ಕೊರೋನಾದಿಂದ ಆರ್ಥಿಕ ಮುಗ್ಗಟ್ಟು: ಸಚಿವರುಗಳ 21 ಹೊಸ ಇನ್ನೋವಾ ಕ್ರಿಸ್ಟಾ ಖರೀದಿಗೆ ಸಿಎಂ ಬ್ರೇಕ್?

ರಾಜ್ಯ ಎದುರಿಸುತ್ತಿರುವ ಭೀಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಎದುರಿಸುತ್ತಿರುವ ಭೀಕರ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

ಇತ್ತೀಚೆಗೆ ನಡೆಸಿದ ಸರಣಿ ಸಭೆಗಳಲ್ಲಿ ಖರ್ಚನ್ನು ಕಡಿಮೆ ಮಾಡುವ ನಿಟ್ಚಿನಲ್ಲಿ ಕಟ್ಟಿುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ, ಹೀಗಾಗಿ ತಮ್ಮ ಸಂಪುಟದ ಸಚಿವರುಗಳಿಗಾಗಿ 21 ಹೊಸ ಇನ್ನೋವಾ ಕ್ರಿಸ್ಟಾ ಕಾರುಗಳ ಖರೀದಿಯನ್ನು ರದ್ದು ಪಡಿಸಿದ್ದಾರೆ.

ಯಡಿಯೂರಪ್ಪ ಅವರ  ಕಾವೇರಿ  ನಿವಾಸದ ನವ ನವೀಕರಣ ಒಂದು ತಿಂಗಳ ಹಿಂದೆ ಪೂರ್ಣಗೊಂಡಿತು, ಆದರೆ ಅಧಿಕಾರಿಗಳು ನಿವಾಸಗಳು ಮತ್ತು ಮಂತ್ರಿಗಳು  ಕಚೇರಿಗಳ ಎಲ್ಲಾ ನವೀಕರಣಗಳನ್ನು ಸ್ಥಗಿತಗೊಳಿಸಲಾಗಿದೆ.

ತಮ್ಮ ಮನೆ ಮತ್ತು ಕಚೇರಿಯೆ ವಾಸ್ತು ರಿಪೇರಿ ಮಾಡಿಸಿಕೊಳ್ಳಲು ಹವಣಿಸುತ್ತಿದ್ದವರು ಹಾಗೂ ಪೀಠೋಪಕರಣಕ್ಕಾಗಿ ಇನ್ನು ಕೆಲ ದಿನಗಳ ಕಾಲ ಕಾಯಬೇಕಾಗಿದೆ.

ಸಿಎಂ ಎಲ್ಲಾ ವೆಚ್ಚ ಕಡಿತವನ್ನು ಪ್ರೋತ್ಸಾಹಿಸುತ್ತಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಸಲು ಗಮನ ಹರಿಸಲಿದ್ದಾರೆ. ಬಜೆಟ್ ನಲ್ಲಿ ಘೋಷಿಸಿದ್ದ ನೀರಾವರಿ ಮತ್ತಿತರ ದೊಡ್ಡ ದೊಡ್ಡ ಯೋಜನೆಗಳನ್ನು ಸದ್ಯಕ್ಕೆ ತಡೆ ಹಿಡಿಯಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com