ಬಿಜೆಪಿ ಮುಂದಿನ ಸಾರಥಿ ಯಾರು? ಒಕ್ಕಲಿಗ ಪ್ರಭಾವಿ ನಾಯಕ ಅಶೋಕ್ ಅಥವಾ ಸಂಘಟನಾ ಚತುರ ಬಿ.ಎಲ್. ಸಂತೋಷ್?

ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ...
ಆರ್. ಅಶೋಕ್, ಬಿಎಲ್ ಸಂತೋಷ್ ಮತ್ತು ಸಿ.ಟಿ ರವಿ
ಆರ್. ಅಶೋಕ್, ಬಿಎಲ್ ಸಂತೋಷ್ ಮತ್ತು ಸಿ.ಟಿ ರವಿ
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿತ್ತು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಉತ್ತರಾಧಿಕಾರಿ ಆಯ್ಕೆ ಮಾಡಲು ಹೈ ಕಮಾಂಡ್ ಹುಡುಕಾಟ ಆರಂಭಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ರೇಸ್ ನಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್, ಅರವಿಂದ ಲಿಂಬಾವಳಿ, ಸಿ.ಟಿ ರವಿ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಂಚೂಣಿಯಲ್ಲಿದ್ದಾರೆ, ಮಾಜಿ ಸಿಎಂ ಯಡಿಯೂರಪ್ಪ ವಿಧಾನಸಭೆ ವಿರೋಧ ಪಕ್ಷದ ನಾಯಕ ಹುದ್ದೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದರು. 
ಜೂನ್ 15ರ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯಾಗುತ್ತಕದೆ ಎಂದು ಮೂಲಗಳು ತಿಳಿಸಿವೆ, ಲೋಕಸಭೆ ಚುನಾವಣೆ ಫಲಿತಾಂಶ ಹಾಗೂ ಪಕ್ಷದೊಳಗಿನ ಭಿನ್ನಭಿಪ್ರಾಯದಿಂದಾಗಿ ಯಡಿಯೂರಪ್ಪ ಅಧ್ಯಕ್ಷ ಸ್ಥಾನ ಕೊನೆಗೊಳ್ಳುತ್ತದೆ,. ಆದರೆ ಕೇಂದ್ರದ ಬಿಜೆಪಿ ನಾಯಕರು ಈ ಬಗ್ಗೆ ಇನ್ನೂ ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ, ಕೇವಲ ಕೆಲವು ಮಾಧ್ಯಮಗಳು ಮಾತ್ರ ಈ ವಿಷಯವನ್ನು ಚರ್ಚಿಸುತ್ತಿವೆ, ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಕೆಲವು ಹೆಸರುಗಳು ಅಂತಿಮಗೊಂಡಿವೆ ಎಂದು ಹೇಳಲಾಗುತ್ತಿದೆ.
ಆರ್.ಅಶೋಕ, ಅರವಿಂದ ಲಿಂಬಾವಳಿ ಮತ್ತು  ಸಿ,ಟಿ ರವಿ ಚುನಾವಣೆಯಲ್ಲಿ ಗೆದ್ದು, ಅವರಿಗೆ ಆಡಳಿತದ ಅನುಭವವಿದೆ, ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಆದರೆ ಸಂತೋಷ್ ಅವರಿಗೆ  ಆರ್ ಎಸ್ ಎಸ್ ಬೆಂಬಲ ಮತ್ತು ಸಂಘಟನಾ ಚತುರತೆ ಇದೆ, ಈ ನಾಲ್ವರ ಹೆಸರು ಪ್ರಚಲಿತದಲ್ಲಿದ್ದು, ಜೂನ್ 15 ರ ನಂತರ ಈ ಹೆಸರುಗಳನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಶಿಫಾರಸು ಮಾಡಲಾಗುವುದು. ಎಂದು ತಿಳಿದು ಬಂದಿದೆ,
ಆರು ಭಾರಿ ಶಾಸಕರಾಗಿರುವ ಒಕ್ಕಲಿಗ ನಾಯಕ ಬೆಂಗಳೂರಿನ ಪ್ರಬಲ ರಾಜಕಾರಣಿ, ಆರ್. ಅಶೋಕ್ ಬಿಬಿಎಂಪಿ ಚುನಾವಣೆಯಲ್ಲಿ ಬಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಬರಲು ಕಾರಣವಾದವರು.
ಇನ್ನೂ ಸಿ.ಟಿ ರವಿ ಕೂಡ ಒಕ್ಕಲಿಗ, ಇವರು ಪಕ್ಷ ಸಂಘ ಪರಿವಾರದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುವ ಚಿಕ್ಕಮಗಳೂರು ಶಾಸಕ, ಬಾಬಾ ಬುಡನ್ ಗಿರಿಯ ದತ್ತಪೀಠ ವಿವಾದದ ರೂವಾರಿ, ನಾಲ್ಕು ಬಾರಿ ಶಾಸಕರಾಗಿರುವ ಸಿ,ಟಿ ರವಿ ತಮಿಳುನಾಡು ಚುನಾವಣೆ ಉಸ್ತುವಾರಿಯಾಗಿದ್ದರು.
ಎರಡು ಬಾರಿ ಶಾಸಕರಾಗಿರುವ ಅರವಿಂದ ಲಿಂಬಾವಳಿ ದಲಿತ ನಾಯಕ, ಇವರನ್ನು ತೆಲಂಗಾಣ ಚುನಾವಣೆ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಕರ್ನಾಟಕ ರಾಜ್ಯದ ಬಿಜೆಪಿ ಸಾರಥಿ ನೇಮಕ ವಿಷಯದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ, ಕರ್ನಾಟಕ ಬಿಜೆಪಿಯ ದಕ್ಷಿಣ ಭಾರತದ ಹೆಬ್ಬಾಗಿಲಾಗಿದೆ, 
ಯಡಿಯೂರಪ್ಪ ಕರ್ನಾಟಕದ ಮಾಸ್ ಲೀಡರ್, ಯಡಿಯೂರಪ್ಪ ಮಹತ್ವ ಏನು ಎಂಬುದು ಎಲ್ಲರಿಗೂ ತಿಳಿದಿದೆ, ಯಡಿಯೂರಪ್ಪ ಬಿಜೆಪಿ ತೊರೆದು ಹೋಗಿದ್ದಾಗ ಆದ ಪರಿಣಾಮದ ಅರಿವೂ ಎಲ್ಲರಿಗೂ ಇದೆ. ಕೇವಲ ಈ ನಾಲ್ಕು  ನಾಯಕರ ಹೆಸರುಗಳು ಅಂತಿಮವಲ್ಲ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ರೇಸ್ ನಲ್ಲಿದ್ದಾರೆ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಎಲ್ಲವೂ ನಿರ್ಧಾರ ವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com