ಉಪಚುನಾವಣೆಗೆ ಮುನ್ನವೇ ಕಮಲ ಪಾಳಯದಲ್ಲಿ ಅಸಮಾಧಾನ: 4 ಬಾರಿ ಶಾಸಕ ರಾಜು ಕಾಗೆಗೆ ಕಾಂಗ್ರೆಸ್ ಮಣೆ

ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಮುಂದಿನ ಡಿಸೆಂಬರ್ ನಲ್ಲಿ ಉಪಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಭಾರೀ ಅಸಮಾಧಾನ ಸ್ಫೋಟವಾಗಿದೆ.ರೆ ಕೆಲವು ಕ್ಷೇತ್ರಗಳಲ್ಲಿಪಕ್ಷದ ನಿಷ್ಠಾವಂತರು ಪಕ್ಷಗಳನ್ನು ಬದಲಾಯಿಸಲು ಸಜ್ಜಾಗಿದ್ದಾರೆ. 
ರಾಜು ಕಾಗೆ
ರಾಜು ಕಾಗೆ

ಬೆಳಗಾವಿ: ರಾಜ್ಯದ ಹದಿನೈದು ಕ್ಷೇತ್ರಗಳಿಗೆ ಮುಂದಿನ ಡಿಸೆಂಬರ್ ನಲ್ಲಿ ಉಪಚುನಾವಣೆ ನಡೆಯಲಿದ್ದು ಇದಕ್ಕೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಭಾರೀ ಅಸಮಾಧಾನ ಸ್ಫೋಟವಾಗಿದೆ.ರೆ ಕೆಲವು ಕ್ಷೇತ್ರಗಳಲ್ಲಿಪಕ್ಷದ ನಿಷ್ಠಾವಂತರು ಪಕ್ಷಗಳನ್ನು ಬದಲಾಯಿಸಲು ಸಜ್ಜಾಗಿದ್ದಾರೆ. ಪಕ್ಷದ ಟಿಕೆಟ್‌ಗಳಲ್ಲಿ ಅನರ್ಹ ಶಾಸಕರನ್ನು ಕಣಕ್ಕಿಳಿಸುವ ಸಲುವಾಗಿ ಪಕ್ಷವು ಎಲ್ಲಾ ನಿಷ್ಠಾವಂತರನ್ನು ಬದಿಗೊತ್ತಲು ನಿರ್ಧರಿಸುವುದು ಇದಕ್ಕೆಲ್ಲಾ ಮುಖ್ಯ ಕಾರಣ ಎನ್ನಲಾಗಿದೆ. ನಾಲ್ಕು ಬಾರಿ ಶಾಸಕರಾಗಿದ್ದ ಪ್ರಸಿದ್ದ ಬಿಜೆಪಿ ಮುಖಂಡ ರಾಜು ಕಾಗೆ ಕಾಗವಾಡ ಅಥವಾ ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ನೊಡನೆ ಬಿಜೆಪಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಮೂಲಗಳ ಪ್ರಕಾರ, ಕಾಗೆಯವರಿಗೆ ಕಾಗವಾಡ ಟಿಕೆಟ್ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇನ್ನೊಂದೆಡೆ ಮುಂಬರುವ ಉಪಚುನಾವಣೆಯಲ್ಲಿ ಕಾಗೆಯವರನ್ನು  ಕಣಕ್ಕಿಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಇತ್ತೀಚೆಗೆಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ

"ನನ್ನ ಬೆಂಬಲಿಗರು ಯಡಿಯೂರಪ್ಪಗೆ ನನ್ನನ್ನು ಕಾಗವಾಡದಿಂದ ಹಾಗೂ ಅಥಣಿಯಿಂದ ಲಕ್ಷ್ಮಣ್ ಸವದಿಯನ್ನು ಕಣಕ್ಕಿಳಿಸುವಂತೆ ಮನವಿ ಮಾಡಿದಾಗ, ಅವರು ಅದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಈ ಉಪಚುನಾವಣೆಯಲ್ಲಿ ಹಾಗೆ ಆಗಲು ಸಾಧ್ಯವಿಲ್ಲ, ಎಲ್ಲವೂ ಪಕ್ಷದ ನಿರ್ಧಾರದಂತಾಗಲಿದೆ ಎಂದಿದ್ದಾರೆ. ಅವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದದ್ದು ಕೇವಲ 17 ಅನರ್ಹ ಶಾಸಕರಿಂದ ಎಂದು ಭಾವಿಸಿದ್ದಾರೆ. ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ಕೊಡುವುದಾಗಿ ಹೇ:ಳಿದ ನಂತರವೇ ಅವರು ರಾಜೀನಾಮೆ ನೀಡಿದ್ದಾರೆ. ಅವರಿಗೆ ಸಂಪುಟದಲ್ಲಿ ಸಹ ಸ್ಥಾನ ನೀಡಲಾಗುತ್ತದೆ" ಕಾಗೆ ಆರೋಪ್ಸಿದ್ದಾರೆ.

ಪಕ್ಷದ ನಿಷ್ಠಾವಂತರು ಬಂಡಾಯವೆದ್ದದ್ದಾದರೆ ಉಪಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಸಹ ಬಿಜೆಪಿ ಗೆಲ್ಲುವುದಿಲ್ಲ. ಹಾಗಾಗಿ ಯಡಿಯೂರಪ್ಪ ಸರ್ಕಾರ ಪತನವಾಗಲಿದೆ ಎಂದು ಕಾಗೆ ಹೇಳಿದ್ದಾರೆ.

"ರಾಜಕೀಯವುಒಂದು ಚೆಂಡಾಟವಿದ್ದಂತೆ. ಇಂದಿನ ರಾಜಕೀಯದಲ್ಲಿ ಯಾರೂ ಯಾರಿಗೂ ಸಹೋದರ, ಚಿಕ್ಕಪ್ಪ ಅಥವಾ ಸ್ನೇಹಿತರಲ್ಲ ಇಂದಿನ ಸ್ನೇಹಿತ ನಾಳೆ ನಿಮ್ಮ ಶತ್ರುಗಳಾಗಬಹುದು ಮತ್ತು ಶತ್ರು ನಿಮ್ಮ ಸ್ನೇಹಿತನಾಗಬಹುದು. ನನ್ನ ಸ್ವಂತ ಸಹೋದರ ಕೂಡ ಚುನಾವಣೆಗಳಲ್ಲಿ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ , '' ಎಂದರು.

ಗೋಕಾಕ್ ಮತ್ತು ಅಥಣಿ  ಎರಡರಲ್ಲೂ ಬಿಜೆಪಿ ಬಂಡಾಯದ ಭೀತಿಯನ್ನು ಎದುರಿಸಬೇಕಾಗಬಹುದು, ಅಲ್ಲಿ ಹಲವಾರು ಪಕ್ಷದ ನಿಷ್ಠಾವಂತರು ಅಸಮಾಧಾನ ಹೊಂದಿದ್ದಾರೆ. ಗೋಕಾಕ್‌ನಲ್ಲಿ ಹಿರಿಯ ನಾಯಕ ಅಶೋಕ್ ಪೂಜಾರಿ ಅವರು ಗಡಿ ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರ ಹುದ್ದೆಯನ್ನು ಈಗಾಗಲೇ ನಿರಾಕರಿಸಿದ್ದಾರೆ. ಗೋಕಾಕ್‌ನಲ್ಲಿ ಪಕ್ಷದ ಟಿಕೆಟ್ ನಿರಾಕರಿಸಿದರೆ ಅವರು ಬಂಡಾಯಗಾರರಾಗಿ ಕಣಕ್ಕೆ ಇಳಿಯುತ್ತಾರೆ ಎಂದು ಪಕ್ಷಕ್ಕೆ ಸ್ಪಷ್ಟ ಸಂಕೇತವನ್ನು ಕಳುಹಿಸಿದ್ದಾರೆ. ಅಥಣಿಯಲ್ಲಿಯೂ ಸಹ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದರೆ ಪಕ್ಷಕ್ಕೆ ಹಾನಿಯಾಗಲಿದೆ ಒಂದೊಮ್ಮೆ ಕುಮಟಳ್ಳಿ ಬಿಜೆಪಿಯಿಂದ ಸ್ಪರ್ಧಿಸಿದರೆ ಕ್ಷೇತ್ರದಲ್ಲಿ ಭಾರಿ ದಂಗೆಯನ್ನು ಎದುರಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com