ಭ್ರಷ್ಟಾಚಾರ ವಿರೋಧಿ ಕಾರ್ಯತಂತ್ರದಿಂದ ಚುನಾವಣೆಯಲ್ಲಿ ಗೆಲುವು: ಬಿಜೆಪಿ ಆಶಯ

ಕಾಂಗ್ರೆಸ್ ಮತ್ತು ಜೆಡಿಎಸ್ ದೇಶಾದ್ಯಂತ ಬಿಜೆಪಿ ಸರ್ಕಾರವು ಏಕಪಕ್ಷೀಯ ಹಾಗೂ ಅಪಾಯಕಾರಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರೆ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರ ಬಂಧನದ ನಂತರ, ಬಿಜೆಪಿ ನಾಯಕರು ಇದು ಸರ್ಕಾರದ ಭ್ರಷ್ಟಾಚಾರ ವಿರೋಧಿ ನೀತಿಯ ಭಾಗವಾಗಿದೆ  ಎಂದು ಹೇಳಿಕೆ ನೀಡಿದ್ದಾರೆ.. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ದೇಶಾದ್ಯಂತ ಬಿಜೆಪಿ ಸರ್ಕಾರವು ಏಕಪಕ್ಷೀಯ ಹಾಗೂ ಅಪಾಯಕಾರಿ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದ್ದರೆ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರ ಬಂಧನದ ನಂತರ, ಬಿಜೆಪಿ ನಾಯಕರು ಇದು ಸರ್ಕಾರದ ಭ್ರಷ್ಟಾಚಾರ ವಿರೋಧಿ ನೀತಿಯ ಭಾಗವಾಗಿದೆ  ಎಂದು ಹೇಳಿಕೆ ನೀಡಿದ್ದಾರೆ.. ತಮ್ಮ ಸರ್ಕಾರದ ಮೊದಲ 100 ದಿನಗಳು “ಕೇವಲ ಟ್ರೈಲರ್” ಮತ್ತು “ಚಿತ್ರದ ಉಳಿದ ಭಾಗವನ್ನು ಇನ್ನೂ ಬಾಕಿ ಇದೆ" ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯು ಸರ್ಕಾರವು ತೆಗೆದುಕೊಳ್ಳಲಿರುವ ನಿರ್ಧಾರಗಳು ಇನ್ನಶ್ಃಟು ಗಂಭೀರವಾಗಿದೆ ಎಂದು ಸೂಚಿಸಿದೆ. ಅಲ್ಲದೆ ಕೇಂದ್ರವು "ಭ್ರಷ್ಟ" ನಾಯಕರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಜರುಗಿಸಲಿದೆ ಎಂದು ರಾಜಕೀಯ ವೀಕ್ಷಕರು ಹೇಳಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳ ವಿರುದ್ಧದ ತನಿಖೆ, ಐಎಂಎ ಹಗರಣದಲ್ಲಿ ಕಿಕ್‌ಬ್ಯಾಕ್ ಆರೋಪ, ಮಾಜಿ ಪಿಡಬ್ಲ್ಯುಡಿ ಸಚಿವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು, ಫೋನ್ ಟ್ಯಾಪಿಂಗ್ ಕುರಿತು ಸಿಬಿಐ ತನಿಖೆ ಸೇರಿದಂತೆ ಭ್ರಷ್ಟಾಚಾರದ ವಿರುದ್ಧ ಕ್ರಮವನ್ನು ಸೂಚಿಸಿದೆ.  ರಾಜ್ಯ ಮತ್ತು ಕೇಂದ್ರದಲ್ಲಿನ ಸರ್ಕಾರಗಳು ಕಾನೂನು ಸಂಸ್ಥೆಗಳನ್ನು ತನ್ನದೇ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಯಿಸಿರುವ ಬಿಜೆಪಿ ನಾಯಕರು ತಮ್ಮ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ ಯಾವುದೇ ಕಾನೂನು ಪಾಲನೆ ಸಂಸ್ಥೆಗಳನ್ನು ಖರೀದಿಸಿಲ್ಲ ಎಂದು ಹೇಳಿದೆ.

"ಇದು ಭ್ರಷ್ಟಾಚಾರ ವಿರೋಧಿ ಧೋರಣೆಯ ನೀತಿಯಾಗಿದ್ದು ಭ್ರಷ್ಟಾಚಾರಕ್ಕೆ ವಿರೋಧ ತೋರುವ ಬಿಜೆಪಿಯ ಪ್ರಯತ್ನದ ಭಾಗವಾಗಿದೆ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ. ಇದೊಂದು ದೊಡ್ಡ ಕಾರ್ಯತಂತ್ರವಾಗಿ  ಕರ್ನಾಟಕದ ಉಪಚುನಾವಣೆ, ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಸಹಾಯವಾಗಲಿದೆ.. ಅಲ್ಲದೆ ಚುನಾವಣೆಯ ಆಚೆಗೆ ಸಹ ಭ್ರಷ್ಟರ ವಿರುದ್ಧದ ಬಿಜೆಪಿ ಸಮರ ಮುಂದುವರಿಯಲಿದೆ ಎಂದಿದ್ದಾರೆ. ಸಚಿವ ಸಿಟಿ ರವಿ  “ಭ್ರಷ್ಟರನ್ನು ಬೀದಿಗೆ ತರಬೇಕು, ಜನರು ಹೊರಗೆ ಬಂದು ಭ್ರಷ್ಟರನ್ನು ಬೆಂಬಲಿಸಬಾರದು” ಎಂದು ಹೇಳಿದರು. ಇಲ್ಲಿ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಮುದಾಯದ ಜನ ನಡೆಸಿದ ಪ್ರತಿಭಟನೆಗಳನ್ನು ಉಲ್ಲೇಖಿಸಿ ಸಚಿವರು ಮಾತನಾಡಿದ್ದಾರೆ.

ಬಿಜೆಪಿ ಸಚಿವ ಸುರೇಶ್ ಕುಮಾರ್, “ತನಿಖೆಯನ್ನು ರಾಜಕೀಯ ವ್ಯಾಪಾರವೆಂದು ಕರೆಯುವುದು ಈ ವಿಷಯವನ್ನು ರಾಜಕೀಯಗೊಳಿಸುವ ಒಂದು ತಂತ್ರ. ಬೆಂಕಿಯಿಲ್ಲದೆ ಹೊಗೆ ಬರಲ್ಲ" ಹೇಳಿದ್ದಾರೆ. ಇಲ್ಲಿ ದೊಡ್ಡ ಬೆಂಕಿ ಹಾಗೂ ಸಾಕಷ್ಟು ಹೊಗೆ ಬರುತ್ತಿದ್ದು ಭ್ರಷ್ಟರ ಪರ ನಿಲ್ಲುವ ಬದಲಿಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು.  ಎಂದಿದ್ದಾರೆ. ವಿಶ್ಲೇಷಕ ಬಿ.ಎಸ್.ಮೂರ್ತಿ “ ಈ ಭ್ರಷ್ಟಾಚಾರ-ವಿರೋಧಿ ಹೋರಾಟ ನಿಲುವು ಮಹಾರಾಷ್ಟ್ರ ಚುನಾವಣೆಗೆ  ಬಿಜೆಪಿಗೆ ಸಹಾಯವಾಗಲಾರದು . ಏಕೆಂದರೆ ಬಿಜೆಪಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಕೆಲವು ವಿರೋಧ ಪಕ್ಷದ ನಾಯಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈಗ ತಾವು ನಿಲುವನ್ನು ಬದಲಿಸಿಕೊಂಡ ಮಾತ್ರಕ್ಕೆ ಭ್ರಷ್ಟಾಚಾರ ವಿರೋಧಿ ನಿರೂಪಣೆ ಹೇಗಾಗಲಿದೆ?" ಎಂದು ಪ್ರಶ್ನಿಸಿದ್ದಾರೆ.

ಕೃಪಾಶಂಕರ್ ಸಿಂಗ್,ಚಹಘಲ್ ಭುಜಬಲ್ ನಾರಾಯಣ್ ರಾಣೆ ಮತ್ತು ಇತರ ನಾಯಕರನ್ನು ಬೇರೆ ಪಕ್ಷದಿಂಡ ಬಿಜೆಪಿಗೆ ಬರಮಾಡಿಕೊಂಡ ಕೇಸರಿ ಪಕ್ಷ ಈಗ ತಾನು ಭ್ರಷ್ಟಾಚಾರದ ವಿರುದ್ಧವಾಗಿದ್ದೇನೆ ಎಂದರೆ ಹೇಗೆ ಒಪ್ಪಿಕೊಳ್ಳಲಾಗುತ್ತದೆ? ಆದರೆ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ದೊಡ್ಡ ಹೋರಾಟಕ್ಕೆ ಇದು ಬೆಂಬಲವಾಗಬಹುದು ಎಂದು ವಿಶ್ಲೇಷಕರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com