ಅನರ್ಹರನ್ನ‌ ಗೆಲ್ಲಿಸೋದು, ಸೋಲಿಸೋದು‌ ಜನರ ಕೈಯಲ್ಲಿದೆ: ಅಮರೇಗೌಡ ಬಯ್ಯಾಪುರ

ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ  ಅನರ್ಹರನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನತೆಗೆ ಬಿಟ್ಟ ವಿಚಾರ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ
ಅಮರೇಗೌಡ ಬಯ್ಯಾಪುರ
ಅಮರೇಗೌಡ ಬಯ್ಯಾಪುರ

ಕೊಪ್ಪಳ: ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯುತ್ತಿರುವ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ  ಅನರ್ಹರನ್ನು ಗೆಲ್ಲಿಸುವುದು ಅಥವಾ ಸೋಲಿಸುವುದು ಜನತೆಗೆ ಬಿಟ್ಟ ವಿಚಾರ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದ್ದಾರೆ.

ಕೊಪ್ಪಳದ ಕುಷ್ಟಗಿಯಲ್ಲಿ  ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ,ಆದರೆ ಅವರನ್ನು ಗೆಲ್ಲಿಸುವುದು ಸೋಲಿಸುವುದು ಮಾಧ್ಯಮಗಳು ಎಂದು ಹೇಳಿದ್ದಾರೆ. 

ಬುದ್ದಿಜೀವಿಗಳು ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆಯವರು ಈ ವಿಚಾರವನ್ನ‌ ಜನರ ಮುಂದಿಟ್ಟಿದ್ದಾರೆ. ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಅನರ್ಹ ಶಾಸಕರು ಮತ್ತೇ ಸ್ಪರ್ಧಿಸಿದಾಗ ಜನ ಅಂಥವರನ್ನ‌ ಸೋಲಿಸಿದ್ದಾರೆ,  ರಾಜ್ಯದಲ್ಲೂ ಅನರ್ಹರನ್ನ ಈ ಉಪಚುನಾವಣೆಯಲ್ಲಿ ಸೋಲಿಸಬೇಕು ಎಂದು ಹೆಗಡೆ ಸಂದೇಶ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮತದಾರರು ಬುದ್ಧಿವಂತರು. ಕೆಲಸ ಮಾಡುವವರನ್ನ ಗೆಲ್ಲಿಸ್ತಾರೆ. ತಮ್ಮನ್ನ ಜನರ ಮತಗಳನ್ನ ಮಾರಿಕೊಳ್ಳುವವರನ್ನ ಸೋಲಿಸುತ್ತಾರೆ, ಅಂತಿಮವಾಗಿ ಅನರ್ಹರನ್ನ‌ ಗೆಲ್ಲಿಸೋದು, ಸೋಲಿಸೋದು‌ ಜನರ ಕೈಯಲ್ಲಿದೆ ಎಂದು ವಿವರಿಸಿದ್ದಾರೆ.

ಇನ್ನೂ ರಾಜಕಾರಣಿಗಳ ಹನಿಟ್ರ್ಯಾಪ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ  ಬಯ್ಯಾಪುರ "ಅದು" ಮನುಷ್ಯನ ಸಹಜ‌ ಪ್ರಕ್ರಿಯೆ, ಆದರೆ "ಅದು" ಕೆಟ್ಟ ರೀತಿಯಾಗಿ ಇರಬಾರದು. ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶಾಸಕರು, ಗಣ್ಯರ ಹೆಸರು ಥಳುಕು ಹಾಕಿಕೊಂಡಿರುವುದು ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ವರದಿ-ಬಸವರಾಜ್ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com