ಚಾಮರಾಜನಗರ: ಪ್ರಸಾದ್ ಗೆಲುವಿನಲ್ಲಿ ವೀರಪ್ಪನ್ ಮಾಜಿ ಸಹಚರರ ಕುಟುಂಬ ನಿರ್ಣಾಯಕ ಪಾತ್ರ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವ ನಾರಾಯಣ್ ವಿರುದ್ಧ ಕೇವಲ 1.816 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ರೋಚಕ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ.

Published: 26th May 2019 12:00 PM  |   Last Updated: 26th May 2019 11:33 AM   |  A+A-


srinivasa Prasad

ಶ್ರೀನಿವಾಸ್ ಪ್ರಸಾದ್

Posted By : ABN
Source : The New Indian Express
ಮೈಸೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವ ನಾರಾಯಣ್ ವಿರುದ್ಧ ಕೇವಲ 1.816 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್  ರೋಚಕ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ.

ಚಾಮರಾಜನ ನಗರ ಕ್ಷೇತ್ರದ ದಲಿತ ನಾಯಕನ ಗೆಲುವಿನಲ್ಲಿ ಸಣ್ಣದೊಂದು ಸಮುದಾಯದ ನಿರ್ಣಾಯಕ ಪಾತ್ರ ವಹಿಸಿದೆ.ಕೆಲವು ದಶಕಗಳ ಹಿಂದೆ ಈ ಪ್ರದೇಶದಲ್ಲಿ ಭಯ ಭೀತಿ ಹುಟ್ಟಿಸುತ್ತಿದ್ದ ದಂತ ಚೋರ ವೀರಪ್ಪನ್ ಮಾಜಿ ಸಹಚರರು ಹಿನ್ನೆಡೆಯಲ್ಲಿದ್ದ ಶ್ರೀನಿವಾಸ್ ಪ್ರಸಾದ್ ಕೈ ಹಿಡಿದಿದ್ದಾರೆ.

ವೀರಪ್ಪನ್ ನ ಸುಮಾರು 100 ಮಾಜಿ ಸಹಚರರು ಹಾಗೂ ಅವರ ಕುಟುಂಬದವರು ಈ ಬಾರಿ ಪ್ರಸಾದ್ ಅವರಿಗೆ ಮತ ಚಲಾಯಿಸಿದ್ದು, ಪ್ರಸಾದ್ ಅವರಿಗೆ ಧನ್ಯವಾದ ಆರ್ಪಿಸಿದ್ದಾರೆ.ಅಷ್ಟಕ್ಕೂ ಪ್ರಸಾದ್ ಗೆ ಮತ ಹಾಕಲು ಕಾರಣವೇನು ಎಂಬುದಕ್ಕೆ ಇಲ್ಲಿದೆ ಮಾಹಿತಿ.

1999ರಲ್ಲಿ ಶ್ರೀನಿವಾಸ್ ಪ್ರಸಾದ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ 12 ಮಹಿಳೆಯರು ಸೇರಿದಂತೆ ಸುಮಾರು 140 ಜನರ ಮೇಲೆ  ರಾಜ್ ಕುಮಾರ್ ಪ್ರತಿಮೆ ಅಪಹರಣ, ಪೊಲೀಸರ ಕೊಲೆ ಮತ್ತಿತರ ಆರೋಪದಡಿಯಲ್ಲಿ ಟಾಡಾ ಕೇಸ್ ದಾಖಲಿಸಿ, ಹೈಕೋರ್ಟ್ ನಿಂದ ಸ್ಥಾಪಿಸಲಾಗಿದ್ದ ಟಾಡಾ ನ್ಯಾಯಾಲಯಕ್ಕೆ ಪ್ರತಿನಿತ್ಯ ಅಲೆಯುವಂತೆ ಮಾಡಲಾಗಿತ್ತು.

ಗಡಿ ಗ್ರಾಮಗಳಾದ ಹನೂರು, ಮಹದೇಶ್ವರ ಬೆಟ್ಟ,ನಲ್ಲೂರುಗಳಿಂದ ಮೈಸೂರು ನ್ಯಾಯಾಲಯಕ್ಕೆ ನಿತ್ಯ ಬಂದು ಹೋಗುವ ಯಾತನೆ ಅನುಭವಿಸಿದ್ದ ಇವೆರೆಲ್ಲರೂ ಒಂದು ಬಾರಿ ಪ್ರಸಾದ್ ಸಹಾಯ ಕೇಳಿದ್ದಾರೆ. ನಿತ್ಯ ಬಂದು ಹೋಗುವುದರಿಂದ ತೀವ್ರ ತೊಂದರೆಯಾಗುತ್ತಿದ್ದು, ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡಿದ್ದಾರೆ.

ನಂತರ ಶ್ರೀನಿವಾಸ್ ಪ್ರಸಾದ್  ತಮ್ಮ ಫಾರ್ಮ್ ಹೌಸ್ ನಲ್ಲಿಯೇ  ಅವರೆಲ್ಲರೂ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಟ್ಟಿದ್ದಾರಲ್ಲದೆ, ಆರು ತಿಂಗಳ ಕಾಲ ಉಚಿತವಾಗಿ ಪಡಿತರ ಒದಗಿಸಿದ್ದಾರೆ. ಇವರಲ್ಲಿ 14 ಮಂದಿ ಟಾಡಾ ನ್ಯಾಯಾಲಯ ಆರೋಪಿಗಳೆಂದು ಪರಿಗಣಿಸಿ ಉಳಿದವರನ್ನು ದೋಷಮುಕ್ತಗೊಳಿಸಿದೆ.

ನ್ಯಾಯಾಲಯದಿಂದ ದೋಷಮುಕ್ತಗೊಂಡ ಕುಟುಂಬದವರೆಲ್ಲೂ ಒಟ್ಟಿಗೆ ವಾಸಿಸುತ್ತಿದ್ದು, ಪ್ರಸಾದ್ ಜೊತೆಗೆ ಸಭೆ ನಡೆಸಿ, ಈ ಬಾರಿಗೆ ಅವರನ್ನು ಬೆಂಬಲಿಸಿದ್ದಾರೆ. ದೋಷಮುಕ್ತಗೊಂಡ ಆರೋಪಿಗಳಲ್ಲಿ ಒಬ್ಬರಾದ ಮಾರತ್ ಹಳ್ಳಿ ಮಣಿ ಎಂಬುವರು ಹಾರ್ಡ್ ವೇರ್ ಅಂಗಡಿ ಇಟ್ಟುಕೊಂಡಿದ್ದು, ಜೀವನ ಕಟ್ಟಿಕೊಂಡಿದ್ದಾರೆ. ಪ್ರಸಾದ್ ಅತಿಥ್ಯ ಸೇವೆಯನ್ನು ನೆನಪಿಸಿಕೊಂಡು ಈ ಬಾರಿ ಅವರನ್ನು ಬೆಂಬಲಿಸಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಸಮಾಜದಿಂದ ದೂರವಿಟ್ಟಾಗ ಅವರಿಗೆ ಶ್ರೀನಿವಾಸ್ ಪ್ರಸಾದ್ ನೆರವು ನೀಡಿದ್ದಾರೆ ಎಂದು ನೆಲ್ಲೂರಿನ ಕಾಮರಾಜ್ ಹೇಳುತ್ತಾರೆ. ಪ್ರಸಾದ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವುದು ತುಂಬಾ ಸಂತೋಷವಾಗಿದೆ ಎಂದು ನೆಲ್ಲೂರಿನ ಮುನಿಸ್ವಾಮಿ ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್,  ವೀರಪ್ಪನ್ ಮಾಜಿ ಸಹಚರರಿಗೆ ನಾನು ಯಾವುದೇ ರೀತಿಯ  ಸಹಾಯ ಮಾಡಲಿಲ್ಲ. ಅವರೆಲ್ಲರೂ ಬಡವರಾಗಿದ್ದು, ಮೈಸೂರಿನಲ್ಲಿದ್ದ ನ್ಯಾಯಾಲಯಕ್ಕೆ ಪ್ರತಿನಿತ್ಯ 150 ಕಿಲೋಮೀಟರ್ ದೂರದಿಂದ ಬರುವುದು ಕಷ್ಟವಾಗುತಿತ್ತು. ಎರಡು ದಶಕಗಳ ನಂತರ ಇದನ್ನು ನೆನಪಿಸಿಕೊಂಡು ಚುನಾವಣೆಯಲ್ಲಿ ನನ್ನಗೆ ಬೆಂಬಲ ನೀಡಿರುವುದು ತುಂಬಾ ಸಂತಸವಾಗಿದೆ ಎಂದಿದ್ದಾರೆ.
Stay up to date on all the latest ರಾಜಕೀಯ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp