ಉಪ ಚುನಾವಣೆಯಲ್ಲಿ ಗೆದ್ದರೆ ಅತಿ ಹಿರಿಯ ಶಾಸಕನೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ ಟಿಬಿ ಜಯಚಂದ್ರ!

ಶಿರಾ ಉಪ ಚುನಾವಣೆಯಲ್ಲಿ ಒಂದು ವೇಳೆ ಗೆಲುವು ಸಾಧಿಸಿದರೇ 71 ವರ್ಷದ ಟಿಬಿ ಜಯಚಂದ್ರ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಟಿಬಿ ಜಯಚಂದ್ರ
ಟಿಬಿ ಜಯಚಂದ್ರ
Updated on

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ಒಂದು ವೇಳೆ ಗೆಲುವು ಸಾಧಿಸಿದರೇ 71 ವರ್ಷದ ಟಿಬಿ ಜಯಚಂದ್ರ ವಿಧಾನ ಸಭೆಯಲ್ಲಿ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸದ್ಯ ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರಾಗಿದ್ದಾರೆ ಅದಾದ ನಂತರದ ಸ್ಥಾನ ಜಯಚಂದ್ರ ಪಡೆಯಲಿದ್ದಾರೆ.

ಖರ್ಗೆ 1972 ರಲ್ಲಿ ವಿಧಾನಸಭೆ ಪ್ರವೇಶಿಸಿದರೇ ಜಯಚಂದ್ರ 1978 ರಲ್ಲಿ ವಿಧಾನಸಭೆ ಪ್ರವೇಶಿಸಿದರು. ಅವರು 27 ವರ್ಷ ವಯಸ್ಸಿನವರಾಗಿದ್ದಾಗ ಕಳ್ಳಂಬೆಳ್ಳ ವಿಧಾನ ಸಭೆ ಕ್ಷೇತ್ರದ ಮೂಲಕ ರಾಜಕೀಯ ಪ್ರವೇಶಿಸಿದರು. ಅದಾದ ನಂತರ ಕಳ್ಳಂಬೆಳ್ಳ ವಿಧಾನ ಸಭೆ ಕ್ಷೇತ್ರವನ್ನು 2008 ರಲ್ಲಿ ವಿಲೀನಗೊಳಿಸಲಾಯಿತು.

ಬಿಎಸ್ ಸಿ ಮತ್ತು ಕಾನೂನು ಪದವೀಧರರಾಗಿರುವ ಜಯಚಂದ್ರ 10ನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾಲ್ಕು ಬಾರಿ ಸೋತಿರುವ ಜಯಚಂದ್ರ ವಿಧಾನಸಭೆಯಲ್ಲಿ ಅತಿ ಹಿರಿಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 

ಅವರ ಪುತ್ರ ಟಿಜೆ ಸಂತೋಷ್ 2018  ವಿಧಾನಸಭೆ ಚುನಾವಣೆಯಲ್ಲಿ ಶಿರಾದಿಂದ ಸ್ಪರ್ಧಿಸಿದ್ದು ಸೋಲನುಭವಿಸಿದ್ದರು. ಅಪ್ಪ -ಮಗ ಇಬ್ಬರು ಸ್ಪರ್ಧಿಸುವುದು ಹಿಂದುಳಿದ ಸಮುದಾಯವಾದ ಕಾಡುಗೊಲ್ಲ ಮತ್ತು ಕುರುಬ ಸಮುದಾಯಕ್ಕೆ  ಇಷ್ಟವಿರಲಿಲ್ಲ. ಹೀಗಾಗಿ ಇಬ್ಬರಿಗೂ ಪಾಠ ಕಲಿಸಿದ್ದರು. ಜೆಡಿಎಸ್ ನ ಬಿ ಸತ್ಯ ನಾರಾಯಣ ಅವರಿಗೆ ಅನುಕಂಪದ ಮತಗಳು ಬಿದ್ದಿದ್ದವು.

ಶಿರಾ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆದಿವೆ, ಟಿಬಿ ಜಯಚಂದ್ರ 2004 ಮತ್ತು 2018 ರ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಸದ್ಯ ಅವರ ರಾಜಕೀಯ ವೈರಿ ಕೆಎನ್ ರಾಜಣ್ಣ ಜಯಚಂದ್ರ ವಿರುದ್ಧ ಗುಟುರು ಹಾಕಿದ್ದಾರೆ, ಪರಿಸ್ಥಿತಿ ಹೀಗಿದ್ದರೂ ತಾವು ಗೆಲ್ಲುವುದಾಗಿ ಜಯಚಂದ್ರ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com