ಶಾಸಕನಾಗಿ ರಿಜ್ವನ್ ಅರ್ಷದ್ ಆಯ್ಕೆ: ಎಂಎಲ್ ಸಿಯಾಗಿ ಲಕ್ಷ್ಮಣ್ ಸವದಿ  ಆಯ್ಕೆ ಬಹುತೇಕ ಖಚಿತ

 ಶಿವಾಜಿನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್  ಹಿನ್ನೆಲೆಯಲ್ಲಿ ತೆರವಾಗಿರುವ ಎಂಎಲ್ ಸಿ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್
Updated on

ಬೆಂಗಳೂರು: ಶಿವಾಜಿನಗರ ಕ್ಷೇತ್ರದಿಂದ ಆಯ್ಕೆಯಾಗಿರುವ ರಿಜ್ವಾನ್ ಅರ್ಷದ್  ಹಿನ್ನೆಲೆಯಲ್ಲಿ ತೆರವಾಗಿರುವ ಎಂಎಲ್ ಸಿ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಸೋತಿದ್ದರು, ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಗಸ್ಟ್ 20 ರಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು,  ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರು ತಿಂಗಳೊಳಗೆ ಪರಿಷತ್ ಅಥವಾ ವಿಧಾನಸಭೆಯಿಂದ ಜನಪ್ರತಿನಿಧಗಳು ಆಯ್ಕೆಯಾಗಲೇ ಬೇಕೆಂಬ ಕಾನೂನು ಇರುವುದರಿಂದ ಸವದಿ ಆಯ್ಕೆಯಾಗಬೇಕಿದೆ.

ನಾನು ಈಗಾಗಲೇ ರಾಜಿನಾಮೆ ನೀಡಿದ್ದೇನೆ,  ಅದನ್ನು ಸ್ಪೀಕರ್ ಕೂಡ ಅದನ್ನು ಅನುಮೋದಿಸಿಲ್ಲ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಸರ್ಕಾರ 117 ಶಾಸಕರಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ 100 ಶಾಸಕರಿದ್ದಾರೆ.  ಹೀಗಾಗಿ ವಿರೋಧ ಪಕ್ಷಗಳು ಯಾವುದೇ ಸವಾಲು ಹಾಕಲು ಸಾಧ್ಯವಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com