ಕರ್ನಾಟಕ ಉಪ ಚುನಾವಣೆ ಮುಂದೂಡಿಕೆ: ಅನರ್ಹ ಶಾಸಕರು, ಬಿಜೆಪಿಗೆ ವರದಾನ 

ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯ ಉಪ ಚುನಾವಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದ್ದು ಅನರ್ಹ ಶಾಸಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. 
ಅನರ್ಹ ಶಾಸಕರು
ಅನರ್ಹ ಶಾಸಕರು

ಬಿಜೆಪಿ, ಕ್ಷೇತ್ರದ ಜನತೆ ಜೊತೆ ಬಾಂಧವ್ಯ ಗಟ್ಟಿಗೊಳಿಸಲು ಸಮಯಾವಕಾಶ 

ಮೈಸೂರು: ಚುನಾವಣಾ ಆಯೋಗ ಕರ್ನಾಟಕ ವಿಧಾನಸಭೆಯ ಉಪ ಚುನಾವಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದ್ದು ಅನರ್ಹ ಶಾಸಕರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ಅವರಿಗೆ ಬಿಜೆಪಿ ಜೊತೆ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ತಮ್ಮ ತಮ್ಮ ಕ್ಷೇತ್ರಗಳಿಗೆ ಜನರ ಮನಸ್ಸಿನಲ್ಲಿ ಉತ್ತಮ ಭಾವನೆ ಮೂಡಿಸಲು ಒಂದು ತಿಂಗಳಿಗೂ ಹೆಚ್ಚು ಸಮಯವಿದೆ. 


ಉಪ ಚುನಾವಣೆ ಮುಂದೂಡಿಕೆ ಬಿಜೆಪಿ ನಾಯಕತ್ವಕ್ಕೆ ಕೂಡ ವರವಾಗಿದೆ. ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸಿ ಅನರ್ಹ ಶಾಸಕರ ಪರವಾಗಿ ಕೆಲಸ ಮಾಡುವಂತೆ ಹೇಳಬಹುದು. ಈ ಮೂಲಕ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಥಿರವಾಗಲಿದೆ.


ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಪರವಾಗಿ ತೀರ್ಪು ಕೊಟ್ಟರೆ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಉಳಿಕೆಗೆ ಮತ್ತಷ್ಟು ಸಹಾಯವಾಗಲಿದ್ದು ಬಂಡಾಯಗಾರರನ್ನು ಶಮನಗೊಳಿಸಲು ಮತ್ತು ಬಿಜೆಪಿಯ ಕೆಲವು ನಾಯಕರಲ್ಲಿರುವ ಅಸಮಾಧಾನವನ್ನು ಬಗೆಹರಿಸಲು ಸಹಾಯವಾಗುತ್ತದೆ.ಬಿಜೆಪಿಯಲ್ಲಿ ನಂದೀಶ್ ರೆಡ್ಡಿ, ಶರತ್ ಬಚ್ಚೇಗೌಡ ಮೊದಲಾದವರು ಹೊರಗಿನವರಿಗೆ ಟಿಕೆಟ್ ಕೊಟ್ಟು ಸ್ಪರ್ಧೆಗೆ ಪ್ರಾಶಸ್ತ್ಯ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು ಅದು ಸರ್ಕಾರ ಅಸ್ಥಿರತೆಗೆ ಸಹ ಕಾರಣವಾಗುತ್ತದೆ.


ಯಡಿಯೂರಪ್ಪ ಅವರ ಆಪ್ತರು ಆಕಾಂಕ್ಷಿ ನಾಯಕರುಗಳ ಜೊತೆ ಮಾತುಕತೆ ಆರಂಭಿಸಿದ್ದು ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.


ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಉನ್ನತ ಮಟ್ಟದ ನಾಯಕರಲ್ಲಿಯೇ ಭಿನ್ನಾಭಿಪ್ರಾಯ, ಅಸಮಾಧಾನ ಹೊಗೆಯಾಡುತ್ತಿದೆ. ಇದರ ಲಾಭವನ್ನು ಉಪ ಚುನಾವಣೆಯಲ್ಲಿ ಬಿಜೆಪಿ ಪಡೆದುಕೊಳ್ಳಲು ಯತ್ನಿಸುತ್ತಿದೆ. ನಾವು ಉಪ ಚುನಾವಣೆಗೆ ಸದ್ಯದಲ್ಲಿಯೇ ಸಿದ್ದರಾಗುತ್ತೇವೆ ಎನ್ನುತ್ತಾರೆ ಬಿಜೆಪಿ ನಾಯಕ ಶಿವಣ್ಣ.


ತಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯುತ್ತಿದ್ದು ಮಧ್ಯಂತರ ಆದೇಶವನ್ನು ನಿರೀಕ್ಷಿಸುತ್ತಿದ್ದೇವೆ ಎಂದರು.ಆದರೆ ಬೆಂಗಳೂರು ನಗರ ಮತ್ತು ಕೆಲ ಜಿಲ್ಲೆಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅನರ್ಹ ಶಾಸಕರು ಹಿಂದಿನ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸಿ ಗೆಲುವು ಕಂಡವರು. ಹೀಗಾಗಿ ಈ ಬಾರಿ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಿಜೆಪಿಗೆ, ಸ್ಪರ್ಧಾಳುಗಳಿಗೆ ಮತ್ತು ಕ್ಷೇತ್ರದ ಮತದಾರರಿಗೆ ಸಾಕಷ್ಟು ಗೊಂದಲ ಸೃಷ್ಟಿಸಬಹುದು. 


ಕೆಲವು ನಿಯೋಗ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರನ್ನು ಭೇಟಿ ಮಾಡಿ ಅನರ್ಹ ಶಾಸಕರಿಗೆ ಟಿಕೆಟ್ ನೀಡದಂತೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ.


ಇದನ್ನು ಬಗೆಹರಿಸಲು ಬಿಜೆಪಿ ಶಿಬಿರ ಮತ್ತು ಸಂವಾದಗಳನ್ನು ನಡೆಸಿ ಹೊಸ ಅಭ್ಯರ್ಥಿಗಳನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸುವ ಅನಿವಾರ್ಯತೆಯನ್ನು ಬಿಜೆಪಿ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಾಡಿಕೊಡಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com