ಬೆಳಗಾವಿ ಲೋಕಸಭೆ ಚುನಾವಣೆಗೆ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಖರ್ಚು ಮಾಡಿದ ಹಣವೆಷ್ಟು?

ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದವು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಳಗಾವಿ: ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದವು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಗಳಲ್ಲಿ ಎರಡು ಪಕ್ಷಗಳು ಸಾಮೂಹಿಕ  ಪ್ರಚಾರದಲ್ಲಿ ತೊಡಗಿದ್ದವು.  ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಭಾಗವಹಿಸಿದ್ದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾ ಸಾಹೇಬ್ 36 ಲಕ್ಷ ರು ಹಣ ಖರ್ಚು ಮಾಡಿದ್ದಾರೆ, ಪ್ರಕಾಶ್ ಹುಕ್ಕೇರಿ 41.6 ಲಕ್ಷ ಹಣ ಖರ್ಚು ಮಾಡಿದ್ದಾರೆ, ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ 24.5 ಲಕ್ಷ ಹಾಗೂ ಕಾಂಗ್ರೆಸ್ ವಿ.ಎಸ್  ಸಾಧುನವರ್ 30 ಲಕ್ಷ ಹಣ ಖರ್ಚು ಮಾಡಿದ್ದಾರೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ. ಚುನಾವಣಾ ಆಯೋಗ ಪ್ರತಿ ಅಭ್ಯರ್ಥಿಯ ಚುನಾವಣಾ ಖರ್ಚನ್ನು 70 ಲಕ್ಷ ಹಣ ಮಿತಿಗೊಳಿಸಲಾಗಿತ್ತು.
ಇವರುಗಳಿಗೆ ಹೋಲಿಸಿದರೇ ಪಕ್ಷೇತರ ಅಭ್ಯರ್ಥಿ ಅತಿ ಕಡಿಮೆ ಹಣ ಖರ್ಚು ಮಾಡಿದ್ದಾರೆ., ಚಿಕ್ಕೋಡಿಯಲ್ಲಿ ಎಂಜಿ ಮೋಟಣ್ಣನವರ್ 21,240 ಸಾವಿರ ರು ಹಾಗೂ ಆರ್ ಆರ್ ಭಜಂತ್ರಿ 18 ಸಾವಿರ ವ್ಯಯ ಮಾಡಿದ್ದಾರೆ, ಅನಿಲ್ ಹೆಗ್ಡೆ 14,050 ಹಾಗೂ ಸಂತೀಷ್ ಕಾಂಬ್ಳೆ 13,108 ಮತ್ತು ಸಂಜಯ್ ಕಾಂಬ್ಳೆ 13 ಸಾವಿರ ರು ಖರ್ಚು ಮಾಡಿದ್ದಾರೆ. ಒಟ್ಟು 597 ಅಭ್ಯರ್ಥಿಗಳು ಕಣದಲ್ಲಿದ್ದು, ಅದರಲ್ಲಿ ಬೆಳಗಾವಿಯಲ್ಲಿ 11 ಅಭ್ಯರ್ಥಿಗಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com