್ಲಿ ನಿಖಿಲ್ ಗೌಡ ಪರ ಪ್ರಚಾರ ನಡೆಸಬೇಕಾಗಿದೆ. ನನಗೆ ಮತ್ತೊಮ್ಮೆ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷೆಯಿತ್ತು, ಆದರೆ ಪಕ್ಷದ ಹಿರಿಯರ ತೀರ್ಮಾನಕ್ಕೆ ತಲೆಬಾಗಲೇಬೇಕು. ನಿಖಿಲ್ ನಿಲ್ಲುವ ಬಗ್ಗೆ ಅಂತಿಮ ನಿರ್ಧಾರವಾಗದಿದ್ದರೂ ಕೂಡ ದೇವೇಗೌಡರು ಮತ್ತು ಕುಮಾರಸ್ವಾಮಿ ಮಾಧ್ಯಮಗಳಿಗೆ ನಿಖಿಲ್ ಗೌಡ ಸ್ಪರ್ಧಿಸುತ್ತಿದ್ದಾರೆ ಎಂದಿದ್ದಾರೆ ಎಂದು ಶಿವರಾಮೇಗೌಡ ಹೇಳಿದರು.
ಪಕ್ಷಕ್ಕಾಗಿ ಏನೂ ಕೆಲಸ ಮಾಡದವರನ್ನು ಚುನಾವಣೆಯಲ್ಲಿ ನಿಲ್ಲಿಸುವುದು ಸರಿಯಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರನ್ನು ಬದಿಗೊತ್ತಿ ಕುಟುಂಬ ಸದಸ್ಯರಿಗೆ ಮಣೆ ಹಾಕುತ್ತಿರುವುದು ಎಷ್ಟು ಸರಿ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಕೇಳುತ್ತಾರೆ. ಸ್ಥಳೀಯ ನಾಯಕರನ್ನು ಸಮಾಲೋಚಿಸದೆ, ಪಕ್ಷದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳದೆ ನಿಖಿಲ್ ಹೆಸರನ್ನು ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಘೋಷಿಸಿದ್ದು ಸರಿಯಲ್ಲ ಎನ್ನುತ್ತಾರೆ ಹಳೆ ಮೈಸೂರು ಭಾಗದ ಪಕ್ಷದ ಹಿರಿಯ ನಾಯಕರೊಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com