ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಗೆ ದಾವಣಗೆರೆ, ಬಿಜೆಪಿ ತೆಕ್ಕೆಗೆ ಮಂಗಳೂರು

 ರಾಜ್ಯದ 14 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಕಾಂಗ್ರೆಸ್ ವಶವಾಗಿದ್ದರೆ ಮಂಗಳೂರಿನಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ 14 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಕಾಂಗ್ರೆಸ್ ವಶವಾಗಿದ್ದರೆ ಮಂಗಳೂರಿನಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಿದೆ.

ಎರಡು ಮಹಾನಗರ ಪಾಲಿಕೆ, ಆರು ನಗರಸಭೆ, ಮೂರು ಪುರಸಭೆ ಹಾಗೂ ಮೂರು ಪಟ್ಟಣ ಪಂಚಾಯ್ತಿಗಳಿಗೆ ನಡೆಅ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ದಾವಣಗೆರೆ ಮಹಾನಗರ ಫಾಲಿಕೆಯ 45 ವಾರ್ಡ್ ಗಳ ಪೈಕಿ 22ರಲ್ಲಿ ಕಾಂಗ್ರೆಸ್ ಗೆಲುವು ಕಂಡರೆ 17ರಲ್ಲಿ ಬಿಜೆಪಿಗೆ ಜಯ ಲಭಿಸಿದೆ. ಇಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿ ಅಧಿಕಾರದ ಗದ್ದುಗೆ ಏರಿದೆ. ಇನ್ನು ಐದು ವಾರ್ಡ್ ಗಳಲ್ಲಿ ಪಕ್ಷೇತರರು ಜಯ ಸಾಧಿಸಿದ್ದರೆ ಓರ್ವ ಜೆಡಿಎಸ್ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಇಲ್ಲಿ 45  ವಾರ್ಡ್ ಗಳಲ್ಲಿ ಒಟ್ತಾರೆ ೨೦೮ ಅಭ್ಯರ್ಥಿಗಳು ಕಣದಲ್ಲಿದ್ದರು.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು 60 ವಾರ್ಡ್ ಗಳ ಪೈಕಿ 38ರಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ, 20 ವಾರ್ಡ್ ಗಳಲ್ಲಿ ಗೆಲುವಿನ ನಗು ಬೀರಿದೆ. ಹಾಗಾಗಿ ಕೇಸರಿ ಪಕ್ಷ ಕರಾವಳಿ ನಗರಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಇನ್ನು ಎದುರಾಳಿ ಕಾಂಗ್ರೆಸ್ ಕೇವಲ ಆರು ವಾರ್ಡ್ ಗಳಲ್ಲಿ ಮಾತ್ರ ಗೆಲುವು ಕಂಡಿದ್ದಾರೆ.

ಕನಕಪುರ ನಗರಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರವಲ್ಲಿ ಯಶಸ್ವಿಯಾಗಿದ್ದು 26ನೇ ವಾರ್ಡ್ ವಿವೇಕಾನಂದ ನಗರದ ಬಿಜೆಪಿ ಮಹಿಳಾ ಅಭ್ಯರ್ಥಿ ತಮ್ಮ ಎದುರಾಳಿಯನ್ನು 136 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.31 ಸದಸ್ಯಬಲದ ನಗರಸಭೆಯಲ್ಲಿ ಕಾಂಗ್ರೆಸ್ 26  ಸ್ಥಾನ ಗಳಿಸಿದರೆ ಬಿಜೆಪಿಗೆ ಒಂದು ಸ್ಥಾನ ಮಾತ್ರವೇ ಲಭಿಸಿದೆ.

ಗೌರಿಬಿದನೂರು ನಗರಸಭೆಯಲ್ಲಿಯೂ ಕಾಂಗ್ರೆಸ್ ಜಯಭೇರಿ ಮೊಳಗಿಸಿದ್ದು 31 ಸದಸ್ಯಬಲದ ನಗರಸಭೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗಳಿಸಿದ್ದರೆ ಬಿಜೆಪಿ ಮೂರು, ಡಿಎಸ್ 6 ಹಾಗೂ ಪಕ್ಷೇತರರು 7 ಸ್ಥಾನ ಗಳಿಸಿದ್ದಾರೆ.

ಕೋಲಾರ, ಮುಳಬಾಗಿಲು, ಕೆಜಿಎಫ್‍ ಕೂಡ್ಲಗಿ ಅತಂತ್ರವಾಗಿದ್ದು ಕುಂದಗೋಳ ಪಟ್ಟಣ ಪಂಚಾಯ್ತಿಯಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ.ಒಟ್ಟು ೧೯ ಸ್ಥಾನಗಳ ಪೈಕಿ ಬಿಜೆಪಿ ೧೨ರಲ್ಲಿ ಜಯ ದಾಖಲಿಸಿದೆ. ಕಾಂಗ್ರೆಸ್ ೫, ಪಕ್ಷೇತರರು ೨ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.ಇನ್ನು ಜೋಗ್ ಕಾರ್ಗಲ್ ನಲ್ಲಿ ಸಹ ಬಿಜೆಪಿ ಗೆಲುವು ಸಾಧಿಸಿದ್ದು ೧೧ ವಾರ್ಡ ಗಳ ಪೈಕಿ ಬಿಜೆಪಿ ೯ರಲ್ಲಿ ಗೆಲುವು ಕಂಡರೆ ಕಾಂಗ್ರೆಸ್ ಪಾಲಿಗೆ ಕೇವಲ ಎರಡು ಸ್ಥಾನ ಲಭಿಸಿದೆ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಪಾಲಿಗೆ ಒಲಿದಿದ್ದ ಜೋಗ ಕಾರ್ಗಲ್ ಈ ಬಾರಿ ಕೇಸರಿ ಪಕ್ಷದ ತೆಕ್ಕೆ ಸೇರಿದೆ.

 ಮೂರು ಪುರಸಭೆಳ ಪೈಕಿ ಲ್ಲಿ ಕಂಪ್ಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ  ಮಾಗಡಿಯಲ್ಲಿ ಜೆಡಿಎಸ್ಗೆ ಜಯಮಾಲೆ ಒಲಿದಿದೆ. . ಬೀರೂರು ಪುರಸಭೆ ಅತಂತ್ರವಾಗಿದ್ದು 23 ಸ್ಥಾನದ ಪೈಕಿ  10 ಬಿಜೆಪಿ, 9 ಕಾಂಗ್ರೆಸ್, 2 ಜೆಡಿಎಸ್, ಪಕ್ಷೇತರರು ಎರಡು ಸ್ಥಾನದಲ್ಲಿ ಜಯ ಸಾಧಿಸಿದ್ದಾರೆ.

ಒಟ್ತಾರೆ ಮಧ್ಯಾಹ್ನದವರೆಗೆ ಪ್ರಕಟವಾಗಿರುವ 283 ವಾರ್ಡ್‍ಗಳ ಫಲಿತಾಶದ ಪೈಕಿ  ಬಿಜೆಪಿ 87, ಕಾಂಗ್ರೆಸ್ 101, ಜೆಡಿಎಸ್ 47, ಪಕ್ಷೇತರರು 28, ಇತರೆ 20 ಸ್ಥಾನ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com