ಉಪ ಚುನಾವಣೆ: ಅನರ್ಹ ಶಾಸಕ ಆನಂದ್ ಸಿಂಗ್ ಕನಸಿಗೆ ನೀತಿ ಸಂಹಿತೆ ಅಡ್ಡಿ?

ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ಉಪ ಚುನಾವಣೆ ಇರುವಾಗಲೇ ಅನರ್ಹ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮನೆಯಲ್ಲಿ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳು ಚುನಾವಣಾ ನೀತಿ ಸಂಹಿತೆಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಗಳಿವೆ.
ಆನಂದ್ ಸಿಂಗ್ ಹೊಸ ಬಂಗಲೆ ಹಾಗೂ ಮಗನ ಮದುವೆಯ ಆಹ್ವಾನ ಪತ್ರಿಕೆ
ಆನಂದ್ ಸಿಂಗ್ ಹೊಸ ಬಂಗಲೆ ಹಾಗೂ ಮಗನ ಮದುವೆಯ ಆಹ್ವಾನ ಪತ್ರಿಕೆ

ಹೊಸಪೇಟೆ: ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ಉಪ ಚುನಾವಣೆ ಇರುವಾಗಲೇ ಅನರ್ಹ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮನೆಯಲ್ಲಿ ನಡೆಯಲಿರುವ ಎರಡು ಪ್ರಮುಖ ಕಾರ್ಯಕ್ರಮಗಳು ಚುನಾವಣಾ ನೀತಿ ಸಂಹಿತೆಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಗಳಿವೆ.

ಕೋಟಿಗಳನ್ನು ನೀರಿನಂತೆ ಸುರಿದು ನಿರ್ಮಿಸಿರುವ ಬೃಹತ್  ಬಂಗಲೆಯ ಗೃಹ ಪ್ರವೇಶ ಹಾಗೂ ಪುತ್ರ ಸಿದ್ಧಾರ್ಥ್  ಸಿಂಗ್ ಮದುವೆ ಕಾರ್ಯಕ್ರಮಗಳು  ಚುನಾವಣಾ ನೀತಿ ಸಂಹಿತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಡಿಸೆಂಬರ್ 1 ರಂದು ಸಿದ್ದಾರ್ಥ ಸಿಂಗ್ ಮದುವೆ  ಫಿಕ್ಸ್ ಆಗಿದೆ.ಸಂಜನಾ ಸಬರದ್ ಜೊತೆ ಹಸೆ ಏರಲಿರುವ ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡಲೇಬೇಕಿದೆ.  ಹಾಗೆಯೇ ಮದುವೆಗೆ ಮುನ್ನ ಅಂದ್ರೆ ಇದೇ ತಿಂಗಳ 22 ರಂದು ಮನೆಯ ಗೃಹಪ್ರವೇಶ ಹಮ್ಮಿಕೊಳ್ಳಲಾಗಿದೆ. ಇಡೀ ಬಳ್ಳಾರಿ ಜನತೆಯ ಕಣ್ ಕುಕ್ಕಿಸುವ ಅದರಲ್ಲೂ ಬಳ್ಳಾರಿ ಗಣಿದಣಿಗಳು ಹೊಟ್ಟೆ ಉರಿದುಕೊಳ್ಳುವ ರೀತಿಯಲ್ಲಿ ನಿರ್ಮಿಸಿರುವ ಮನೆಯ ಗೃಹಪ್ರವೇಶವನ್ನು ಸಿಂಪಲ್ಲಾಗಿ ಮಾಡುವುದಕ್ಕೆ ಸಿಂಗ್ ಸುತಾರಾಂ ಸಿದ್ಧರಿಲ್ಲ.

ಮದುವೆಯಷ್ಟೇ ಮನೆಯ ಗೃಹಪ್ರವೇಶವನ್ನೂ ಅದ್ದೂರಿಯಾಗಿ ಮಾಡಬೇಕೆನ್ನುವ ಆಲೋಚನೆಯಲ್ಲಿ ಆನಂದ್ ಸಿಂಗ್ ಇದ್ದಾರೆ.ಆದ್ರೆ ಇದಕ್ಕೆ ನೀತಿ ಸಂಹಿತೆ ಅಡ್ಡಿಯಾಗುವ ಎಲ್ಲಾ ಸಾಧ್ಯತೆಗಳಿವೆ.ಈ ಎರಡು ಕಾರ್ಯಗಳು ಚುನಾವಣೆಯ ಪೂರ್ವದಲ್ಲಿ ನಡೆಯುತ್ತಿರುವುದರಿಂದ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಈ ಎರಡೂ ಕಾರ್ಯಕ್ರಮಗಳ ದಿನಾಂಕ ಫಿಕ್ಸ್ ಆಗಿದೆ, ಆದರೆ ಚುನಾವಣೆ ಘೋಷಣೆಯ ನಂತರ ಅವುಗಳನ್ನ ಮುಂದೂಡಿ ಕಾರ್ಯಕ್ರಮಗಳನ್ನು ಮಾಡಬಹುದಿತ್ತು.ಆದರೆ ಅದರ ಹಿಂದೆ ಆನಂದ್ ಸಿಂಗ್ ಚುನಾವಣಾ ಪ್ರಚಾರದ ರಣತಂತ್ರ ಅಡಗಿರುವುದರಲ್ಲಿ ಯಾವ್ದೇ ಅನುಮಾನವಿಲ್ಲ.

ಚುನಾವಣೆ ಗೆಲ್ಲಲಿಕ್ಕೆ ಮತದಾರರನ್ನು ಮನವೊಲಿಸಿ ಅವರಿಗೆ ಆಮಿಷ ಒಡ್ಡಲಿಕ್ಕೆ ಈ ಎರಡು ಸಮಾರಂಭಗಳನ್ನು ಫ್ಲಾಟ್ ಫಾರ್ಮ್ ಗಳನ್ನಾಗಿ ಮಾಡಿಕೊಳ್ಳಲಿದ್ದಾರಾ..? ಹೀಗೊಂದು ಸಾಧ್ಯತೆಯನ್ನಂತೂ ಅಲ್ಲಗೆಳೆಯೊಕ್ಕೆ ಆಗೊಲ್ಲ.ಮನೆಯ ಸಮಾರಂಭಗಳು ನಡೆದಂಗೂ ಆಗ್ಬೇಕು,ಚುನಾವಣೆ ಗೆಲ್ಲೊಕ್ಕೆ ಮತದಾರರನ್ನು ಓಲೈಸುವ ಉದ್ದೇಶವೂ ಈಡೇರಿದಂತಾಗುತ್ತೆ

ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಆನಂದ್ ಸಿಂಗ್:

ಇತ್ತೀಚೆಗೆ ಅತೀ ಚಾಲಾಕಿಯಾಗಿರುವ ಸಿಂಗ್ ಈಗಾಗಲೆ ಚುನಾವಣಾಧಿಕಾರಿಗೆ ಪತ್ರವನ್ನೂ ಬರೆದು ಮನವಿ ಮಾಡಿಕೊಂಡಿದ್ದಾರಂತೆ,ಮನವಿಯಂತೆ ಅವಕಾಶ ಮಾಡಿಕೊಟ್ಟಿರುವ ಚುನಾವಣೆಯ ಅಧಿಕಾರಿಗಳು ಒಂದಷ್ಟು ಕಂಡೀಷನ್ಸ್ ಗಳನ್ನ ಹಾಕಿದ್ದಾರೆ ಎನ್ನಲಾಗುತ್ತಿದೆ.

ಮನೆಯ ಕಾರ್ಯಕ್ರಮವನ್ನು ರಾಜಕೀಯಗೊಳಿಸಬಾರದು, ಅಲ್ಲಿ ಮಾಡಲಾಗುವ ಭಾಷಣ ಅಥವಾ ಜನರೊಂದಿಗಿನ ಸಂಭಾಷಣೆಯಲ್ಲಿ ಮತ ಕೇಳುವ,ಆಮಿಷ ಒಡ್ಡುವ ಪ್ರಯತ್ನವನ್ನ ಮಾಡಬಾರದು ಎಂದು ಸೂಚಿಸಲಾಗಿದೆಯಂತೆ.

ಇನ್ನು ಆ ಸಮಾರಂಭದ ಮೇಲೆ ಚುನಾವಣಾ ಆಯೋಗ ಹದ್ದುಗಣ್ಣಿನ ನಿಗಾ ಇಟ್ಟಿರುತ್ತಂತ್ತೆ.ಸಮಾರಂಭವನ್ನು ವೀಡಿಯೋ ಚಿತ್ರೀಕರಣ ಮಾಡಲಾಗುತ್ತೆ.ಸ್ವಲ್ಪ ಏರುಪೇರಿನ ಚಿತ್ರಣ ಕಂಡು ಬಂದ್ರೂ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕೇಸ್ ಹಾಕಲಾಗುತ್ತೆ.ಅದು ಸಾಬೀತಾದ್ರೆ ಅವರ ರಾಜಕೀಯ ಭವಿಷ್ಯಕ್ಕೂ ಕುತ್ತು ಬಂದಂತೆಯೇ ಎನ್ನುತ್ತಾರೆ ಬುದ್ದಿಜೀವಿಗಳು.

ಒಂದ್ವೇಳೆ ಸಮಾರಂಭಗಳಲ್ಲಿ ಚುನಾವಣಾ ಅಕ್ರಮದ ವಾಸನೆ ಕಂಡು ಬಂದ್ರೆ ಅದನ್ನು ಚುನಾವಣಾ ವೆಚ್ಚಕ್ಕೆ ಬಳಸುವ ಸಾಧ್ಯತೆಗಳೂ ಇದೆ.ಆದ್ರೆ ಇದೆಲ್ಲಾ ಆಯಾ ಕ್ಷೇತ್ರಗಳ ವ್ಯಾಪ್ತಿಗೆ ಸೇರುವ ಚುನಾವಣಾಧಿಕಾರಿಗಳ ವಿವೇಚನೆಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ.

ಅದೇನೇ ಇರ್ಲಿ,ಮಗನ ಮದುವೆ ಹಾಗೂ ಕನಸಿನ ಬಂಗ್ಲೆಯ ಗೃಹಪ್ರವೇಶವನ್ನು ಅದ್ದೂರಿಯಾಗಿ  ಮಾಡ್ಬೇಕೆನ್ನುವ ಆಸೆ,ಆನಂದ್ ಸಿಂಗ್ ಅವ್ರಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿರುವುದಂತೂ ಸತ್ಯ..ಈ ಸನ್ನಿವೇಶವನ್ನು ಹೇಗೆ ಬ್ಯಾಲೆನ್ಸ್ ಮಾಡ್ತಾರೆನ್ನುವುದು ಕೂಡ ಸಧ್ಯದ ಕುತೂಹಲವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com