ಗೆದ್ದವರಿಗೆಲ್ಲ ಮಂತ್ರಿಗಿರಿ ಕೊಟ್ಟರೆ ಒಳ್ಳೆಯದು, ಸಿಎಂ ಮಾತುಕೊಟ್ಟಿದ್ದಾರೆ: ಶ್ರೀಮಂತ್ ಪಾಟೀಲ್

ಗೆದ್ದ ಹನ್ನೊಂದು ಶಾಸಕರಿಗೆ ಮಂತ್ರಿ ಸ್ಥಾನ ಕೊಟ್ಟರೆ ಒಳ್ಳೆಯದು, ಸಿಎಂ ಮಾತು ಕೊಟ್ಟಿದ್ದಾರೆ ಎಂದು ಶಾಸಕ ಶ್ರೀಮಂತ್ ಪಾಟೀಲ್ ತಿಳಿಸಿದ್ದಾರೆ.
ಶ್ರೀಮಂತ ಪಾಟೀಲ್
ಶ್ರೀಮಂತ ಪಾಟೀಲ್
Updated on

ಬೆಂಗಳೂರು: ಗೆದ್ದ ಹನ್ನೊಂದು ಶಾಸಕರಿಗೆ ಮಂತ್ರಿ ಸ್ಥಾನ ಕೊಟ್ಟರೆ ಒಳ್ಳೆಯದು, ಸಿಎಂ ಮಾತು ಕೊಟ್ಟಿದ್ದಾರೆ ಎಂದು ಶಾಸಕ ಶ್ರೀಮಂತ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10+3 ಸೂತ್ರದಲ್ಲಿ‌ ಶ್ರೀಮಂತ ಪಾಟೀಲ್ ಇದ್ದಾರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,ನನಗೆ ಇನ್ನೂ ಏನೂ ಯಾವುದೇ ಸಂದೇಶ ಬಂದಿಲ್ಲ.

11 ಮಂದಿಗೂ ಅಧಿಕಾರ ಕೊಟ್ರೆ ಸರಿ ಆಗುತ್ತದೆ. ಮಾತು ಕೊಟ್ಟಂತೆ ನಡೆದುಕೊಂಡ್ರೆ ಒಳ್ಳೆಯದು. ಇಲ್ಲವಾದರೆ ಎಲ್ಲಾ ರಾಜ್ಯಕ್ಕೆ ಸಂದೇಶ ಬೇರ ಹೋಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

ನಾನು ಮಾಧ್ಯಮಗಳ ಮೂಲಕವೇ ನನ್ನ ಹೆಸರು ಇದೆ ಅಂತ ತಿಳಿದುಕೊಂಡಿದ್ದೇನೆ. ಗೆದ್ದ 11 ಶಾಸಕರಿಗೂ ಮಂತ್ರಿ ಸ್ಥಾನ ಕೊಡ್ತೀನಿ ಅಂತ ಸಿಎಂ ಹೇಳಿದ್ರು. 11 ಜನರಿಗೂ ಮಂತ್ರಿ ಸ್ಥಾನ ಕೊಡೋ ವಿಶ್ವಾಸ ಇದೆ. ಸಿಎಂ ಕೂಡಾ ಮಾತು ಕೊಟ್ಟಿದ್ದಾರೆ.

11 ಜನರಿಗೆ ಕೊಟ್ಟರೆ ಮಾತ್ರ ಮಾತು ಉಳಿಸಿಕೊಂಡಂತೆ ಆಗುತ್ತೆ. ಇಲ್ಲ ಅಂದ್ರೆ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತೆ ಎಂದು ತಿಳಿಸಿದ್ದಾರೆ. 

ಮಹೇಶ್ ಕುಮಟಳ್ಳಿಗೆ ಸ್ಥಾನ ತಪ್ಪುವ ವಿಚಾರ ನನಗೆ ಗೊತ್ತಿಲ್ಲ. 40 ಸಾವಿರ ಜನರ ಮುಂದೆ ಸಿಎಂ ಮಾತು ಕೊಟ್ಟಿದ್ದಾರೆ. ನನಗೂ ಸಿಎಂ ಮಾತು ಕೊಟ್ಟಿದ್ದಾರೆ. ಹೀಗಾಗಿ ಮಂತ್ರಿ ಮಾಡೋ ಭರವಸೆ ಇದೆ ಅಂತ ತಿಳಿಸಿದ್ರು. ಮಹೇಶ್ ಕುಮಟಳ್ಳಿಗೆ ನಿಗಮ-ಮಂಡಳಿ ಸ್ಥಾನ ನೀಡೋ ವಿಚಾರ ನನಗೆ ಗೊತ್ತಿಲ್ಲ. ಗೆದ್ದ ಎಲ್ಲರಿಗೂ ಮಂತ್ರಿ ಮಾಡ್ತೀನಿ ಅಂತ ಸಿಎಂ ಹೇಳಿದ್ದರು.

ಮಹೇಶ್ ಕುಮಟಳ್ಳಿ ಸ್ಥಾನದ ವಿಚಾರ ಹೈಕಮಾಂಡ್ ನಿರ್ಧಾರ ಮಾಡಿರಬೇಕು. ಇದೊಂದು ರಾಷ್ಟ್ರೀಯ ಪಕ್ಷ. ಅವರು ಏನೇ ನಿರ್ಧಾರ ತೆಗೆದುಕೊಂಡ್ರು ಅದಕ್ಕೆ ನಾವು ಬದ್ಧರಾಗಿರಬೇಕು ಅಂತ ತಿಳಿಸಿದರು. ನಾವು ಕೂಡಾ ಸಿಎಂಗೆ ಭೇಟಿ ಮಾಡಿ ಕುಮಟಳ್ಳಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡುತ್ತೇವೆ. 

ಇದೇ ವೇಳೆ ಸೋತ ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಗೂ ಸ್ಥಾನ ಕೊಡಬೇಕು. ಅವರು ಕೂಡಾ ತ್ಯಾಗ ಮಾಡಿದ್ದಾರೆ. ನಾವು ಸಿಎಂ ಭೇಟಿ ಮಾಡಿ ಅವರಿಗೆ ಸ್ಥಾನ ಕೊಡಿ ಅಂತ ಮನವಿ ಮಾಡ್ತೀವಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com