ಸದನ ಮುಂದೂಡಿಕೆ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು

ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ಬಗ್ಗೆ ಚರ್ಚೆ ಸಂಬಂಧ ಆಡಳಿತಾರೂಢ ಬಿಜೆಪಿ ಸದಸ್ಯರು ಶುಕ್ರವಾರ ರಾಜ್ಯಪಾಲರ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈ ತಿಂಗಳ 15ಕ್ಕೆ ಕಲಾಪ ನಡೆಸುವಂತೆ ನಿರ್ದೇಶನ ನೀಡಿದೆ. 
ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಸದಸ್ಯರು
ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಸದಸ್ಯರು
Updated on

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ಬಗ್ಗೆ ಚರ್ಚೆ ಸಂಬಂಧ ಆಡಳಿತಾರೂಢ ಬಿಜೆಪಿ ಸದಸ್ಯರು ಶುಕ್ರವಾರ ರಾಜ್ಯಪಾಲರ ಮೊರೆ ಹೋಗಿದ್ದಾರೆ. ಇದರ ಬೆನ್ನಲ್ಲೇ ಈ ತಿಂಗಳ 15ಕ್ಕೆ ಕಲಾಪ ನಡೆಸುವಂತೆ ನಿರ್ದೇಶನ ನೀಡಿದೆ. 

ಈ ಸಂಬಂಧ ಸಂಸದೀಯ ಇಲಾಖೆ ಕಾರ್ಯದರ್ಶಿ ಪರಿಷತ್ತಿನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. 

ಸರ್ಕಾರ ನಿಗದಿ ಮಾಡಿದ ಕಾರ್ಯಕಲಾಪಗಳಂತೆ ಈತಿಂಗಳ 15ರವರೆಗೆ ಕಲಾಪ ನಡೆಸಬೇಕಿತ್ತು. ಕಲಾಪ ಸಲಹಾ ಸಮಿತಿಯಲ್ಲಿ ಯಾವುದೇ ನಿರ್ಣಯ ಕೈಗೊಳ್ಳದೇ ಇರುವುದರಿಂದ 15ರವರೆಗೆ ಮುಂದುವರೆಸಬೇಕು. ಒಂದು ವೇಳೆ ಸದಸ್ಯರು ಬೆಂಗಳೂರಿನಿಂದ ದೂರ ಹೋಗಿದ್ದಲ್ಲಿ ಕೊನೆ ಪಕ್ಷ 15 ರಂದು ಬೆಳಿಗ್ಗೆ 11 ಗಂಟೆಗೆ ಸಭೆ ಕರೆದು ನಿಯಮಾವಳಿಗಳಂತೆ ಚರ್ಚಿಸಲು ಅನುವು ಮಾಡಿಕೊಡಬೇಕೆಂದು ಸೂಚಿಸಲಾಗಿದೆ. ಒಂದು ವೇಳೆ ಕಲಾಪ ನಡೆಸದಿದ್ದರೆ ಸರ್ಕಾರ ಮತ್ತು ಸಭಾಪತಿಗಳ ಮಧ್ಯೆ ತಿಕ್ಕಾಟ ಏಱ್ಪಟ್ಟು ರಾಜ್ಯಪಾಲರು ನೇರವಾಗಿ ಮಧ್ಯೆ ಪ್ರವೇಶ ಮಾಡುವ ಸನ್ನಿವೇಳ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದ್ದು, ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಬೇಕಾದೀತು ಎಂಬ ಕಾರಣಕ್ಕಾಗಿಯೇ ಸಭಾಪತಿಗಳು ಸದನಯವನ್ನು ಏಕಪಕ್ಷೀಯವಾಗಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆಂದು ಬಿಜೆಪಿ ಆಪಾದಿಸಿದೆ. 

ಈ ನಡುವೆ ಶುಕ್ರವಾರ ಬೆಳಗ್ಗೆ ಪರಿಷತ್ತಿನ ಬಿಜೆಪಿ ಸದಸ್ಯರು ರಾಜಭವನಕ್ಕೆ ತೆರಳಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಭಾಪತಿಗಳ ನಡೆ ಬಗ್ಗೆ ದೂರು ಸಲ್ಲಿಸಿದರು. ಗುರುವಾರ ಸಂಜೆ ಕಲಾಪ ಮುಂದೂಡಿದ ಬೆನ್ನಲ್ಲೇ ಪರಿಷತ್ತಿನ ಸದಸ್ಯರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಮುಖ್ಯ ಸಚೇತನಕ ಮಹಾಂತೇಶ್ ಕವಟಗಿಮಠ ರಾಜ್ಯಪಾಲರನ್ನು ಭೇಟಿ ಮಾಡಿ ದೂರಿದ್ದರು. 

ಶುಕ್ರವಾರ ಸಭಾನಾಯಕರೂ ಆಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಹಲವು ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ವಾಸ್ತವವಾಗಿ ಬಿಜೆಪಿಯ ಎಲ್ಲಾ ಸದಸ್ಯರೂ ರಾಜಭವನಕ್ಕೆ ತೆರಳಲು ಇದ್ದೇಶಿಸಿದ್ದರು. ಆದರೆ, ಕೋವಿಡ್ ಕಾರಣಕ್ಕಾಗಿ ಕೇವಲ ಐದುಮಂದಿ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಯಿತು. ಪೂಜಾರಿ ಜೊತೆಗೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಸದಸ್ಯರಾದ ಎನ್.ರವಿಕುಮಾರ್ ಆಯನೂರು ಮಂಜುನಾಥ್ ಹಾಗೂ ತೇಜಸ್ವಿನಿ ಗೌಡ ನಿಯೋಗದಲ್ಲಿದ್ದರು. 

ಮಂಗಳವಾರದವವರೆಗೂ ಕಲಾಪ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಗುರುವಾರವೇ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ. ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಲಹೆಗಳನ್ನು ಪಡೆಯಲಾಗುತ್ತದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿಯವರು ಹೇಳಿದ್ದಾರೆ. 

31 ಸದಸ್ಯರು ಹಾಗೂ ಸ್ವತಂತ್ರ ಅಭ್ಯರ್ಥಿಗಳು ನಮ್ಮ ಬಳಿಯಿದ್ದು, ಬಿಜೆಪಿ ಶಾಸಕಾಂಗ ಪರಿಷತ್ತಿನ ಏಕೈಕ ಅತಿದೊಡ್ಡ ಪಕ್ಷವಾಗಿದೆ, ಆದರೆ, ಅಧ್ಯಕ್ಷರ ಹುದ್ದೆ ಇನ್ನೂ ಕಾಂಗ್ರೆಸ್‌ನಲ್ಲಿದೆ. ಅಧ್ಯಕ್ಷಕರೂ ಸೇರಿ ಕಾಂಗ್ರೆಸ್ ನಲ್ಲಿ 29 ಸದಸ್ಯರಿದ್ದಾರೆ. ಜೆಡಿಎಸ್ ನಲ್ಲಿ 14 ಮಂದಿ ಸದಸ್ಯರಿದ್ದಾರೆ. ಜೆಡಿಎಸ್ ಬೆಂಬಲದಿಂದ ಬಿಜೆಪಿ ಕೃಷಿ ಮಸೂದೆಯನ್ನು ಜಾರಿಗೆ ತಂದಿತ್ತು. ಇದೀಗ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಜೆಡಿಎಸ್ ಸಹಾಯ ಮಾಡಲಿದೆ ಎಂದು ನಿರೀಕ್ಷಿಸುತ್ತಿದೆ. 

ಸದನದ ಮುಖ್ಯಸ್ಥ ರಾಜ್ಯಪಾಲರಾಗಿದ್ದು, ಮುಂದೂಡಲಾಗಿರುವ ಕಲಾಪವನ್ನು ಮರಳಿ ಕಾರ್ಯಾರಂಭಗೊಳಿಸುವ ಹಕ್ಕೂ ಅವರಿಗಿದೆ. ಸಭಾಪತಿಗಳು ಸದನ ಸಲಹಾ ಸಮಿತಿಯ ನಿರ್ಧಾರದಂತೆ ನಡೆಯಬೇಕು ಎಂದು ವಿ.ಆರ್.ಸುಧರ್ಶನ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com