ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಪ್ರವೇಶ ಖಚಿತ ಆದರೆ....

  ಕೆ.ಸಿ.ರಾಮ‌ಮೂರ್ತಿ ರಾಜೀನಾಮೆಯಿಂದ‌ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿರುವ ಕುರಿತ ವರದಿಗಳಿಗೆ ಸ್ಪಷ್ಟೀಕರಣ ನೀಡಿರುವ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಖರ್ಗೆ ಕರ್ನಾಟಕದಿಂದ‌ ಸ್ಪರ್ಧಿಸುವುದಿಲ್ಲ. ಬೇರೆ ರಾಜ್ಯದಿ

Published: 30th November 2019 08:47 PM  |   Last Updated: 30th November 2019 08:47 PM   |  A+A-


ಮಲ್ಲಿಕಾರ್ಜುನ ಖರ್ಗೆ

Posted By : Raghavendra Adiga
Source : UNI

ಬೆಂಗಳೂರು:  ಕೆ.ಸಿ.ರಾಮ‌ಮೂರ್ತಿ ರಾಜೀನಾಮೆಯಿಂದ‌ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ವಲಯದಲ್ಲಿ ಚಿಂತನೆ ನಡೆಯುತ್ತಿರುವ ಕುರಿತ ವರದಿಗಳಿಗೆ ಸ್ಪಷ್ಟೀಕರಣ ನೀಡಿರುವ ನೀಡಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಖರ್ಗೆ ಕರ್ನಾಟಕದಿಂದ‌ ಸ್ಪರ್ಧಿಸುವುದಿಲ್ಲ. ಬೇರೆ ರಾಜ್ಯದಿಂದ ಸ್ಪರ್ಧಿಸಬಹುದು ಎಂದು ಹೇಳಿದ್ದಾರೆ.

ಯುಎನ್ಐ ಕನ್ನಡ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಡಿ. 12 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿಲ್ಲ. ಏಕೆಂದರೆ ಈ ಸ್ಥಾನ ಗೆಲ್ಲುವಷ್ಟು ಸಂಖ್ಯಾಬಲ ಜೆಡಿಎಸ್‌ಗೆ ಇಲ್ಲ. ಸಂಖ್ಯಾಬಲ ಇಲ್ಲದ ಮೇಲೆ ಮಲ್ಲಿಕಾರ್ಜುನ್ ಖರ್ಗೆ ಹೇಗೆ ತಾನೆ ಸ್ಪರ್ಧಿಸಿಯಾರು? ಒಂದು ವೇಳೆ ಅವರು ರಾಜ್ಯಸಭೆಗೆ ಸ್ಪರ್ಧಿಸುವುದಿದ್ದರೆ ಅದು ಕರ್ನಾಟಕದಿಂದಲ್ಲ ಬೇರೆ ರಾಜ್ಯದಿಂದ ಎಂಬ ಸುಳಿವು ನೀಡಿದರು.

ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವಂತಿದ್ದರೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತೀರ್ಮಾನಿಸಬೇಕು ಎಂದರು. 

Stay up to date on all the latest ರಾಜಕೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp