ಸದನ ಸಮಿತಿ ರಚನೆ ಬುಲಟಿನ್ ಹೊರಡಿಸಲು ಪರಿಷತ್ ಕಾರ್ಯದರ್ಶಿ ಮೀನಾಮೇಷ: ಸಭಾಪತಿ ಆದೇಶವನ್ನು ಪಾಲಿಸಲು ಹಿಂದೇಟು

ಡಿ.15ರಂದು ವಿಧಾನ ಪರಿಷತ್ ನಲ್ಲಿ ನಡೆದ ಅಹಿತಕರ ಘಟನೆಯ ತನಿಖೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನ ಸಮಿತಿ ರಚಿಸಲು ತೀರ್ಮಾನಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಡಿ.15ರಂದು ವಿಧಾನ ಪರಿಷತ್ ನಲ್ಲಿ ನಡೆದ ಅಹಿತಕರ ಘಟನೆಯ ತನಿಖೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸದನ ಸಮಿತಿ ರಚಿಸಲು ತೀರ್ಮಾನಿಸಿದ್ದಾರೆ.

ಸಭಾಪತಿ ಅವರ ನಿರ್ದೇಶನವನ್ನು ಬುಲೆಟಿನ್ ಹೊರಡಿಸಲು ಪರಿಷತ್ ಕಾರ್ಯದರ್ಶಿ ವಿನಾಕಾರಣ ನೆಪಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸಭಾಪತಿ ಅವರ ಸದಸನ ಸಮಿತಿ ರಚನೆ ಸಂಬಂಧ ನೀಡಿರುವ ಟಿಪ್ಪಣಿಯ ಅಧಿಕೃತ ಪ್ರಕಟಣೆ ಹೊರಡಿಸಲು ಕಾರ್ಯದರ್ಶಿ ಮಹಾಲಕ್ಷ್ಮೀ ಇಂದು ನಾಳೆ ಎಂದು ನೆಪ ಹೇಳುತ್ತಿದ್ದಾರೆ.ಈ ಬಗ್ಗೆ ಯುಎನ್ಐ ಕನ್ನಡ ಸುದ್ದಿ ಸಂ ಸ್ಥೆ ವರದಿಗಾರರು ಕಾರ್ಯದರ್ಶಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ನೀಡಿದ ಹೇಳಿಕೆ ಆಶ್ಚರ್ಯ ಮೂಡಿಸಿದೆ. 

’ಸಭಾಪತಿ ಅವರು ನೀಡಿರುವ ಟಿಪ್ಪಣಿಯನ್ನು ಅಧಿಕೃತ ಪ್ರಕಟಣೆ ಹೊರಡಿಸಬಹುದು ಅಥವಾ ಹೊರಡಿಸದೆಯೇ ಇರಬಹುದು.ಅಧಿಕೃತ ಆದೇಶ ಹೊರಬೀಳುವ ತನಕ ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲವೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದಾರೆ.ಅದಕ್ಕೆ ಉಪಸಭಾಪತಿ ಅವರ ಆತ್ಮ ಹತ್ಯೆಯ ಘಟನೆಯನ್ನು ಉದಾಹರಿಸಿದ ಅವರು ಯಾರೂ ಊಹಿಸಿರಲಿಲ್ಲಅಂತೆಯೇ ಪ್ರಕಟಣೆ ಹೊರಡಿಸುವ ವಿಚಾರವೂ ಎಂಬಂತೆ ಪರಿಗಣಿಸಿರುವುದು ವಿಪರ್ಯಾಸವೇ ಸರಿ.

ಘಟನೆ ಸಂಬಂಧ ತನಿಖೆ ನಡೆಸುವಂತೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸದಸ್ಯರ ದೂರು ಹಾಗೂ ಒತ್ತಾಯದ ಮೇರೆ ಗೆ ಸದನ ಸಮಿತಿ ರಚಿಸಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆ ನಿಯಾಮವಳಿ ನಿಯಮ 331 ಮತ್ತು 342ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಮಾಜಿ ಉಪ ಸಭಾಪತಿ ಮರಿ ತಿಬ್ಬೇಗೌಡರ ನೇತೃತ್ವದಲ್ಲಿ 5 ಜನ ಸದಸ್ಯರ ಸದನ ಸಮಿತಿ ರಚಿಸಲಾಗಿದೆ.

ಸದನ ಸಮಿತಿ ರಚಿಸಿ ಪ್ರಕಟಣೆ ಹೊರಿಡಿಸುವಂತೆ ಸಭಾಪತಿ ಅವರು ಆದೇಶಿಸಿರುವ ಟಿಪ್ಪಣಿ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿಗೆ ಕೈ ಸೇರಿ ಮೂರು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಡಿಸಲು ಅವರು ಹಿಂದೇಟು ಹಾಕಿದ್ದಾರೆ. ಆ ಮೂಲಕ ಘಟನೆಗೆ ಕಾರಣಕರ್ತರಾದ ಸದಸ್ಯರನ್ನು, ಸಚಿವರನ್ನು ಅಥವಾ ಅಧಿಕಾರಿ ಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ವಿಪರ್ಯಾಸವೆಂದರೆ ಪ್ರಕರಣದಲ್ಲಿ ಸ್ವತಃ ಕಾರ್ಯದರ್ಶಿ ವಿರುದ್ಧರೂ ಕರ್ತವ್ಯ ಲೋಪ ಆರೋಪ ಕೇಳಿ ಬಂದಿರುವುದು ವಿಳಂಬಕ್ಕೆ ಪ್ರಮುಖ ಕಾರಣವಾ ಗಿರಬಹುದು ಎಂಬ ಮಾತುಗಳು ಕೇಳಿ ಬಂದಿದೆ.

ಸದನದ ಸಂಪ್ರದಾಯ ಉಲ್ಲಂಘಿಸಿ ಸಭಾಪತಿಗಳ ಪೀಠವನ್ನು ಅಸಂಸದೀಯ ನಡವಳಿಕೆಯಿಂದ ಅತಿ ಕ್ರಮಣ ಮಾಡಿ, ಪೀಠವನ್ನು ಅಲಂಕರಿಸಿ ಮೇಲ್ಮನೆ ಗೌರವನ್ನು ಸದಸ್ಯರು ಹಾಳುಗೆಡವಿದ್ದಾರೆ. ಇದರಿಂದಾಗಿ ಶತಮಾನ ಗಳ ಇತಿಹಾಸವಿರುವ ಸದನಕ್ಕೆ ಹಾಗೂ ಪೀಠಕ್ಕೆ ಅಪಮಾನ ಮಾಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಆಯನೂರು ಮಂಜುನಾಥ್, ವೈ.ಎ.ನಾರಾಯಣಸ್ವಾಮಿ, ಆ.ದೇವೇಗೌಡ, ಪುಟ್ಟಣ್ಣ, ಭಾರತೀ ಶೆಟ್ಟಿ ಸೇರಿದಂತೆ ಹಲವಾರು ಸದಸ್ಯರು, ವಿಪಕ್ಷ ನಾಯಕರಾದ ಎಸ್.ಆರ್.ಪಾಟೀಲ್, ಸದಸ್ಯರಾದ ಪಿ.ಆರ್.ರಮೇಶ್, ಕೊಂಡಯ್ಯ, ಮೋಹನ್ ಕೊಂಡಜ್ಜಿ, ಪರಿಷತ್ ಜೆಡಿಎಸ್ ನಾಯಕರಾದ ಬಸವ ರಾಜ್ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಬಹುತೇಕ ಸದಸ್ಯರು ಸಭಾಪತಿ ಅವರಿಗೆ ಕೆಲವರು ಮಾಧ್ಯಮ ಗಳ ಮೂಲಕ ಆಗ್ರಹಿಸಿದರೆ,,ಕೆಲವು ಸದಸ್ಯರು ಪತ್ರ ಬರೆದು ಒತ್ತಾಯಿಸಿದರು.

ಸದನದಲ್ಲಿ ನಡೆದ ಘಟನಾವಳಿ ಬಗ್ಗೆ ವಿಧಾನ ಪರಿಷತ್ತಿನ ನೀತಿ ನಿರೂಪಣಾ ಸಮಿತಿಗೆ ತನಿಖೆಗೆ ವಹಿಸಬೇಕಿತ್ತು. ಆದರೆ ಸಮಿತಿಗೆ ಪರಿಷತ್ತಿನ ಅಧಿಕಾರಿಗಳು,ಸಿಬ್ಬಂದಿಗಳ ವಿರುದ್ಧದ ಆರೋಪಗಳನ್ನು ಪರಿಶೀಲಿಸುವ ಅವಕಾಶವಿಲ್ಲದ ಕಾರಣ ಹಾಗೂ ನೀತಿ ನಿರೂಪಣಾ ಮಸಿತಿ ರಚನೆ ಆಗದಿರುವುದರಿಂದ ಪ್ರಕರಣವನ್ನು ತನಿಖೆಗೆ ವಹಿಸುವುದು ಸಾಧ್ಯವಿಲ್ಲವಾಗಿದೆ.ಜೊತೆಗೆ ನೀತಿ ನಿರೂಪಣಾ ಸಮಿತಿಗೆ ಉಪ ಸಭಾಪತಿಯವರೇ ಅಧ್ಯಕ್ಷರಾಗಿದ್ದರು. ವಿಪರ್ಯಾಸವೆಂದರೆ ಉಪಸಭಾಪತಿ ಅವರ ಮೇಲೆ ದೂರು ಇರುವ ಹಿನ್ನಲೆಯಲ್ಲಿ ಸದನ ಸಮಿತಿಗೆ ವಹಿಸುವುದು ಸೂಕ್ತವೆಂದು ತೀರ್ಮಾನಿಸಿ ಸದನ ಸಮಿತಿ ರಚಿಸಲಾಗಿದೆ. 

ಅಷ್ಟಕ್ಕೂ ಇಂತಹ ಪ್ರಕರಣಗಳನ್ನು ಸದನ ಸಮಿತಿ ಮೂಲಕ 2008 ರಲ್ಲಿ ಅಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ತನಿಖೆ ನಡೆಸಿದ್ದು ಹಿಂದಿನ ವಿಧಾನ ಸಭೆಯಲ್ಲಿ ನಡೆದಿತ್ತು. ವಿಧಾನ ಸಭೆಯಲ್ಲಿ 2010ರ ಜುಲೈ 9 ರಂದು ನಡೆದ ಘಟನೆ ಹಾಗೂ 2010 ರ ಅಕ್ಟೋಬರ್ 11ರಂದು ನಡೆದ ಮತ್ತೊಂದು ಪ್ರಕರಣಗಳನ್ನು ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದನ ಸಮಿತಿ ಮೂಲಕ ತನಿಖೆ ನಡೆಸಲಾಗಿತ್ತು.ಇದನ್ನೇ ಆಧಾರವಾಗಿಟ್ಟುಕೊಂಡು ವಿಧಾನ ಪರಿಷತ್ತಿನ ಅಹಿತಕರ ಘಟನೆಯನ್ನು ಸದನ ಸಮಿತಿಗೆ ನೀಡಲು ಸಭಾಪತಿ ತೀರ್ಮಾನಿಸಿದ್ದರು. 

ಸದನ ಸಮಿತಿ ಅಧ್ಯಕ್ಷರಾಗಿರುವ ಮರಿ ತಿಬ್ಬೇಗೌಡರು ಸೇರಿದಂತೆ ಸದನದಲ್ಲಿ ನಡೆದ ಗದ್ದಲ ಗಲಾಟೆಯಲ್ಲಿ ಭಾಗಿ ಯಾಗದೆ ಉಳಿದವರನ್ನು ಹಾಗೂ ಸದನದ ನಿಯಾವಳಿ ಬಗ್ಗೆ ನಿಷ್ಪಕ್ಷಪಾತವಾಗಿ ನೋಡುವವರಿಗೆ ಸದನ ಸಮಿ ತಿ ಸದಸ್ಯರಾಗಿ ಆಯ್ಕೆ ಮಾಡಿ ಸಮಿತಿ ರಚಿಸಿದ್ದಾರೆ. ಸಮಿತಿಯ ಅಧ್ಯಕ್ಷರಾಗಿ ಮರಿತಿಬ್ಬೇ ಗೌಡರು ಜೆಡಿಎಸ್ ಪಕ್ಷ ದಿಂದ,ಕಾಂಗ್ರೆಸ್ ಪಕ್ಷದಿಂದ ಹಿರಿಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್,ಆರ್.ಬಿ.ತಿಮ್ಮಾಪೂರ್, ಬಿಜೆಪಿ ಸದಸ್ಯರಾದ ಅಡಗೂರು ಎಚ್.ವಿಶ್ವನಾಥ್, ಎಸ್.ವ್ಹಿ.ಸಂಕನೂರ್ ಅವರನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.

ವಿಶೇಷ ಸದನ ಸಮಿತಿಯು ಡಿ.15ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಅಹಿಕರ ಘಟನೆಯಲ್ಲಿ ನಿಯಮ ಬಾಹಿರವಾಗಿ ತೋರಿದ ವರ್ತನೆ ಅಂಶಗಳು, ಘಟನೆಗೆ ಕಾರಣರಾದ ಸದನದ ಸದಸ್ಯರು, ಸಚಿವರು, ಉಪ ಸಭಾಪತಿ, ಸಚಿವಾಲಯದ ಸಿಬ್ಬಂದಿಗಳು ಇತರರ ಬಗ್ಗೆ ಪರಿಶೀಲನೆ ನಡೆಸುವುದು.ಘಟನೆ ಸಂಬಂಧ ಕಾಂಗ್ರೆಸ್, ಬಿಜೆಪಿ ಸದಸ್ಯ ರು ಸಭಾಪತಿಗೆ ಸಲ್ಲಿಸಿದ ದೂರು ಮತ್ತು ಮನವಿಗಳನ್ನು ಪರಿಶೀಲನೆ ನಡೆಸು ವುದು.ಪೀಠ ಮತ್ತು ಸದನದ ಗೌರ ವಕ್ಕೆ ಚ್ಯುತಿ ತಂದ ಇತರೆ ಪೂರಕ ಅಂಶಗಳ ಬಗ್ಗೆ ಪರಿಶೀಲನೆ ನಡೆ ಸುವ ಅಂಶಗಳನ್ನು ಸಮಿತಿಯ ಪರಿಶೀಲನೆ ನಡೆಸಲಿದೆ.

ಸಮಿತಿಯು ಆದಷ್ಟು ಶೀಘ್ರವಾಗಿ ವಿಚಾರಣೆ ನಡೆಸಿ 20 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸ ಲಾಗಿದೆ.ಆ ಮೂಲಕ ಘಟನೆಗೆ ಕಾರಣಕರ್ತರ ವಿರುದ್ಧ ಸಮಿತಿಯು ಮಾಡುವ ಶಿಫಾರಸ್ಸುಗಳ ಅನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪರಿಷತ್ ಹಿರಿಮೆಗೆ ಚ್ಯುತಿ ತಂದವರಿಗೆ ತಕ್ಕ ದಂಡನೆ ನೀಡುವ ಮೂಲಕ ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com