ಖರ್ಗೆ ವಿರುದ್ದ ಹೋರಾಟ ನಡೆಸಿ, ಟಿಕೆಟ್ ಗೋಸ್ಕರ ಕಾಲಿಗೆ ಬಿದ್ದ ಸುಭಾಷ್ ರಾಥೋಡ್ ನೀತಿಗೆಟ್ಟವನು: ಉಮೇಶ್ ಜಾಧವ್

ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಮಾಜಿ ಶಾಸಕ ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇಂದು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

Published: 09th May 2019 12:00 PM  |   Last Updated: 09th May 2019 12:06 PM   |  A+A-


Collection photo

ಸಂಗ್ರಹ ಚಿತ್ರ

Posted By : ABN ABN
Source : UNI
ಚಿಂಚೋಳಿ: ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಮಾಜಿ ಶಾಸಕ ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇಂದು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವುದಕ್ಕೂ ಮುನ್ನ ಇಂದು ಚಿಂಚೋಳಿಯ ತಮ್ಮ  ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಲ್ಕಾರು ಪಕ್ಷಗಳನ್ನು ತಿರುಗಿ ಬಂದ ಸುಭಾಷ್ ರಾಥೋಡ್ ನೀತಿಗೆಟ್ಟವನು. ನನ್ನ ಬಗ್ಗೆ ಹಾಗೂ ನನ್ನ ಮಗನ ಬಗ್ಗೆ ಮಾತನಾಡಲು ಅವನಿಗೆ ಅಧಿಕಾರವಿಲ್ಲ ಎಂದು ಟೀಕಿಸಿದರು.

ಖರ್ಗೆ ವಿರುದ್ದ ತನ್ನ ಜೀವನ ಪೂರ್ತಿ ಹೋರಾಟವನ್ನು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ನಡೆಸಿಕೊಂಡು ಬಂದಿದ್ದಾನೆ. ಈಗ ಟಿಕೆಟ್ ಗೋಸ್ಕರ ಅವರ ಕಾಲಿಗೆ ಬಿದ್ದ ತನ್ನ ತನವನ್ನು ತೋರಿಸಿಕೊಟ್ಟಿದ್ದಾನೆ. ನನ್ನ  ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಪಕ್ಷವನ್ನು ತೊರದಿದ್ದೇನೆ ಎಂದರು.

ನನ್ನ ತಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ಅವರು ನನಗೆ ಊಟ ಮಾಡಿದ ತಟ್ಟೆಯನ್ನು ಕಾಲಿನಿಂದ ತಳ್ಳುವುದನ್ನು ಹೇಳಿ ಕೊಟ್ಟಿಲ್ಲ.ಸುಭಾಷ್ ರಾಥೋಡ್ ಈಗಾಗಲೇ ನಾಲ್ಕು ಪಕ್ಷಗಳ ತಟ್ಟೆಯನ್ನು ಕಾಲಿನಿಂದ ತಳ್ಳಿದ್ದಾನೆ. ಕ್ಷೇತ್ರದ ಹೊರಗಿನವನಾದ ರಾಥೋಡ್ ನ್ನು ಚಿಂಚೋಳಿ ಕ್ಷೇತ್ರದ ಮತದಾರರು ತಿರಸ್ಕರಿಸಲಿದ್ದಾರೆ.ಈ ಬಾರಿ ಉಪಚುಣಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಮತ್ತೊಮ್ಮೆ ಪಕ್ಷವನ್ನು ಬದಲಾಯಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂಚೋಳಿ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರ ಕೆಲಸ ಅವರು ಮಾಡುತ್ತಾರೆ, ನನ್ನ ಕೆಲಸ ನಾನು ಮಾಡಲಿದ್ದೇನೆ. ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲಿದ್ದೇನೆಯೇ ಹೊರತು ಯಾವುದೇ ಆರೋಪ ಮಾಡುವುದಿಲ್ಲ ಎಂದರು ಹೇಳಿದರು.

ಉಮೇಶ್ ಜಾಧವ್ ಅವರು ಇಂದು ಟೆಂಗಳಿ, ಅರಜಂಬಗಾ, ಡೋಣ್ಣೂರು, ಸಾಲಹಳ್ಳಿ, ಕೊಡದೂರು, ಮಂಗಲಗಿ, ಮಳಗಿ, ರಾಜಾಪೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp