ಉಪ ಚುನಾವಣೆಗಾಗಿ ಸಿದ್ದರಾಮಯ್ಯ ಪ್ರಚಾರ
ಉಪ ಚುನಾವಣೆಗಾಗಿ ಸಿದ್ದರಾಮಯ್ಯ ಪ್ರಚಾರ

ಉಪಚುನಾವಣೆ ಮಾತ್ರವಲ್ಲ: ಮುಂದಿನ ತಿಂಗಳುಗಳಲ್ಲಿ ಎದುರಾಗಲಿವೆ ಸಾಲು ಸಾಲು ಚುನಾವಣೆಗಳು!

ಕೊರೋನಾ ಕರಿನೆರಳಿನಲ್ಲಿಯೂ ರಾಜ್ಯದಲ್ಲಿ ಜನತೆ ಹಬ್ಬದ ಮೂಡ್ ನಲ್ಲಿದ್ದಾರೆ. ಇದರ ಜೊತೆಗೆ ವಿಧಾನಸಭೆ ಉಪಚುನಾವಣೆ ಮತ್ತು ಪರಿಷತ್ ಚುನಾವಣೆಗಳು ನಡೆಯುತ್ತಿದೆ.
Published on

ಬೆಂಗಳೂರು: ಕೊರೋನಾ ಕರಿನೆರಳಿನಲ್ಲಿಯೂ ರಾಜ್ಯದಲ್ಲಿ ಜನತೆ ಹಬ್ಬದ ಮೂಡ್ ನಲ್ಲಿದ್ದಾರೆ. ಇದರ ಜೊತೆಗೆ ವಿಧಾನಸಭೆ ಉಪಚುನಾವಣೆ ಮತ್ತು ಪರಿಷತ್ ಚುನಾವಣೆಗಳು ನಡೆಯುತ್ತಿದೆ.

ಕೇವಲ ಉಪಚುನಾವಣೆ ಮಾತ್ರವಲ್ಲ ರಾಜ್ಯದಲ್ಲಿ ಮುಂದಿನ  ಆರರಿಂದ 8 ತಿಂಗಳಲ್ಲಿ ಕನಿಷ್ಠ ಪಕ್ಷ ಆರು ಚುನಾವಣೆಗಳು ಎದುರಾಗಲಿವೆ. ಗ್ರಾಮ ಪಂಚಾಯತ್ ಮತ್ತು ಲೋಕಸಭೆ ಉಪಚನಾವಣೆಗಳು ನಡೆಯಲಿವೆ. 

ನವೆಂಬರ್ 3ರಂದು ಆರ್ ನಡೆಯುವ ಉಪ ಚುನಾವಣೆಗಾಗಿ ಆರ್ ನಗರ ಮತ್ತು ಶಿರಾದಲ್ಲಿ ಈಗಾಗಲೇ ಅಬ್ಬರದ ಪ್ರಚಾರದ ಆರಂಭವಾಗಿದೆ.  ನಾಲ್ಕು ವಿಧಾನ ಪರಿಷತ್ ಸ್ಥಾನಕ್ಕೆ  ಚುನಾವಣೆ ನಡೆಯುತ್ತಿದ್ದು, ಎರಡು ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರಗಳಿಗೆ ಅಕ್ಟೋಬರ್ 28 ರಂದು ಚುನಾವಣೆ ನಡೆಯಲಿದೆ.

ಹೈಕೋರ್ಟ್ ನಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇನ್ನೂ ಮೇ 2021 ಕ್ಕೆ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರವದಿ ಮುಗಿಯಲಿದೆ, ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆ ನಡೆಸಬೇಕಿದೆ, 

ಇದರ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನೇಮಿಸಿರುವ ಆಡಳಿತಾಧಿಕಾರಿಗಳ ಅವಧಿ ಮುಗಿಯಲಿದ್ದು, ಚುನಾವಣೆ ನಡೆಸಬೇಕಾಗಿದೆ. ಸದ್ಯ ರಾಜ್ಯ ಸರ್ಕಾರ ವಾರ್ಡ್ ಗಳ ಪುನರ್ ವಿಂಗಡನೆ ಮಾಡುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com