'ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮ ಪ್ರೀತಿಯ ಅಂಬರೀಷ್ ಅವರ ಧರ್ಮಪತ್ನಿ'

ಮಂಡ್ಯ ಲೋಕಸಭಾ ಚುನಾವಣಾ ಕಣ ರಣರಂಗವಾಗಿದ್ದು, ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್​​ ಸ್ವತಂತ್ರ ...
ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ನೆರೆದಿದ್ದ ಜನಸ್ತೋಮ
ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ನೆರೆದಿದ್ದ ಜನಸ್ತೋಮ
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ಕಣ ರಣರಂಗವಾಗಿದ್ದು, ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ವಿರುದ್ಧ ಸುಮಲತಾ ಅಂಬರೀಶ್​​ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 
ಬುಧವಾರ ಡಿಸಿ ಕಚೇರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸುಮಲತಾ ಅವರಿಗೆ ಬೆಂಬಲ ಸೂಚಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. 
ನಾವುಪತ್ರ ಸಲ್ಲಿಸಿದ ನಂತರ ಮಾತನಾಡಿದ ಸುಮಲತಾ, 'ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮ ಪ್ರೀತಿಯ ಅಂಬರೀಷ್ ಅವರ ಧರ್ಮಪತ್ನಿ, ಈ ಮಣ್ಣಿನ ಮಗಳು, 40 ವರ್ಷದಿಂದ ಚಿತ್ರರಂಗದಲ್ಲಿ ಇದ್ದೇನೆ, 5 ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ,  27 ವರ್ಷಗಳಿಂದ ಅಂಬರೀಷ್ ಪತ್ನಿಯಾಗಿದ್ದೇನೆ,  ಯಾರು ಎಂದು ಪ್ರಶ್ನಿಸಿದವರಿಗೆ ಇದೇ ನನ್ನ ಉತ್ತರ, ಕೆಲರ ಮಾತಿನಿಂದ ನೋವಾಗಿದೆ,  ಹೆಣ್ಣಾಗಿ ಅವಮಾನ ನುಂಗಿಕೊಂಡಿದ್ದೇನೆ, ಅವರ ಮಾತುಗಳಿಗೆ ಜನರೇ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ನಾನು ಇಲ್ಲಿ ಹೊಸದಾಗಿ ಗುರುತಿಸಿಕೊಳ್ಳಲು ಬಂದಿಲ್ಲ, 200 ಸಿನಿಮಾಗಳಲ್ಲಿ ನಟಿಸಿರುವ ನನನೆ ನನ್ನದೇ ಆದ ವ್ಯಕ್ತಿತ್ವ ಇದೆ, ಮಂಡ್ಯ ಜನರ ಪ್ರೀತಿಗಾಗಿ ನಾನು ಇಲ್ಲಿ ಬಂದಿದ್ದೇನೆ ಎಂದು ಹೇಳಿದ ಸುಮಲತಾ, ತಮ್ಮ ಪತಿ ಅಂಬರೀಷ್ ಮಂಡ್ಯಕ್ಕಾಗಿ ಮಾಡಿದ ಕೆಲಸಗಳನ್ನು ಬಗ್ಗೆ ಹೇಳಿದಕು, ಮಂಡ್ಯ ಮೆಡಿಕಲ್ ಕಾಲೇಜು ತರಲು ಅಂಬರೀಷ್ ಕಾರಣ,  ಆದರೆ  ನನ್ನ ಪತಿಗೆ ಯಾವುದೇ ಕ್ರೆಡಿಟ್ ಮೇಲೆ ನಂಬಿಕೆ ಇರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com