ಆರ್ ಆರ್ ನಗರ ಉಪಚುನಾವಣೆಯಲ್ಲಿ ನಾಯ್ಡು v/s ಒಕ್ಕಲಿಗ: ಪ್ರಚಾರದಲ್ಲಿ 'ಡಿ' ಬಾಸ್ ಹವಾ

ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಸ್ಟಾರ್ ಗಳ ಹವಾ ಶುರುವಾಗಿದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಖಷ್ಬೂ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದರು.
ದರ್ಶನ್ ಪ್ರಚಾರ
ದರ್ಶನ್ ಪ್ರಚಾರ

ಬೆಂಗಳೂರು: ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಸ್ಟಾರ್ ಗಳ ಹವಾ ಶುರುವಾಗಿದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಖಷ್ಬೂ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದರು.

ದರ್ಶನ್ ತೆರೆದ ವಾಹನದಲ್ಲಿ ಹಲವು ಸ್ಥಳಗಳಲ್ಲಿ ಪ್ರಚಾರ ನಡೆಸಿದ ದರ್ಶನ್ ನೋಡಲು ಅಭಿಮಾನಿಗಳು ಮತ್ತು ಬೆಂಬಲಿಗರು ಮುಗಿ ಬಿದ್ದಿದ್ದರು. ಶುಕ್ರವಾರ ಈದ್ ಮಿಲಾದ್ ರಜೆ ಇದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.

2011 ರಲ್ಲಿ ದರ್ಶನ್ ಬಾಸ್ ಎಂಬ ಸಿನಿಮಾದಲ್ಲಿ ನಟಿಸಿದ್ದರು. ದಾರಿಯುದ್ದಕ್ಕೂ ಬಾಸ್ ಬಾಸ್ ಎಂಬ ಘೋಷಣೆ ಕೇಳುತ್ತಿದ್ದವು, ಮಹಿಳೆಯರು ಮಂಗಳಾರತಿ ಎತ್ತಿದರು, ಹಲವು ಮಂದಿ ಹೂಮಳೆ ಸುರಿಸಿದರು.

ಮುನಿರತ್ನ ಪರ ದರ್ಶನ್ ಪ್ರಚಾರಕ್ಕಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಜಾತಿ  ರಾಜಕಾರಣದ ಬಗ್ಗೆ ಮಾತನಾಡಲು ಆರಂಭಿಸಿದರು. ಬಲಿಜ ಕಾಪು ಜನಾಂಗದ ದರ್ಶನ್ ನಾಯ್ಡು ಸಮುದಾಯದ ಮುನಿರತ್ನ ಅವರ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಇದು ನಾಯ್ಡು ಮತ್ತು ಒಕ್ಕಲಿಗರ ನಡುವಿನ ಹೋರಾಟ ಎಂಬಂತೆ ಬಿಂಬಿಸಿದರು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒಕ್ಕಲಿಗರಾಗಿದ್ದು, ಸ್ಥಳೀಯರಾಗಿದ್ದಾರೆ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ದರ್ಶನ್ ಮತ್ತು ಮುನಿರತ್ನ ಅವರು ಆಂಧ್ರ ಪ್ರದೇಶ
ಮೂಲದವರಾಗಿದ್ದು, ಹೊರಗಿನವರಾಗಿದ್ದಾರೆ ಎಂದು ಪಾಯಿಂಟ್ ಮಾಡುವ ಮೂಲಕ ಮತದಾರರಿಗೆ ತಿಳಿಸುತ್ತಿದ್ದರು.

ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ಆರ್ ಆರ್ ನಗರ ಕ್ಷೇತ್ರಕ್ಕೆ ಡಿಕೆಶಿವಕುಮಾರ್ ಅವರು ಹೊರಗಿನವರು, ಅವರು ಕನಕಪುರ ಕ್ಷೇತ್ರವರೇ ಹೊರತು ಇಲ್ಲಿನವರಲ್ಲ ಎಂದು ಕಿಡಿಕಾರಿದರು. 

ಕಾಂಗ್ರೆಸ್ ಮತ್ತು ಬಿಜೆಪಿ ಅಬ್ಬರದ ಪ್ರಚಾರ ನಡೆಸುತ್ತಿದ್ದರೇ ಜೆಡಿಎಸ್ ಅಭ್ಯರ್ಥಿ ವಿ ಕೃಷ್ಣಮೂರ್ತಿ ಮಗುಮ್ಮಾದ್ದಿದ್ದು ವಿಶೇಷವಾಗಿತ್ತು. ಆದರೆ ಈ ಕ್ಷೇತ್ರದ ಹಿಂದಿನ ಚುನಾವಣೆಗಳಲ್ಲಿ ಪಕ್ಷವು ಸಮಂಜಸವಾಗಿ ಉತ್ತಮ ಸಾಧನೆ ತೋರಿದ್ದು, ಪಕ್ಷದ ಅಭ್ಯರ್ಥಿ ಜಿ ಹೆಚ್ ರಾಮಚಂದ್ರ ಅವರು 2013 ರಲ್ಲಿ 50,000 ಮತಗಳನ್ನು ಮತ್ತು 2018 ರಲ್ಲಿ 60,000 ಮತಗಳನ್ನು ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com