15 ಕ್ಷೇತ್ರಗಳ ಉಪಚುನಾವಣೆ: ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಪಾಲಿಗೆ ಸತ್ವ ಪರೀಕ್ಷೆ

ಕಾಂಗ್ರೆಸ್ ನ 12 ಶಾಸಕರು ರಾಜಿನಾಮೆ ನೀಡುವುದರ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಪಕ್ಷಕ್ಕೆ ಮುಜುಗರಗೊಳಿಸಿದ್ದು ಈಗ ಇತಿಹಾಸ,  ಒಟ್ಟು 15 ಶಾಸಕರ ರಾಜಿನಾಮೆ ನಂತರ  ಬಿಜೆಪಿ ಸರ್ಕಾರ ರಚನೆಯಾಯಿತು.

Published: 14th November 2019 09:44 AM  |   Last Updated: 14th November 2019 09:44 AM   |  A+A-


Siddaramaih

ಸಿದ್ದರಾಮಯ್ಯ

Posted By : Shilpa D
Source : The New Indian Express

ಮೈಸೂರು: ಕಾಂಗ್ರೆಸ್ ನ 12 ಶಾಸಕರು ರಾಜಿನಾಮೆ ನೀಡುವುದರ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಪಕ್ಷಕ್ಕೆ ಮುಜುಗರಗೊಳಿಸಿದ್ದು ಈಗ ಇತಿಹಾಸ,  ಒಟ್ಟು 15 ಶಾಸಕರ ರಾಜಿನಾಮೆ ನಂತರ  ಬಿಜೆಪಿ ಸರ್ಕಾರ ರಚನೆಯಾಯಿತು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡು ರಾವ್ ಪಕ್ಷಾಂತರಗಾರರ ವಿರುದ್ಧ ಕಠಿಣ ಕಾನೂನುಗಳನ್ನು ಒತ್ತಾಯಿಸಿದ್ದಾರೆ. ಹಾಗೂ ಅನರ್ಹ ಶಾಸಕರಿಗೆ ಟಿಕೆಟ್ ನಿರಾಕರಿಸುವ ಮೂಲಕ ಬಿಜೆಪಿಗೆ ನೈತಿಕ ನಿಲುವನ್ನು ಪ್ರದರ್ಶಿಸುವಂತೆ ಆಗ್ರಹಿಸಿದ್ದಾರೆ.

ಈ ಉಪಚುನಾವಣೆ ಕೇವಲ ಕಾಂಗ್ರೆಸ್ ಗೆ ಮಾತ್ರವಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸವಾಲಾಗಿದೆ, ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಾಗಿ ಪಕ್ಷವನ್ನು ಮರಳಿ ಕಟ್ಟಬೇಕಾಗಿದೆ. ಸಿದ್ದರಾಮಯ್ಯ ಅವರ ಪಾಲಿಗೆ ಇದು ಸತ್ವ ಪರೀಕ್ಷೆಯಾಗಿದೆ, ಏಕೆಂದರೇ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಸಿದ್ದರಾಮಯ್ಯ ವಿರುದ್ಧ ಮತ್ತಷ್ಟು ಗೊಣಗಾಟಳು ಆರಂಭವಾಗಲಿವೆ.

ಪಕ್ಷದ ಹೈಕಮಾಂಡ್ ಪ್ರಬಲ ನಾಯಕ ನಾಯಕತ್ವದ ಮೇಲೆ ನಂಬಿಕೆಯಿಟ್ಟಿದ್ದಾರೆ.ಉಪ ಚುನಾವಣೆಯಲ್ಲಿ ಎಲ್ಲಾ 15 ಸೀಟುಗಳನ್ನು ಗೆಲ್ಲಲು ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಲು  ನಿರ್ಧರಿಸಿದ್ದಾಗಿ ಮಾಜಿ ಸಂಸದ ಧ್ರುವ ನಾರಾಯಣ ಹೇಳಿದ್ದಾರೆ.


ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಕತ್ತಿ ಮಸೆಯುತ್ತಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಇದು ಸರಿಯಾದ ಸಮಯವಾಗಿದೆ,  ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ಧ ಬಂಡಾಯ ಕಹಳೆ ಎದ್ದಿದೆ. ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ವೇಳೆ ಪಕ್ಷದ ವಿರುದ್ದವೇ ಸ್ವಪಕ್ಷ4ಯ ಶಾಸಕರು ತಿರುಗಿ ಬಿದ್ದಿದ್ದರು.

ಬಿಜೆಪಿಗೆ ಮೆಜಾರಿಟಿ ಸಿಗದಂತೆ ಮಾಡುವುದು ಕಾಂಗ್ರೆಸ್ ಪ್ರಮುಖ ಉದ್ದೇಶವಾಗಿದೆ,  ಬಿಜೆಪಿಗೆ ಬಹುಮತ ಬರದಂತೆ ತಡೆಯಲು ಕಾಂಗ್ರೆಸ್ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. 
 

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp