ಅವಿಶ್ವಾಸ ನಿರ್ಣಯ ಮಂಡನೆ: ತನ್ನ ಶಾಸಕರಿಗೆ ವಿಪ್ ಜಾರಿಗೊಳಿಸಿ, ಧ್ವನಿಮತಕ್ಕೆ ಒಪ್ಪಿದ ಕಾಂಗ್ರೆಸ್

ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಶನಿವಾರ ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ವಿಧೇಯಕ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಶಾಸಕರಿಪೆ ವಿಪ್ ಜಾರಿಗೊಳಿಸಿದ್ದು, ಕೊರೋನಾವೈರಸ್ ಪರಿಣಾಮ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಶನಿವಾರ ಭೂ ಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ವಿಧೇಯಕ ಮಂಡನೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಶಾಸಕರಿಪೆ ವಿಪ್ ಜಾರಿಗೊಳಿಸಿದ್ದು, ಕೊರೋನಾವೈರಸ್ ಪರಿಣಾಮ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. 

ಅವಿಶ್ವಾಸ ನಿರ್ಣಯ ಮಂಡನೆ ಹಿನ್ನೆಲೆಯಲ್ಲಿ ಧ್ವನಿಮತಕ್ಕೆ ಹಾಕುವ ಕುರಿತು ಸ್ಪೀಕರ್ ಮನವಿ ಮಾಡಿಕೊಂಡರು. ಬಳಿಕ ಸಚಿವ ಮಾಧುಸ್ವಾಮಿ ಕೂಡ ವಿರೋಧ ಪಕ್ಷದ ಬಳಿ ಮನವಿ ಮಾಡಿಕೊಂಡರು. 

ಕಡ್ಡಾಯ ಮಾಡುವುದಾದರೆ ಪಿಪಿಇ ಕಿಟ್ ಹಾಕಿ ಕರೆದುಕೊಂಡು ಬರಬೇಕಾಗುತ್ತದೆ. ಈ ಕಾರಣಕ್ಕಾಗಿ ವಿರೋಧ ಪಕ್ಷ ಸಹಕಾರ ನೀಡಬೇಕು. ಮತಕ್ಕೆ ಹಾಕುವುದಾದರೆ ನಮ್ಮ ಸದಸ್ಯರನ್ನು ತಯಾರು ಮಾಡಿದ್ದೇವೆಂದು ಹೇಳಿದರು. 

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ಎರಡೂ ಪಕ್ಷದ ಶಾಸಕರು ಕೊರೋನಾಗೆ ಸೋಂಕಿಗೊಳಗಾಗಿದ್ದಾರೆ. ನಮಗೂ ಸಾಮಾಜಿಕ ಜವಾಬ್ದಾರಿ ಇದೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿ ಮತಕ್ಕೆ ಹಾಕುವಂತೆ ಸಾಮಾನ್ಯವಾಗಿ ಬೇಡಿಕೆ ಇಡುತ್ತೇವೆ. ಮನುಷ್ಯತ್ವ, ಜೀವನ ಮುಖ್ಯ ಎಂಬ ಕಾರಣದಿಂದ ಮಾನವೀಯ ದೃಷ್ಟಿಯಿಂದ ನಿಮ್ಮ ಮನವಿ ಮೇಲೆಗೆ ಮತ ವಿಭಜನೆ ಬದಲಾಗಿ ಧ್ವನಿ ಮತಕ್ಕೆ ಹಾಕುತ್ತೇವೆಂದು ಹೇಳಿದರು. 

ಇದೇ ವೇಳೆ ಡಿಜೆ ಹಳ್ಳಿ ಗಲಭೆ ಪ್ರಕರಣ ಕೂಡ ಅವಿಶ್ವಾಸ ನಿರ್ಣಯ ಚರ್ಚೆಯೊಳಗೆ ಮಾತನಾಡುತ್ತೇನೆಂದು ಹೇಳಿದ ಸಿದ್ದರಾಮಯ್ಯ ಅವರು, ಅವಿಶ್ವಾಸ ನಿರ್ಣಯ ಮಂಡನೆಯಿಂದ ನಮಗೆ ಶಕ್ತಿ ಎಂದು ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ. ನಿಮಗೆ ಶಕ್ತಿ ಕೊಡುವುದಕ್ಕಾಗಿಯೇ ನಾವು ಸದನದಲ್ಲಿ ಅವಿಶ್ವಾಸ ನಿರ್ಣಯ ತಂದಿದ್ದೇವೆ ಎಂದು ತಿಳಿಸಿದರು. 

ಅಲ್ಲದೇ ನಾನು ಯಡಿಯೂರಪ್ಪ ಇಬ್ಬರೂ ಒಟ್ಟಿಗೆ ರಾಜಕೀಯಕ್ಕೆ ಬಂದವರು, ಅವರ ಹುಟ್ಟುಹಬ್ಬಕ್ಕೆ ಹೋಗಿ ಒಳ್ಳೆಯ ಮಾತನಾಡಿದ್ದೇನೆ. ವೈಯಕ್ತಿಕ ಸಂಬಂಧ ಬೇರೆ, ರಾಜಕೀಯ ಸಂಬಂಧದಲ್ಲಿ ರಾಜಿಯಿಲ್ಲ ಎಂದು ಸ್ಪಷ್ಟಪಡಿಸಿದರು. 

ಶಾಸಕರಿಗೆ ಕಾಂಗ್ರೆಸ್ ವಿಪ್ ಜಾರಿ
ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ಮಸೂದೆ ಹಾಗೂ ಎಪಿಎಂಸಿ ವಿಧೇಯಕ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಜಾರಿ ಮಾಡಿದೆ. 

ವಿಧಾನಸಭೆ ಮತ್ತು ಪರಿಷತ್ ಅಧಿವೇಶನಕ್ಕೆ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಾಗಲು ಕಾಂಗ್ರೆಸ್ ಸೂಚಿಸಿದೆ. ವಿಧಾನಸಭೆ, ಪರಿಷತ್ ಕಾಂಗ್ರೆಸ್ ಶಾಸಕರಿಗೆ ಪ್ರತಿಪಕ್ಷದ ಮುಖ್ಯ ಸಚೇತಕರು ವಿಪ್ ಜಾರಿ ಮಾಡಿದ್ದಾರೆ.

ಭೂ ಕಂದಾಯ ತಿದ್ದುಪಡಿ ಮಸೂದೆ ರೈತರ ಪಾಲಿಗೆ ಮರಣ ಶಾಸನ: ಸಿದ್ದರಾಮಯ್ಯ
ಭೂ ಕಂದಾಯ ಸುಧಾರಣಾ ತಿದ್ದುಪಡಿ ಎರಡನೆ ವಿದೇಯಕ ರೈತರ ಪಾಲಿಗೆ ಮರಣ ಶಾಸನ ಎಂದು ವಿಧಾನನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಈ ಕುರಿತ ಚರ್ಚೆಯ ಮೇಲೆ ಮಾತನಾಡಿದ ಅವರು, ಹಳ್ಳಿಗಾಡಿನ ಆರ್ಥಿಕತೆ ಹಾಳಾಗಲಿದೆ. ರೈತರನ್ನು ದಿವಾಳಿ ಅಂಚಿಗೆ ನೂಕಲಿದೆ . ದೇವರಾಜ ಅರಸರ ಕಾಲದ ಕಾಯಿದೆಯ ಆತ್ಮವನ್ನೆ ಕೊಲ್ಲಲಿದೆ ಎಂದರು . ಕಾಯಿದೆ ವಿರುದ್ಧ ರೈತರು ಮತ್ತು ಕಾರ್ಮಿರಕರು ಸಿಡಿದೆದ್ದಾರೆ ಇದಕ್ಕಾಗಿ ಇದೆ 28 ರಂದು ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ ಇದು ನಿಜಕ್ಕೂ ದುರುದ್ಧೇಶದ ತಿದ್ದಪಡಿ ಮಸೂದೆಯಾಗಿದೆ, ಜನ ವಿರೋಧಿಯಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com