ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು: ಉಪೇಂದ್ರ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ  ನಟ,  ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ
ಉಪೇಂದ್ರ
ಉಪೇಂದ್ರ
Updated on

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಜನರ ತಲೆಗೆ ಹುಳ ಬಿಡುವ  ನಟ,  ರಾಜಕಾರಣಿ ಉಪೇಂದ್ರ ‘ನಾಯಕ’ ಬೇಕೇ ಎಂದು ಪ್ರಶ್ನಿಸಿದ್ದಾರೆ
  
“ಸರ್ಕಾರದ ಬೊಕ್ಕಸದಲ್ಲಿರುವ ಒಂದೊಂದು ಪೈಸೆಯೂ ನಿಮ್ಮದು ಅಂದಮೇಲೆ ಅದರ ಮೇಲಿನ ಅಧಿಕಾರ ನಿರ್ಧಾರ ನಿಮ್ಮದೇ ಆಗಿರಬೇಕಲ್ಲವೇ ? ಬರೀ ಸಂಬಳಕ್ಕೆ ಕೆಲಸ ಮಾಡುವ ಕಾರ್ಮಿಕ ಮತ್ತು ತಂತ್ರಜ್ಞಾನದಿಂದ ಇದನ್ನು ನೀವೇ ಮಾಡಬಹುದು ಎಂದಾದರೆ ಒಬ್ಬ ನಾಯಕ ನಿಮಗೆ ಬೇಕೇ ?” ಎಂದು ಟ್ವೀಟ್ ಮಾಡಿದ್ದಾರೆ.
  
ಮತ್ತೊಂದು ಟ್ವೀಟ್‍ನಲ್ಲಿ, “ವಿಚಾರ” ಮುಖ್ಯ “ನಾನು” ಎಂಬುದು ಪ್ರಜಾಕೀಯದಲ್ಲಿ ಮುಖ್ಯವಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇವೆ. ಆ ಅರ್ಥದಲ್ಲೇ ಉಪ್ಪಿ ಚುನಾವಣೆಗೆ ನಿಲ್ಲುವುದು ಬಿಡುವುದು ಮುಖ್ಯವಲ್ಲ ನಾಯಕನ ನಿರೀಕ್ಷೆ ಬೇಡ , ವ್ಯಕ್ತಿ, ಪಕ್ಷ ನೋಡದೇ ವಿಚಾರಕ್ಕೆ ಮತ ನೀಡಬೇಕು ಎಂದು ಹೇಳಿದ್ದೆ. ಇದು ಸರಿಯಲ್ಲವೇ ? ಈ ವ್ಯವಸ್ಥೆ ತರುವುದೇ ನಮ್ಮೆಲ್ಲರ ಜವಾಬ್ದಾರಿಯಲ್ಲವೇ  ಎಂದು ಉಪೇಂದ್ರ ಕೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com