
ಅಭಿಷೇಕ್ ಗೌಡ ಮತ್ತು ನಿಖಿಲ್ ಕುಮಾರ್
Source : The New Indian Express
ನಾನು ಮತ್ತು ನಿಖಿಲ್ ಉತ್ತಮ ಸ್ನೇಹಿತರು , ಆದರೆ ರಾಜಕೀಯದಲ್ಲಿ ನಾವಿಬ್ಬರು ವಿಭಿನ್ನವಾಗಿದ್ದೇವೆ ಎಂದು ಅಭಿಷೇಕ್ ಗೌಡ ಹೇಳಿದ್ದಾರೆ,.
ಕೆ.ಆರ್ ನಗರ ಕ್ಷೇತ್ರದ ಹುಣಸಮ್ಮ ದೇವಾಲಯ. ಕಪಡಿ ದೇವಾಲಯಕ್ಕೆ ತಮ್ಮ ತಾಯಿ ಸುಮಲತಾ ಅಂಬರೀಶ್ ಜೊತೆ ಪ್ರಚಾರದಲ್ಲಿ ಭಾಗವಹಿಸಿದ್ದ ಅಭಿಷೇಕ್, ಈ ವೇಳೆ ಮಾತನಾಡಿದ ಅಭಿಷೇಕ್ ನಾನು ನಿಖಿಲ್ ಬೆಸ್ಟ್ ಫ್ರೆಂಡ್ಸ್, ಆದರೆ ರಾಜಕೀಯ.ವಿಚಾರ ಬೇರೇ ಬೇರೆ ಎಂದು ತಿಳಿಸಿದ್ದಾರೆ,
ಇನ್ನೂ ತಾಯಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಅಭಿ, ಯುವಕರ ಜೊತೆ ಸೆಲ್ಫಿಗೆ ಪೋಸ್ ನೀಡಿದರು. ಮಂಡ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂಬುದು ತಮ್ಮ ತಂದೆಯ ಕನಸಾಗಿತ್ತು, ಹೀಗಾಗಿ ನಮ್ಮ ತಾಯಿಗೆ ನಿಮ್ಮ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now