2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕಣಕ್ಕಿಳಿಯಲಿದೆ: ದೇವೇಗೌಡ

2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ.
ದೇವೇಗೌಡ
ದೇವೇಗೌಡ
Updated on

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ವಿರುದ್ಧ ಜೆಡಿಎಸ್ ಹೋರಾಟ ನಡೆಸಲಿದೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. 

ಬಿಜೆಪಿ ಜೊತೆಗೆ ಜೆಡಿಎಸ್ ವಿಲೀನವಾಗಲಿದೆ ಎಂಬ ಸುದ್ದಿ ಬಾಲಿಶವಾಗಿದ್ದು, ಇದರಲ್ಲಿ ಏನಾದರೂ ಸೆನ್ಸ್ ಇದೆಯೇ ಎಂದು ದೇವೇಗೌಡ ಅವರು ಇದೇ ವೇಳೆ ಗರಂ ಆದರು. 

ವಿಲೀನ ಕುರಿತು ಯಾವ ಜ್ಯೋತಿಷಿ ಹೇಳಿದ್ದು? ಇಂತಹ ವಿಚಾರವನ್ನು ಹಬ್ಬಿಸಿದವರು ಯಾರು? ಎಂದು ಮಾಧ್ಯಮದವರನ್ನು ಖಾರವಾಗಿ ಪ್ರಶ್ನಸಿದ ಅವರು, ಪ್ರಧಾನಿಯಾಗಿ ಈ ದೇಶವನ್ನು ಆಳಿದವನು ನಾನು. ಪಕ್ಷವನ್ನು ಮನೆ ಬಾಗಿಲಿಗೆ ಬಿಡಲು ಆಗುತ್ತದೆಯೇ? ಯಾರೆಲ್ಲಾ ನಮ್ಮ ಬಳಿ ಬಂದಿದ್ದಾರೆಂಬುದನ್ನು ಹೇಳಬಲ್ಲೆ. ನಾವು ಯಾರ ಮನೆ ಬಾಗಿಲಿಗೂ ಹೋಗಿಲ್ಲ. ನಾನು ಹೋದ ಮೇಲೂ ಪಕ್ಷ ನಡೆಯಬೇಕು. ಅದಕ್ಕಾಗಿ ಸಂಘಟನೆ, ಹೋಟಾಕ ಎಲ್ಲವನ್ನೂ ಮಾಡುತ್ತೇನೆಂದು ನುಡಿದರು. 

ಜೆಡಿಎಸ್ ಪಕ್ಷವನ್ನು ಬೆಳೆಸುತ್ತೇವೆ. ಪ್ರಾದೇಶಿಕ ಪಕ್ಷ ದೇಶಕ್ಕೆ ಅನಿವಾರ್ಯ. ಬಿಜೆಪಿ ಪಕ್ಷದ ಜೊತೆಗೆ ವಿಲೀನಗೊಳ್ಳುವುದಿಲ್ಲ. ಎಂಬುದರ ಬಗ್ಗೆ ಕುಮಾರಸ್ವಾಮಿಯವರು ಜ.7 ರಂದು ನಡೆಯುವ ಕಾರ್ಯಕ್ರಮದಲ್ಲಿ ಗಟ್ಟಿಯಾಗಿ ಹೇಳಲಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com