ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಳಿ ಇದೆ ಬರೋಬ್ಬರಿ 1 ಸಾವಿರದ 215 ಕೋಟಿ!

ಬಿಜೆಪಿ ಅಭ್ಯರ್ಥಿ ಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂ ಎಂದು ಘೋಷಣೆ ಮಾಡಿದ್ದಾರೆ.

Published: 16th November 2019 10:10 AM  |   Last Updated: 16th November 2019 10:10 AM   |  A+A-


MTB Nagaraj

ಎಂಟಿಬಿ ನಾಗರಾಜ್

Posted By : Shilpa D
Source : UNI

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ ಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂ ಎಂದು ಘೋಷಣೆ ಮಾಡಿದ್ದಾರೆ.

ಚುನಾವಣೆಯ ನಾಮಪತ್ರ ಸಲ್ಲಿಸಿರುವ ಎಂಟಿಬಿ ನಾಗರಾಜ್​​ ಆಯೋಗಕ್ಕೆ ನೀಡಿರುವ ಆಸ್ತಿ ಯ ವಿವರಗಳು ಇಂತಿದೆ. ಅದರಲ್ಲಿ ​1,12,02,23,637 ರೂ ಬಿಲಿಯನ್​ ಎಂಟಿಬಿ ನಾಗರಾಜ್ ಹೆಸರಿನಲ್ಲಿದ್ದರೆ. 71,89,65,570 ಕೋಟಿ ರೂ ಆಸ್ತಿ ಪತ್ನಿ ಶಾಂತಕುಮಾರಿ ಹೆಸರಿನಲ್ಲಿದೆ. ಹಾಗೆಯೇ ಎಂಟಿಬಿ ಬಳಿ 89,04,927ರೂ ನಗದು ಹಣ. ಉಳಿತಾಯ ಖಾತೆಯಲ್ಲಿ 4,80,36,611 ಕೋಟಿ ರೂ. ಖಾಯಂ ಠೇವಣಿಯಾಗಿ 166.97 ಕೋಟಿ ರೂ ಇಟ್ಟಿದ್ದಾರೆ.  

ಎಂಟಿಬಿ ಎಸ್ಟೇಟ್ಸ್ ಅಂಡ್ ಪ್ರಾಪರ್ಟೀಸ್ ಪಾಲುದಾರಿ ಕೆ ಸಂಸ್ಥೆಯಲ್ಲಿ 141 ಕೋಟಿ ಇದೆ.ಎಲ್​ಐಸಿ,ಪಿಎನ್​ಬಿ ವಿಮೆಗಳು 64,76,009 ಲಕ್ಷ ಮೌಲ್ಯದ್ದಾಗಿದೆ. 

ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಸಾಲವಾಗಿ 272 ಕೋಟಿ ನೀಡಿದ್ದಾರೆ. 5,99,78,832 ಕೋಟಿ ಮೌಲ್ಯದ 3 ಐಷಾರಾಮಿ ಕಾರುಗಳಿವೆ. 2,54,13,964 ಬೆಲೆ ಬಾಳುವ 6 ಐಷಾರಾಮಿ ಕಾರುಗಳಿವೆ. ಎಂಟಿಬಿ ಮತ್ತು ಶಾಂತಕುಮಾರಿ  ಹೆಸರಿನಲ್ಲಿ 618 ಕೋಟಿ ಸ್ಥಿರಾಸ್ತಿ ಇದ್ದರೆ,  437.15 ಕೋಟಿ ಚರಾಸ್ತಿ ಇದೆ. 3.720 ಕೋಟಿ ಮೌಲ್ಯದ 3606 ಗ್ರಾಂ ಚಿನ್ನ ಇದೆ.

ಒಟ್ಟು ಸಾಲ 1,93,84,706. ಪತ್ನಿ 21,60,267. ಕುಟುಂಬದ ಒಟ್ಟು ಆಸ್ತಿ 221,26,16,590 ಇದೆ. ಮೇ.ತ್ರಿಶೂಲ್ ಪವರ್ ಪ್ರೈ.ಲಿ, 4‌ ಮೆಗಾವ್ಯಾಟ್, ಮೆ.ಶ್ರೀಸಾಯಿದೀಪ್ತಿ ಪವರ್ ಪ್ರೈ.ಲಿ 1.5 ಮೆಗಾವ್ಯಾಟ್, ಮೇ.ಅಪರಿಮಿತ ಪವರ್ ವೆಂಚರ್ಸ್ ಪ್ರೈ.ಲಿ 1 ಮೆಗಾವ್ಯಾಟ್  ಸಂಸ್ಥೆಗಳಲ್ಲಿ ಎಂಟಿಬಿ ಪಾಲುದಾರಿಕೆ ಹೊಂದಿದ್ದಾರೆ.

ಈ ಹಿಂದೆ 2018 ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್​​ನಲ್ಲಿದ್ದಾಗ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂಟಿಬಿ ತಮ್ಮ ಆಸ್ತಿಯ ಒಟ್ಟು ಮೌಲ್ಯ 1 ಸಾವಿರದ 15 ಕೋಟಿ ರೂ. ಎಂದು ಘೋಷಣೆ ಮಾಡಿಕೊಂಡಿದ್ದರು .ತಮ್ಮ ಹೆಸರಿನಲ್ಲಿ ಚರಾಸ್ತಿ 314 ಕೋಟಿ 75 ಲಕ್ಷದ 54 ಸಾವಿರದ 785 ರೂ., ಸ್ಥಿರಾಸ್ತಿ 394 ಕೋಟಿ 63 ಲಕ್ಷ 53 ಸಾವಿರದ 309 ರೂ., ವಾರ್ಷಿಕ ಆದಾಯ 102 ಕೋಟಿ ರೂ. ಹಾಗೂ 27 ಕೋಟಿ 70 ಲಕ್ಷದ 31 ಸಾವಿರದ 565 ರೂ. ಸಾಲ ಹೊಂದಿರುವುದಾಗಿ ಮಾಹಿತಿ ನೀಡಿದ್ದರು.

Stay up to date on all the latest ರಾಜಕೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp