ನಾನು ತಪ್ಪು ಮಾಡಿದ್ರೆ ಬಿಜೆಪಿ ಸ್ನೇಹಿತರು ಯಾವ ಶಿಕ್ಷೆ ಕೊಟ್ರೂ ಅನುಭವಿಸುವೆ: ಡಿ.ಕೆ.ಶಿವಕುಮಾರ್

ನಾನೇನಾದರೂ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ಬಿಜೆಪಿ ಸ್ನೇಹಿತರು ನನಗೆ ನೀಡಲಿ.ಶಿಕ್ಷೆ ಅನುಭವಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್

ಬೆಂಗಳೂರು: ನಾನೇನಾದರೂ ತಪ್ಪು ಮಾಡಿದ್ದರೆ ಯಾವ ಶಿಕ್ಷೆ ಬೇಕಾದರೂ ಬಿಜೆಪಿ ಸ್ನೇಹಿತರು ನನಗೆ ನೀಡಲಿ.ಶಿಕ್ಷೆ ಅನುಭವಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಗಾಂಧಿ ನಗರದಲ್ಲಿ ಆಯೋಜಿಸಿದ್ದ 64ನೇ ಕನ್ನಡ ರಾಜ್ಯೋತ್ಸ ವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಗಾಂಧಿನಗರದ ಪ್ರತಿಯೊಂದು ಹಾವ, ಭಾವ ಅರಿತುಕೊಂಡು ಬಂದವನು. ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಮಾಡಿದ್ದು ನನ್ನ ಭಾಗ್ಯ ಎಂದು ಹೇಳಿದರು.

ತಮ್ಮನ್ನು ಇಡಿ ಅಧಿಕಾರಿಗಳು ಬಂಧಿಸಿದ ವೇಳೆಯಲ್ಲಿ ನಾನು ತಪ್ಪು ಮಾಡಿದ್ದೇನೋ? ಬಿಟ್ಟಿದ್ದೇನೊ? ಎನ್ನುವುದು ನೋಡ ದೇ ಎಲ್ಲವೂ ನಡೆದು ಹೋಯಿತು.ಆಗ ನನ್ನ ಪರ ಹೋರಾಟ ಮಾಡಿದ್ದು ನಾರಾಯಣಗೌಡರು.ನಾನು ಹೋರಾಟ ಮಾಡಿ ಎಂದು ಅವರಿಗೆ ಹೇಳಿರಲಿಲ್ಲ.ಆದರು ಅವರು ಹೋರಾಟ ಮಾಡಿದರು.ಇನ್ನು ಕೆಲವು ಮುಖಂಡರು ಜೈಲಿಗೆ ಕಳಿಸುತ್ತೇವೆ ಎಂದು ಹೇಳುತ್ತಿದ್ದರು. ಅವರ ಹೆಸರು ಹೇಳುವುದು ಬೇಡ.ಆಗ ನನಗೆ ಏನೆಲ್ಲಾ ಆಮಿಷ ಬಂದಿತ್ತು ಎನ್ನುವುದನ್ನು ಈಗ ಹೇಳು ವುದು ಬೇಡ.ನನ್ನನ್ನು ಬಂಧಿಸಿದಾಗ ಹೋರಾಟ ಮಾಡಿ ಇತಿಹಾಸ ಸೃಷ್ಟಿಸಿದ್ದೀರಿ,ಸರಿ ಯಾವುದು ತಪ್ಪು ಯಾವುದು? ಎನ್ನುವುದನ್ನು ಜನರೇ ತೀರ್ಮಾನ ಮಾಡುತ್ತಾರೆ ಎಂದರು.

ನನ್ನ ಪರ ನಗರದಲ್ಲಿ ಪ್ರತಿಭಟನೆ ಮಾಡುವಾಗ ಪೊಲೀಸರು ದೇವೇಗೌಡರ ಮೇಲೆ ಏನೆಲ್ಲ ಒತ್ತಡ ತಂದರು,ನಾರಾಯಣ ಗೌಡರಿಗೆ ಏನೆಲ್ಲ ಧಮಕಿ ಹಾಕಿದರು ಎನ್ನುವುದು ನನಗೆ ತಿಳಿದಿದೆ ಎಂದ ಅವರು,ನಾಡಿನ ಧ್ವಜದ ಹೆಸರಲ್ಲಿ ಜಾತಿ, ಧರ್ಮ ,ಮತ ಎಲ್ಲವನ್ನೂ ಬಿಟ್ಟು ನಾಡನ್ನು ರಕ್ಷಣೆ ಮಾಡ ಬೇಕು ಎಂದು ಅವರು ಕರೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಹಳ ಎಚ್ಚರದಿಂದಿರಿ ಕಾನೂನನ್ನು ಕೈಗೆ ತೆಗೆದುಕೊಳ್ಳ ಬೇಡಿ ಕಾನೂನು ಪಾಲಿಸಿ.ಇಲ್ಲದಿದ್ದರೆ ಬೆಳಿಗ್ಗೆಯಿಂದ ಸಂಜೆವರೆಗೆ ಕೋರ್ಟ್​ ಕಚೇರಿ ಅಲೆಯದಾಡ ಬೇಕಾಗುತ್ತದೆ ಎಂದು ಸಂದೇಶ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com