ವಿಪಕ್ಷ ನಾಯಕರಿಗೆ ಯಾರು ನೊಟೀಸ್ ನೀಡಬೇಕೆಂಬ ಕನಿಷ್ಟ ಅರಿವಿಲ್ಲದೆ ಪತ್ರ ಕಳುಹಿಸಿದ್ದಾರೆ: ಸಿದ್ದರಾಮಯ್ಯ ಲೇವಡಿ

ಕೋವಿಡ್ ಗಾಗಿ ಖರ್ಚು ಮಾಡಿರುವ ಲೆಕ್ಕ ಕೊಡಿ ಎಂದು ಸರ್ಕಾರವನ್ನ ಪ್ರಶ್ನಿಸಿದರೆ, ಸಚಿವ ಆರ್.ಅಶೋಕ್ ಹೇಳ್ತಾರೆ ಸಿದ್ದರಾಮಯ್ಯ ಯಾರು ಲೆಕ್ಕ ಕೇಳೋಕೆ ಅಂತಾರೆ. ರಾಜ್ಯದ ಪ್ರತೀ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದೆ. ಸಚಿವರಿಗೆ ಸಂವಿಧಾನದ ಅರಿವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.
ಸಿದ್ಧರಾಮಯ್ಯ
ಸಿದ್ಧರಾಮಯ್ಯ
Updated on: 

ಮಂಡ್ಯ: ಕೋವಿಡ್ ಗಾಗಿ ಖರ್ಚು ಮಾಡಿರುವ ಲೆಕ್ಕ ಕೊಡಿ ಎಂದು ಸರ್ಕಾರವನ್ನ ಪ್ರಶ್ನಿಸಿದರೆ, ಸಚಿವ ಆರ್.ಅಶೋಕ್ ಹೇಳ್ತಾರೆ ಸಿದ್ದರಾಮಯ್ಯ ಯಾರು ಲೆಕ್ಕ ಕೇಳೋಕೆ ಅಂತಾರೆ. ರಾಜ್ಯದ ಪ್ರತೀ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದೆ. ಸಚಿವರಿಗೆ ಸಂವಿಧಾನದ ಅರಿವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವೈದ್ಯಕೀಯ ಉಪಕರಣ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ.ಕರ್ನಾಟಕದಲ್ಲಿ ಇದುವರೆಗೆ, 1,16,638 ಜನಕ್ಕೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಎರಡು ಸಾವಿರ ಜನರು ಕೋವಿಡ್ ಮತ್ತು ಚಿಕಿತ್ಸೆ ಸಿಗದೆ ಸತ್ತಿದ್ದಾರೆ. 

ನಾವು ಕೊರೊನಾಗಾಗಿ ನಾಲ್ಕು ಸಾವಿರ ಕೋಟಿ ಖರ್ಚು ಮಾಡಿದ್ದೇವೆಂದು ಸರ್ಕಾರದ ದಾಖಲೆಗಳು ಹೇಳುತ್ತಿವೆ. ಆದರೆ, ಸರ್ಕಾರ ಯಾವುದಕ್ಕೆ ಖರ್ಚು ಮಾಡಿದೆ, ಎಷ್ಟು ಖರ್ಚು ಮಾಡಿದೆ. ಹೇಗೆ ಖರ್ಚು ಮಾಡಿದೆ ಎಂಬ ಲೆಕ್ಕಕೊಡಿ ಎಂದು ಕೇಳುತ್ತಿದ್ದೇನೆ ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com