ಸಿದ್ಧಿ ಜನಾಂಗಕ್ಕೆ ಒಲಿದು ಬಂತು ವಿಧಾನ ಪರಿಷತ್ ಸದಸ್ಯ ಪಟ್ಟ: ಶಾಂತರಾಮ ಸಿದ್ದಿ ಮೇಲ್ಮನೆಗೆ!

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿದ್ದಿ ಜನಾಂಗದ ವ್ಯಕ್ತಿಯೊಬ್ಬರು ಸದನದ ಮೇಲ್ಮನೆಯಾದ ವಿಧಾನ ಪರಿಷತ್ತನ್ನು ಪ್ರವೇಶಿಸುತ್ತಿದ್ದಾರೆ.
ಶಾಂತರಾಮ ಸಿದ್ದಿ
ಶಾಂತರಾಮ ಸಿದ್ದಿ

ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿದ್ದಿ ಜನಾಂಗದ ವ್ಯಕ್ತಿಯೊಬ್ಬರು ಸದನದ ಮೇಲ್ಮನೆಯಾದ ವಿಧಾನ ಪರಿಷತ್ತನ್ನು ಪ್ರವೇಶಿಸುತ್ತಿದ್ದಾರೆ.

ಶಾಂತರಾಮ ಬುದ್ನ ಸಿದ್ದಿ ಸೇರಿದಂತೆ ಐವರ ಹೆಸರುಗಳನ್ನು ಬಿಜೆಪಿಯಿಂದ ನಾಮ ನಿರ್ದೇಶನಗೊಳಿಸಿ ಕಳುಹಿಸಿದ್ದು ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ.ಈ ಮೂಲಕ ಸಿದ್ದಿ ಜನಾಂಗದ ಪ್ರತಿನಿಧಿಯೊಬ್ಬರು ಶಕ್ತಿ ಕೇಂದ್ರವನ್ನು ಪ್ರವೇಶಿಸುತ್ತಿದ್ದಾರೆ.

ಶಾಂತರಾಮ ಸಿದ್ದಿ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದರು. ಆರ್ ಎಸ್ಎಸ್ ನ ಬುಡಕಟ್ಟು ಅಭಿವೃದ್ಧಿ ಅಭಿಯಾನವಾದ ವನವಾಸಿ ಕಲ್ಯಾಣ ಪ್ರಕಲ್ಪದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಜವಾಬ್ದಾರಿ ಹುದ್ದೆ ಹೊಂದಿದ್ದರು.

ಪೂರ್ವ ಆಫ್ರಿಕಾದಿಂದ ಬಂದು ಭಾರತದಲ್ಲಿ ನೆಲೆಸಿರುವ ಸಿದ್ದಿ ಜನಾಂಗದವರು ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಗುಂಪಿಗೆ ಸೇರುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com