'ಬಾಹ್ಯ ಪ್ರಪಂಚದ ಹಣ, ಅಧಿಕಾರ, ಹೆಸರು, ಕೀರ್ತಿ ಎಲ್ಲವೂ ತೃಣಕ್ಕೆ ಸಮಾನ'

ಯಶವಂತಪುರ ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಅವರಿಗೆ ಭಾರೀ ನಿರಾಸೆಯಾಗಿದೆ, ಯಶವಂತಪುರದಿಂದ ಅನರ್ಹ ಶಾಸಕ ಎಸ್​.ಟಿ. ಸೋಮಶೇಖರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದರಿಂದ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಬೇಸರ ಹೊರಹಾಕಿದ್ದರು.
ಜಗ್ಗೇಶ್
ಜಗ್ಗೇಶ್

ಬೆಂಗಳೂರು: ಯಶವಂತಪುರ ಕ್ಷೇತ್ರದಿಂದ ಈ ಬಾರಿ ವಿಧಾನಸಭಾ ಉಪಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದ ಬಿಜೆಪಿ ನಾಯಕ ಹಾಗೂ ನಟ ಜಗ್ಗೇಶ್ ಅವರಿಗೆ ಭಾರೀ ನಿರಾಸೆಯಾಗಿದೆ, ಯಶವಂತಪುರದಿಂದ ಅನರ್ಹ ಶಾಸಕ ಎಸ್​.ಟಿ. ಸೋಮಶೇಖರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ್ದರಿಂದ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲೂ ತಮ್ಮ ಬೇಸರ ಹೊರಹಾಕಿದ್ದರು.

ಆದರೀಗ ಜಗ್ಗೇಶ್ ಅವರ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಜಗ್ಗೇಶ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಮಾತನಾಡಿದ್ದ ಸಿಎಂ ಬಿಎಸ್​ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಎಸ್​.ಟಿ. ಸೋಮಶೇಖರ್ ಪರವಾಗಿ ಪ್ರಚಾರ ಮಾಡುವಂತೆ ಸೂಚಿಸಿದ್ದರು. ಅಲ್ಲದೆ, ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಜಗ್ಗೇಶ್ ಅವರ ಹೆಸರನ್ನು ಸೇರಿಸಲಾಗಿತ್ತು. ಹೀಗಾಗಿ, ಜಗ್ಗೇಶ್ ಅವರ ಅಸಮಾಧಾನ ಶಮನವಾಗಿದೆ ಎನ್ನಲಾಗಿತ್ತು.

ಇದಕ್ಕೆ ಪುಷ್ಠಿ ನೀಡುವಂತೆ ಟ್ವೀಟ್ ಮಾಡಿರುವ ನವರಸನಾಯಕ ಜಗ್ಗೇಶ್, 'ಬಾಹ್ಯ ಪ್ರಪಂಚದ ಹಣ, ಅಧಿಕಾರ, ಹೆಸರು, ಕೀರ್ತಿ ಎಲ್ಲವೂ ನಶ್ವರ! ಆಂತರ್ಯ ಪ್ರಪಂಚದ ಅರಿವಾದಾಗ ಮನುಷ್ಯನಿಗೆ ಬಾಹ್ಯ ಶ್ರೀಮಂತಿಕೆ ಸಿಗುತ್ತದೆ. ಆಗ ಅಧಿಕಾರ, ಹೆಸರು ತೃಣಕ್ಕೆ ಸಮಾನವಾಗಿ ಗೋಚರವಾಗುತ್ತದೆ. ಸತ್ತ ಮೇಲೆ ಬಿಟ್ಟು ಹೋಗುವ ಬೇಕುಗಳಿಗೆ ಹಪಹಪಿಸಿ ಭಿಕ್ಷುಕನಂತೆ ಬೇಡಿಕೆಗಿಂತ ಕೈಲಾಸನಾಥ ನೀಡುವ ಆಂತರ್ಯ ಜ್ಞಾನಕ್ಕೆ ಭಿಕ್ಷುಕರಾಗೋಣ' ಎಂದು ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com