ಗ್ರಾಮ ಪಂಚಾಯತ್ ಚುನಾವಣೆ ಮೇಲೆ ಸಮ್ಮಿಶ್ರ ಸರ್ಕಾರದ ಕರಿನೆರಳು: ಆತಂಕದಲ್ಲಿ ಕಾಂಗ್ರೆಸ್

: ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬ ನಾಣ್ಣುಡಿಯಂತೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಹಲವು ತಿಂಗಳುಗಳೇ ಕಳೆದರೂ ಅದರ ವ್ಯತಿರಿಕ್ತ ಪರಿಣಾಮ ಮಾತ್ರ ಇನ್ನು ಮುಗಿದಿಲ್ಲ.
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎಂಬ ನಾಣ್ಣುಡಿಯಂತೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡು ಹಲವು ತಿಂಗಳುಗಳೇ ಕಳೆದರೂ ಅದರ ವ್ಯತಿರಿಕ್ತ ಪರಿಣಾಮ ಮಾತ್ರ ಇನ್ನು ಮುಗಿದಿಲ್ಲ.

ಸಮ್ಮಿಶ್ರ ಸರ್ಕಾರದಿಂದಾಗಿಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತು, ಜೊತೆಗೆ ವಿಧಾನಸಭೆ ಉಪ ಚುನಾವಣೆಯಲ್ಲಿಯೂ 10 ಶಾಸಕರನ್ನ ಕಳೆದುಕೊಂಡಿತು.
ಹೀಗಾಗಿ ಗ್ರಾಮ ಪಂಚಾಯತ್ ಚುನಾವಣೆಯ ಮೇಲೂ ಸಮ್ಮಿಶ್ರ ಸರ್ಕಾರದ  ಪ್ರಭಾವ ಬೀರುವ ಸಾಧ್ಯತೆಯಿಂದ ಕಾಂಗ್ರೆಸ್ ಆತಂಕಕ್ಕೊಳಗಾಗಿದೆ.

9 ಜಿಲ್ಲೆಗಳ 141 ಗ್ರಾಮ ಪಂಚಾಯಿತಿಯ 173 ಸ್ಥಾನಗಳಿಗೆ  ಫೆಬ್ರವರಿ 9 ರಂದು ಚುನಾವಣೆ ನಡೆಯಲಿದೆ,  ಈ ಚುನಾವಣೆಗಳು ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ರಾಜಕೀಯ ಪಕ್ಷಗಳು ತಳ ಮಟ್ಟದ ಪ್ರಾಬಲ್ಯ ಸೂಚಿಸುವ ಚುನಾವಣೆಯಾಗಿದೆ.

ಬಿಜೆಪಿ ಬೆಂಬಲದಿಂದಾಗಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲುವು ಸಾಧಿಸಿದರು,  ಕೆಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಣಗೌಡ ಜಯಗಳಿಸಿದ್ದರು.  ಈ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಗಮನಾರ್ಹ ಮತಗಳು ಬಿಜೆಪಿ ಪಾಲಾಗಿದ್ದವು.

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡದ್ದು ತಪ್ಪಾಯಿತು,. ನಮಗೆ ಅಪಾರ ಪ್ರಮಾಣದಲ್ಲಿ ಮತ  ನಷ್ಟವಾಯಿತು. ಅದರಲ್ಲೂ ವಿಶೇಷವಾಗಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮತಗಳು ಬಿಜೆಪಿ ಪಾಲಾದವು, ನಮ್ಮ ಕಾರ್ಯಕರ್ತರು ಮತ್ತು ಮತದಾರರು ದಂಗೆ ಎದ್ದರು ಮತ್ತು ತಮ್ಮ ಮತಗಳನ್ನು ಬಿಜೆಪಿಗೆ ವರ್ಗಾಯಿಸಿದರು ಎಂದು ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.  

ಕೆ.ಆರ್ ಪೇಟೆಯಲ್ಲಿ  ಬಿಜೆಪಿ ಗೆಲುವು ಕಾಂಗ್ರೆಸ್ ಗೆ ಮತ್ತಷ್ಟು ಆತಂಕ ಹೆಚ್ಚಿಸಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿಲ್ಲ,  ಆದರೆ ಈ ಬಾಗದಿಂದ ಆಯ್ಕೆಯಾದ ನಾಯಕರು ಸಾಕಷ್ಟು ಪ್ರಭಾವಿಗಳಾಗಿದ್ದಾರೆ.  ಈ ನಾಯಕರು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಪಕ್ಷಾಂತರಗೊಂಡವರಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ  ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಕಾಂಗ್ರೆಸ್ ತಲೆ ಕೆಡಿಸಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com