ಮೈಸೂರಿನಲ್ಲಿ ಕುಳಿತು ಆರೋಪ ಮಾಡುವುದಲ್ಲ, ವಿಧಾನಸೌಧಕ್ಕೆ ಬನ್ನಿ ದಾಖಲೆ ಕೊಡ್ತೀವಿ: ಸೋಮಶೇಖರ್

ಮೈಸೂರಿನಲ್ಲಿ ಕುಳಿತುಕೊಂಡು ಆರೋಪ ಮಾಡುವುದಲ್ಲ, ವಿಧಾನಸೌಧಕ್ಕೆ ಬನ್ನಿ ದಾಖಲೆ ಕೊಡುತ್ತೇವೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿರುಗೇಟು ನೀಡಿದ್ದಾರೆ. 
ಸಚಿವ ಎಸ್.ಟಿ.ಸೋಮಶೇಖರ್
ಸಚಿವ ಎಸ್.ಟಿ.ಸೋಮಶೇಖರ್
Updated on

ಮೈಸೂರು: ಮೈಸೂರಿನಲ್ಲಿ ಕುಳಿತುಕೊಂಡು ಆರೋಪ ಮಾಡುವುದಲ್ಲ, ವಿಧಾನಸೌಧಕ್ಕೆ ಬನ್ನಿ ದಾಖಲೆ ಕೊಡುತ್ತೇವೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿರುಗೇಟು ನೀಡಿದ್ದಾರೆ. 

ಕೊರೋನಾ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೆಸಾರ್ಟ್ ನಲ್ಲಿ ಕುಳಿತು ಆರೋಪಗಳನ್ನು ಮಾಡಬೇಡಿ, ವಿಧಾನಸೌಧಕ್ಕೆ ಬನ್ನಿ ನಿಮಗೆ ಬೇಕಾದ ದಾಖಲೆಗಳನ್ನು ಕೊಡುತ್ತೇವೆಂದು ಹೇಳಿದ್ದಾರೆ. 

ಕೊರೋನಾ ವಿಚಾರದಲ್ಲಿ ಅವ್ಯವಹಾರ ಮಾಡುವವರು ಮನುಷ್ಯತ್ವ ಇಲ್ಲದವರು. ನಾವು ಇದೂವರೆಗೂ ವೆಚ್ಚ ಮಾಡಿರುವುದೇ ರೂ.550 ಕೋಟಿ ಮಾತ್ರ. ರೂ.2,300 ಕೋಟಿ ಅವ್ಯವಹಾರ ನಡೆದಿದೆ ಎಂದಿರುವುದು ಆಧಾರ ರಹಿತ ಆರೋಪವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com