ನಾವೇನು ಬಿಟ್ಟಿ ಕೂತಿದ್ದೀವಾ? ರಾಜಕೀಯದ ಬಗ್ಗೆ ನಿಮಗೇನು ಗೊತ್ತು? ಟಿವಿ ಮಾದ್ಯಮಗಳ ಮೇಲೆ ಸಿಎಂ ಮುನಿಸು

ವಿದ್ಯುನ್ಮಾನ ಮಾಧ್ಯಮಗಳ ನಿಗ್ರಹಕ್ಕಾಗಿ ಹೊಸ ಕಾನೂನು ಪರಿಚಯಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಲೋಚಿಸುತ್ತಿದ್ದಾರೆ."ಎಲೆಕ್ಟ್ರಾನಿಕ್ ಮಾಧ್ಯಮವು ಯಾವುದೋ ನಿರ್ದಿಷ್ಟ ಉದ್ದೇಶ ಮತ್ತು ಆಶಯದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ, ಮತ್ತುಅದರಿಂದ ಕೆಲವೊಂದು ತಪ್ಪುಗಳು....
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಮೈಸೂರು:  ವಿದ್ಯುನ್ಮಾನ ಮಾಧ್ಯಮಗಳ ನಿಗ್ರಹಕ್ಕಾಗಿ ಹೊಸ ಕಾನೂನು ಪರಿಚಯಿಸಲು ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಲೋಚಿಸುತ್ತಿದ್ದಾರೆ."ಎಲೆಕ್ಟ್ರಾನಿಕ್ ಮಾಧ್ಯಮವು ಯಾವುದೋ ನಿರ್ದಿಷ್ಟ ಉದ್ದೇಶ ಮತ್ತು ಆಶಯದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ, ಮತ್ತುಅದರಿಂದ ಕೆಲವೊಂದು ತಪ್ಪುಗಳು ಸಂಭವಿಸುತ್ತಿದೆ. ಹೀಗಾಗಿ ಅವನ್ನು ನಿಗ್ರಹಿಸಲು ಹೊಸ ಕಾನೂನನ್ನು ಪರಿಚಯಿಸಲು ಯೋಜಿಸಿದ್ದೇನೆ" ಸಿಎಂ ಕುಮಾರಸ್ವಾಮಿ ಭಾನುವಾರ ಹೇಳಿದ್ದಾರೆ.
ಮೈಸೂರಿನಕಲಾಮಂದಿರದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್ ಬರೆದಿರುವ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದ್ದಾರೆ.
30 ನಿಮಿಷಗಳ ಕಾಲ ಮಾತನಾಡಿದ ಕುಮಾರಸ್ವಾಮಿ ಎಲೆಕ್ಟ್ರಾನಿಕ್ ಮಾಧ್ಯಮದ ಬಗೆಗೆನ ಅವರ ಬೇಸರವನ್ನು ಹೊರಹಾಕಿದ್ದಾರೆ. ಮುದ್ರಣ ಮಾಧ್ಯಮಗಳು ಹಿರಿಯರು ತೋರಿಸಿಕೊಟ್ಟ ಮಾರ್ಗದಲ್ಲಿಯೇ ಇಂದಿಗೂ ಸಾಗುತ್ತಿವೆ. ಆದರೆ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ದಿಕ್ಕು ದೆಸೆಗಳಿಲ್ಲದಂತಾಗಿದೆ.  ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜಕೀಯ ಬೆಳವಣಿಗೆಗಳ ಕುರಿತು ಟಿವಿ ಚಾನಲ್ ಗಳು ಪ್ರಸಾರ ಮಾಡಿರುವ ಸುದ್ದಿಯ ಬಗೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ನಾವೇನು ಇಲ್ಲಿ ಬಿಟ್ಟಿ ಬಿದ್ದಿದ್ದೇವಾ?  ರಾಜಕೀಯದ ಬಗ್ಗೆ ನಿಮಗೆ ಏನು ಗೊತ್ತು? ಟಿಆರ್ ಪಿಗಾಗಿ ನೀವು ಏಕೆ ಮೂಲಭೂತವಾದಿಗಳಾಗುತ್ತಿದ್ದೀರಿ? ನೀವೇಕೆ ನಮ್ಮ ಮೇಲೆ ವ್ಯಥಾ ಆರೊಪಿಸಿದ್ದೀರಿ? "ಮಾಧ್ಯಮವು ಸಮಾಜದ ಅಭಿವೃದ್ಧಿಯಲ್ಲಿಪ್ರಮುಖ ಪಾತ್ರ ವಹಿಸುತ್ತದೆ.ಆದ ಕಾರಣ ಕೃಷಿಕರ, ರೈತರ ಬಗೆಗೆ ಹೆಚ್ಚು ಕಾಳಜಿಯುತ ಕಾರ್ಯಕ್ರಮ ನೀಡಿರಿ ಎಂದು ಸಿಎಂ ಕರೆ ಕೊಟ್ಟಿದ್ದಾರೆ.
 'ನಿಖಿಲ್ ಎಲ್ದ್ದಿದ್ದೀಯಪ್ಪಾ" ಎಂಬ ಜನಪ್ರಿಯ ಟ್ರೋಲ್ ಬಗೆಗೆ ಮಾತನಾಡಿದ ಸಿಎಂಟಿವಿ ಚಾನಲ್ಗಳಲ್ಲಿ ಪ್ರಸಾರವಾದ ಸುದ್ದಿ ವಾಸ್ತವದಿಂದ ದೂರವಾಗುತ್ತಿವೆ ನಿಖಿಲ್ ಹಾಗೂ ಮಂಡ್ಯ ಸಂಬಂಧಿಒತ ಕಾರ್ಯಕ್ರಮಗಳನ್ನು ಪ್ರತಿ 30 ನಿಮಿಷಗಳಿಗೊಮ್ಮೆ ಪ್ರಸಾರ ಮಾಡುತ್ತಿದೆ.ಶನಿವಾರ ನಗರಕ್ಕೆ ಭೀಟಿ ಕೊಟ್ಟದ್ದಕ್ಕೆ ಟಿವಿ ಮಾದ್ಯಮಗಳು ಇಲ್ಲಿನ ಸ್ಥಲೀಯ ನಾಯಕರು ಮುಂದಿನ ರಾಜಕೀಯ ಬೆಳವಣಿಗೆಗೆಅಳ ಕುರಿತು ಚರ್ಚಿಸಲು ಮುಖ್ಯಮಂತ್ರಿಗಳೊಡನೆ ಸಭೆ ನಡೆಸಲಿದ್ದಾರೆ ಎಂದು ಬ್ರೇಕಿಂಗ್ ನ್ಯೂಸ್ ಹೇಳಿದ್ದವು, ಆದರೆ ವಾಸ್ತವವೌ ಬೇರೆಯಾಗಿದೆ."
"ನಮ್ಮ ಕುಟುಂಬವು ಚುನಾವಣೆಯಲ್ಲಿ ಸೋಲುತ್ತದೆ ಎಂಬ ಹೆದರಿಕೆಯಿಲ್ಲ, ಏಕೆಂದರೆ ನಮಗೆ ಸೋಲು ಹಾಗೂ ಗೆಲುವು ಎರಡನ್ನೂ ಸಮಾನವಾಗಿ ಕಾಣುವ ಮನೋಧರ್ಮವಿದೆ.ನಾನು ಮುಖ್ಯಮಂತ್ರಿ ಗಾದಿಗೆ ಅಂಟಿಕೊಳ್ಳಲ್ಲ, ಗ್ರಾಮ ಪಂಚಾಯ್ತಿಯಿಂದ ಪ್ರಧಾನಿ ಹುದ್ದೆವರೆಗೆ ಹೆಜ್ಜೆಗುರುತು ಮೂಡಿಸಿದ ಕುಟುಂಬ ನಮ್ಮದು" ಅವರು ಹೇಳೀದ್ದಾರೆ.
"ಸುದ್ದಿವಾನಿನಿಗಳ ಬಗೆಗೆ ನನಗೆ ಮರುಕವಿದೆ. ನಾನು ಈಗ ಅವರಿಂದ ದೂರವಿರಲು ನಿರ್ಧರಿಸಿದ್ದೇನೆ. ಅವರು ಬಯಸುವ ಂತೆ ಅವರು ವರದಿ ಪ್ರಕಟಿಸಲಿ." ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com