ಶಿರಾದಲ್ಲಿ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳಿಗೆ ತಲೆನೋವಾದ ಸ್ವತಂತ್ರ ಅಭ್ಯರ್ಥಿಗಳು

ಶಿರಾ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು 15 ಮಂದಿ ಅಂತಿಮವಾಗಿ ಸ್ಪರ್ಧಾಕಣದಲ್ಲಿದ್ದಾರೆ. ನಿನ್ನೆ ಇಬ್ಬರು ಅಭ್ಯರ್ಥಿಗಳು ನಾಮಪತ್ರವನ್ನು ಹಿಂತೆಗೆದುಕೊಂಡರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು: ಶಿರಾ ಉಪ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು 15 ಮಂದಿ ಅಂತಿಮವಾಗಿ ಸ್ಪರ್ಧಾಕಣದಲ್ಲಿದ್ದಾರೆ. ನಿನ್ನೆ ಇಬ್ಬರು ಅಭ್ಯರ್ಥಿಗಳು ನಾಮಪತ್ರವನ್ನು ಹಿಂತೆಗೆದುಕೊಂಡರು.

ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಜೋಕರ್ ಯಾರಾಗುತ್ತಾರೆ ಎಂಬ ಕುತೂಹಲದಲ್ಲಿ ರಾಜಕೀಯ ನಾಯಕರೂ, ಮತದಾರರು ಕೂಡ ಇದ್ದಾರೆ. 2018ರ ಉಪ ಚುನಾವಣೆಯಲ್ಲಿ, ಕಾಂಗ್ರೆಸ್ ನ ಟಿ ಬಿ ಜಯಚಂದ್ರ ಗಳಿಸಿದ್ದ ಮತಗಳು 63 ಸಾವಿರದ 973 ಅವರು ಜೆಡಿಎಸ್ ನ ಬಿ ಸತ್ಯನಾರಾಯಣ(74,338) ವಿರುದ್ಧ 10 ಸಾವಿರದ 365 ಮತಗಳಿಗೆ ಸೋಲನುಭವಿಸಿದ್ದರು. ಸ್ವತಂತ್ರ ಅಭ್ಯರ್ಥಿ ಸಿ ಎಂ ನಾಗರಾಜು ಒಬ್ಬರೇ 14 ಸಾವಿರದ 468 ಮತಗಳನ್ನು ಗಳಿಸಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ ಡಿ ದೇವೇಗೌಡ 13,339 ಮತಗಳ ಅಂತರದಿಂದ ಬಿಜೆಪಿಯ ಜಿ ಎಸ್ ಬಸವರಾಜು ವಿರುದ್ಧ ಸೋತಿದ್ದರು. ಸಿಪಿಐ ಅಭ್ಯರ್ಥಿ ಎನ್ ಶಿವಣ್ಣ 17 ಸಾವಿರದ 227 ಮತಗಳನ್ನು ಗೆದ್ದಿದ್ದರು.

ಈ ಬಾರಿ ಸಿಪಿಐ ಗಿರೀಶ್, ಕರ್ನಾಟಕ ರಾಷ್ಟ್ರ ಸಮಿತಿ ಒಬಳೇಶಪ್ಪ ಬಿ ಟಿ ಅವರನ್ನು ಕಣಕ್ಕಿಳಿಸಿದೆ. ರಿಪಬ್ಲಿಕ್ ಸೇನೆ ಪ್ರೇಮಕ್ಕ ಅವರನ್ನು ಕಣಕ್ಕಿಳಿಸಿದೆ, ರೈತ ಭಾರತೀ ಪಾರ್ಟಿ ತಿಮ್ಮಕ್ಕ ಅವರನ್ನು ಕಣಕ್ಕಿಳಿಸಿದೆ.

ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಬೆಂಬಲಿಗ ಯೆಲಪನಹಳ್ಳಿ ಜಯಣ್ಣ ಮತ್ತು ಬಿಜೆಪಿ ಅಭ್ಯರ್ಥಿ ಡಾ ಸಿ ಎಂ ರಾಜೇಶ್ ಗೌಡ ಅವರ ತಂದೆ ಸಿ ಪಿ ಮೂಡಲಗಿರಿಯಪ್ಪ ಕೂಡ ಕಣದಲ್ಲಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಕೆಲವು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಭಾರೀ ಪ್ರಯತ್ನ ಮಾಡಿತ್ತು, ಆದರೆ ಅದು ಪ್ರಯೋಜನವಾಗಿರಲಿಲ್ಲ. ತಿಮ್ಮರಾಜು ಗೌಡ ಮತ್ತು ಯುವ ನಾಯಕ ನಿಸಾರ್ ಅಹ್ಮದ್ ನಾಮಪತ್ರ ಹಿಂತೆಗೆದುಕೊಂಡಿದ್ದಾರಷ್ಟೆ.

ಬಹುಜನ ಸಮಾಜ ಪಕ್ಷ ಯಾವ ಅಭ್ಯರ್ಥಿಯನ್ನು ಕೂಡ ಕಣಕ್ಕಿಳಿಸದಿರುವುದು ಜಯಚಂದ್ರ ಅವರಿಗೆ ಸ್ವಲ್ಪ ನಿರಾಳವಾಗಿದೆ. ಜೆಡಿಯುನಿಂದ ಮಾಜಿ ಸಿಎಂ ಜೆ ಹೆಚ್ ಪಟೇಲ್ ಅವರ ಪುತ್ರ ಮಹಿಮ ಪಟೇಲ್ ಯಾವ ಅಭ್ಯರ್ಥಿಯನ್ನು ಕೂಡ ಕಣಕ್ಕಿಳಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com